ಬೆಂಗಳೂರು: ಹಾಲಿನ ದರ (Milk Price) ಏರಿಕೆಗೆ ವಿಚಾರ ವಿಧಾನ ಪರಿಷತ್‌ನಲ್ಲಿ ಚರ್ಚೆ ಆಯ್ತು. ರೈತರ ಉಳುವಿಗಾಗಿ ದರ ಏರಿಕೆ ಅನಿವಾರ್ಯವಾಗಿದ್ದು, ಸದನ ದರ ಏರಿಕೆಗೆ ಒಪ್ಪಿಗೆ ಕೊಡಬೇಕು ಎಂಬ ಚರ್ಚೆ ಆಗಿದೆ.
ಕಾಂಗ್ರೆಸ್ ಸದಸ್ಯ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ರವಿ (Ravi), ಬರದ ಮೇಲೆ ಚರ್ಚೆ ವೇಳೆ ಹಾಲಿನ ದರ ಏರಿಕೆಗೆ ಅನಿವಾರ್ಯ ಎಂದು ತಿಳಿಸಿದರು. ನಂದಿನಿಗೆ ಕಾಂಪಿಟೇಷನ್ ಕೊಡೋಕೆ ಖಾಸಗಿ ಡೈರಿಗಳು ಬಂದಿವೆ. ದೊಡ್ಲಾ, ಜರ್ಸಿ, ಹೆರಿಟೇಜ್, ತಿರುಮಲ ಅವರು ನಂದಿನಿಗಿಂತ ಜಾಸ್ತಿ ರೇಟ್‌ನಲ್ಲಿ ಹಾಲು ಕೊಡ್ತಾರೆ. ಕೇರಳ, ಆಂಧ್ರ, ಅಮೂಲ್, ಅವರು ಜಾಸ್ತಿ ರೇಟ್‌ಗೆ ಹಾಲು ಕೊಡ್ತಾರೆ. ಇಡೀ ದೇಶದಲ್ಲಿ ಕಡಿಮೆ ಬೆಲೆಗೆ ಹಾಲು ಕೊಡ್ತಾ ಇರೋದು ನಂದಿನಿ. ಯಾಕೆ ಕಡಿಮೆ ಹಣ ಕೊಟ್ಟು ರೈತರ ಹೊಟ್ಟೆ ಮೇಲೆ ಹೊಡೆಯಬೇಕು? ಇದಕ್ಕೆ ಕೊನೆ ಹಾಡಬೇಕು. ಈಗ ಅ ಸಮಯ ಬಂದಿದೆ. ಈ ಸಮಯದಲ್ಲಿ ಬೆಲೆ ಜಾಸ್ತಿ ಮಾಡಬೇಕು ಅಂತ ಹಾಲಿನ ದರ ಏರಿಕೆಗೆ ರವಿ ಒತ್ತಾಯ ಮಾಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಹಾಲಿನ ದರ 4-5 ರೂ. ಹೆಚ್ಚಳ ಫಿಕ್ಸ್
ಚರ್ಚೆ ವೇಳೆ ತಿರುಪತಿ ಕಲಬೆರಕೆ ತುಪ್ಪದ ವಿಚಾರ ಪ್ರಸ್ತಾಪ ಆಯಿತು. ರೈತರ ಪರ ನಾವು ಇದ್ದೇವೆ. ಸರ್ಕಾರ ದರ ಏರಿಕೆ ಮಾಡಲಿ. ನಮ್ಮ ಸಹಕಾರ ಇದೆ ಅಂತ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ಸಚಿವ ಭೈರತಿ ಸುರೇಶ್ ಮಾತನಾಡಿ, ದರ ಏರಿಕೆ ಮಾಡಿದರೆ ವಿಪಕ್ಷ ವಿರೋಧ ಮಾಡುತ್ತವೆ. ಹೀಗಾಗಿ, ನಿಮಗೆ ಮನವರಿಕೆ ಮಾಡುತ್ತಿದ್ದೇವೆ. ಸಾರಿಗೆ ಇಲಾಖೆಯು ಲಾಸ್‌ನಲ್ಲಿ ನಡೆಯುತ್ತಿದ್ದು, ಟಿಕೆಟ್ ದರ ಏರಿಕೆಗೆ ಸಿಎಂಗೆ ಮನವಿ ಮಾಡಿದ್ದೇವೆ ಎಂದರು. ಹಾಲಿನ ದರ ಏರಿಕೆಗೆ ಸಹಕಾರ ಕೊಡಿ ಅಂತ ವಿಪಕ್ಷಗಳಿಗೆ ಮನವಿ ಮಾಡಿದರು.
ಮಾತು ಮುಂದುವರೆಸಿದ ರವಿ, ಛಲವಾದಿ ನಾರಾಯಣಸ್ವಾಮಿ ಅಂತಹವರು ದರ ಏರಿಕೆಗೆ ವಿರೋಧ ಮಾಡಲ್ಲ. ಶರವಣ, ಅರುಣ್ ಅಂತಹವರು ವಿರೋಧ ಮಾಡ್ತಾರೆ ಎಂದರು. ಇದಕ್ಕೆ ಶರವಣ ವಿರೋಧ ಮಾಡಿ, ನಾವು ಬೆಂಬಲ ಕೊಡ್ತೀವಿ. ಈಗಾಗಲೇ ಹೇಳಿದ್ದೇವೆ ಎಂದರು. ಶರವಣ ನೀವು ನಿಮ್ಮ ಬ್ರದರ್‌ಗೆ ಹೇಳಿ. ಶಿವಕುಮಾರ್ ಸಿಎಂ ಅದಾಗಿನಿಂದ ಬ್ರದರ್‌ಗೆ ತಡೆಯೋಕೆ ಆಗ್ತಿಲ್ಲ. ಬ್ರದರ್ ಕೈ ಹೊಸಕಿಕೊಳ್ತಾ ಇದ್ದಾರೆ ಅಂತ ಹೆಸರು ಹೇಳದೆ ಕುಮಾರಸ್ವಾಮಿ ಬಗ್ಗೆ ಪ್ರಸ್ತಾಪ ಮಾಡಿದ ರವಿ ಕಿಚಾಸಿದರು. ಇದೇ ವೇಳೆ ಮಾಧ್ಯಮಗಳು ಸಹಕಾರ ಕೊಡಬೇಕು ಎಂದರು. 12-15 ರೂ. ದರ ಏರಿಕೆಗೆ ಸದನ ಒಪ್ಪಿಗೆ ಕೊಡಬೇಕು ಅಂತ ಮನವಿ ಮಾಡಿದರು.

