-ಅಪ್ಪ ಮೈಸೂರಿಗೆ ಹೋದ್ರೆ ಅಮ್ಮನಿಗಾಗಿ ಕ್ಯೂನಲ್ಲಿ ನಿಂತು ಸ್ವೀಟ್ಸ್ ತಂದು ಕೊಡ್ತಾ ಇದ್ದರು
-ಅಪ್ಪ ಹಣೆಗೆ ಕುಂಕುಮ ಇಟ್ಟು, ಹೂ ಮುಡಿಸಿದ ಕೂಡಲೇ ಅಮ್ಮ ಪ್ರಾಣ ಬಿಟ್ಟರು
ಬೆಂಗಳೂರು: ಅಪ್ಪ ಪ್ರಧಾನಿಯಾದಾಗ ಅಮ್ಮ ರಾಜ್ಯ ಬಿಟ್ಟು ಹೋಗ್ಬೇಡಿ, ಇಲ್ಲಿನ ಜನರ ಸೇವೆ ಮಾಡಿ ಅಂದಿದ್ರು ಎಂದು ದೇವೇಗೌಡರ (HD Devegowda) ಪುತ್ರಿಯರಾದ ಅನಸೂಯ-ಶೈಲಜಾ ಅವರು ತಾಯಿ ಚೆನ್ನಮ್ಮನನ್ನು ನೆನೆದು ಭಾವುಕರಾಗಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಪ್ಪ ಪ್ರಧಾನಿ ಅಭ್ಯರ್ಥಿ ಆದಾಗ ಮೊದಲು ಅಮ್ಮನಿಗೆ ಫೋನ್ ಮಾಡಿ ಹೇಳಿದ್ರು. ಆದರೆ ಅಮ್ಮ ರಾಜ್ಯ ಬಿಟ್ಟು ಹೋಗಬೇಡಿ. ಜನರ ಸೇವೆ ಮಾಡಿ ಅಂದಿದ್ರು. ಅಪ್ಪ ವಿಪಕ್ಷ ನಾಯಕ ಆಗಿದ್ದಾಗ ಅವರೇ ಕಾರ್ ಡ್ರೈವ್ ಮಾಡಿಕೊಂಡು ಅಮ್ಮ ನಮ್ಮಿಬ್ಬರನ್ನು ಊಟಕ್ಕೆ ಕರೆದುಕೊಂಡು ಹೋಗಿ ವಿಧಾನಸೌಧ ತೋರಿಸಿಕೊಂಡು ಬರ್ತಾ ಇದ್ದರು. ಮದುವೆಗೆ ಮುನ್ನ ಒಂದು ಬಾರಿ ಅಪ್ಪ-ಅಮ್ಮ ನಾವು ಒಟ್ಟಾಗಿ ಮದ್ರಾಸ್‌ಗೆ ಹೋಗಿದ್ವಿ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: `ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಚಿತ್ರದ ಟೀಸರ್ ರಿಲೀಸ್
ಅಮ್ಮನಿಗೆ ಸ್ವಂತ ಮನೆ ಮಾಡಿಕೊಳ್ಳಬೇಕು ಎಂಬ ಆಸೆ ಇತ್ತು. ಬಾಡಿಗೆ ಮನೆಗಾಗಿ ಹಲವು ಕಡೆ ಓಡಾಡಿದ್ರು. ಯಾರು ಬಾಡಿಗೆ ಮನೆ ಕೊಡಲಿಲ್ಲ. ಕೆಲವರು ರಾಜಕೀಯದವರಿಗೆ ಮನೆ ಕೊಡಲ್ಲ ಅಂತ ನಿರಾಕರಣೆ ಮಾಡಿದ್ರು. ಬಾಡಿಗೆ ಯಾರ್ ಕಟ್ಟುತ್ತಾರೆ ಅಂತ ಪ್ರಶ್ನೆ ಮಾಡ್ತಿದ್ರು. ಇದರಿಂದ ಅಮ್ಮನಿಗೆ ನೋವಾಗಿತ್ತು. ಕೊನೆಗೆ ಒಂದು ಮನೆ ಮಾಡಲು ಅಪ್ಪಾಜಿ ಅನುಮತಿ ಕೊಟ್ಟರು. ಅದಾದ ಬಳಿಕ ಎಲ್ಲರು ಸೇರಿ ಮನೆ ಕಟ್ಟಿ ಕೊಟ್ಟೆವು. 5 ವರ್ಷ ಅಮ್ಮ-ಅಪ್ಪ ಆ ಮನೆಯಲ್ಲಿ ಇದ್ದರು ಎಂದು ಭಾವುಕರಾಗಿದ್ದಾರೆ.ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ಮಳೆ – ಜು.25ರಂದು ಶಾಲಾ-ಕಾಲೇಜುಗಳಿಗೆ ರಜೆ
ಅಮ್ಮನಿಗೆ ವಿದ್ಯೆ ಬಗ್ಗೆ ಗೌರವ ಇತ್ತು. ಸಂಜೆ 6 ಗಂಟೆಯಿಂದ 8:30ವರೆಗೆ ನಾವು ಓದಬೇಕು ಅಂತ ಅಮ್ಮ ಟೈಂ ಟೇಬಲ್ ಹಾಕಿ ಕೊಟ್ಟಿದ್ರು. ಅಮ್ಮನಿಗೆ ಅರಿಶಿನ-ಕುಂಕುಮ, ಹೂ ಅಂದರೆ ಇಷ್ಟ. ಮಲ್ಲಿಗೆ ಮತ್ತು ಸಂಪಿಗೆ ಹೂ ಜಾಸ್ತಿ ಇಷ್ಟ. ರೇಷ್ಮೆ ಸೀರೆ ಅಂದರೆ ಇಷ್ಟ. ನಿತ್ಯ ಸೀರೆ ಉಟ್ಟು ತಲೆಯಲ್ಲಿ ಹೂ ಇರಲೇಬೇಕು. ಹಣೆಯಲ್ಲಿ ಯಾವಾಗಲು ಹೂ ಮತ್ತು ಕುಂಕುಮ ಇಡಬೇಕಿತ್ತು. ಅಪ್ಪ ಮೈಸೂರಿಗೆ ಹೋದ್ರೆ ಅಮ್ಮನಿಗಾಗಿ ಗುರು ಸ್ವೀಟ್ಸ್ ತಂದು ಕೊಡ್ತಾ ಇದ್ದರು. ಕ್ಯೂನಲ್ಲಿ ನಿಂತು ಅಪ್ಪ ಸ್ವೀಟ್ ತರುತ್ತಿದ್ದರು. ಮೈಸೂರು ಪಾಕ್, ಮಲ್ಲಿಗೆ ಹೂ, ಮೈಸೂರು ಎಲೆ ಅಮ್ಮನಿಗಾಗಿ ತರದೇ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ: ಕಾವೇರಿ, ಮೇಕೆದಾಟು ವಿಚಾರವಾಗಿ ತಮಿಳುನಾಡಿನೊಂದಿಗೆ ಸಂಧಾನಕ್ಕೆ ಮುಂದಾದ ಕರ್ನಾಟಕ
ನಿತ್ಯ ಪೂಜೆ ಮಿಸ್ ಆಗ್ತಾ ಇರಲಿಲ್ಲ. 365 ದಿನವೂ ಬಿಲ್ವಪತ್ರ, ಗರಿಕೆ, ತುಳಸಿ ಪೂಜೆಗೆ ಇರಬೇಕಿತ್ತು. ಅಮ್ಮ ಶಿವನ ರಾಜರಾಜೇಶ್ವರಿ ದೇವಾಲಯಕ್ಕೆ ಹೋಗೋದು ಮಿಸ್ ಆಗ್ತಾ ಇರಲಿಲ್ಲ. ಅಮ್ಮ-ಅಪ್ಪ ಯಾವತ್ತು ನಮಗೆ ಹೊಡೆದಿಲ್ಲ. ಯಾರೇ ಮನೆಗೆ ಬಂದರು ಊಟ ಮಾಡದೇ ಕಳಿಸ್ತಾ ಇರಲಿಲ್ಲ. ಅಮ್ಮ ಕೊನೆದಾಗಿ ಶಿವೈಕ್ಯ ಆದಾಗ ಅಪ್ಪ ಅವರ ಹಣೆಗೆ ಕುಂಕುಮ ಇಟ್ಟು, ಹೂ ಮುಡಿಸಿದ ಕೂಡಲೇ ಪ್ರಾಣ ಬಿಟ್ಟರು ಎಂದು ಭಾವುಕ ಮಾತುಗಳನ್ನಾಡಿದ್ದಾರೆ.ಇದನ್ನೂ ಓದಿ: ಉಡುಪಿಯಲ್ಲಿ ನಿರಂತರ ಮಳೆ – ಜು.25ರಂದು ಶಾಲಾ, ಕಾಲೇಜುಗಳಿಗೆ ರಜೆ
