ದೊಡ್ಮನೆ ಆಟದ ಪರದೆ ಎಳೆಯಲು ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ಫಿನಾಲೆಗೆ (Bigg Boss Kannada 10) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಇದೀಗ ಬಿಗ್ ಬಾಸ್ ಶೋನಿಂದ ಡ್ರೋನ್ ಪ್ರತಾಪ್ (Drone Prathap) ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.
- Advertisement 2
ಬಿಗ್ ಬಾಸ್ಗೆ ಕಾಲಿಡುವ ಮುನ್ನ ಡ್ರೋನ್ ಪ್ರತಾಪ್ ಸಾಕಷ್ಟು ಕಾಂಟ್ರವರ್ಸಿ, ಟ್ರೋಲ್ಗೆ ಗುರಿಯಾಗಿದ್ದರು. ಸಾಕಷ್ಟು ನಿಂದನೆಗೆ ಪ್ರತಾಪ್ ಒಳಗಾಗಿದ್ದರು. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಘಟಾನುಘಟಿ ಸ್ಪರ್ಧಿಗಳ ನಡುವೆ ಫಿನಾಲೆಗೆ ಹೋಗುವ ಮೂಲಕ ಠಕ್ಕರ್ ಕೊಟ್ಟಿದ್ದರು. ಇದನ್ನೂ ಓದಿ:ತನ್ನ ಬಗ್ಗೆ ಮಹಿಳೆಯರಿಗಿರೋ ಅಭಿಪ್ರಾಯ ಕೇಳಿ ವಿನಯ್ ಗೌಡ ಶಾಕ್
- Advertisement 3
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಮಾಹಿತಿ ಪ್ರಕಾರ, ಡ್ರೋನ್ ಪ್ರತಾಪ್ ಆಟಕ್ಕೆ ಬಿಗ್ ಬಾಸ್ (Bigg Boss Kannada 10) ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಟಾಪ್ 2ನಲ್ಲಿ ಸಂಗೀತಾ, ಕಾರ್ತಿಕ್ ಇದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ ಎಂಬುದನ್ನು ಬಿಗ್ ಬಾಸ್ ಫಿನಾಲೆ ಎಪಿಸೋಡ್ ಪ್ರಸಾರವಾಗುವವರೆಗೂ ಕಾಯಬೇಕಿದೆ.
- Advertisement 4
ಸದ್ಯ ಪ್ರತಾಪ್ ದೊಡ್ಮನೆ ಆಟದಿಂದ ಔಟ್ ಆಗಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.