-ಸ್ಟಾರ್ ನಟರಿಂದ ಜೋಡಿಗೆ ಅಭಿನಂದನಾ ಸಂದೇಶ
ನಿರ್ದೇಶಕ, ನಿರ್ಮಾಪಕ ಅಟ್ಲೀ (Atlee) ಅವರ ಪತ್ನಿ ಪ್ರಿಯಾ ಅವರಿಂದು (ಏ.20) ಎರಡನೇ ಮಗುವಿಗೆ ಜನ್ಮ ನೀಡಿದ್ದು, ದಂಪತಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ.
ಈ ಕುರಿತು ಅಟ್ಲೀ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ದಂಪತಿಗೆ 3 ವರ್ಷದ ಮೀರ್ ಎಂಬ ಮಗನಿದ್ದು, ವಿಭಿನ್ನವಾಗಿ ಕಾರ್ಟೂನ್ ಮೂಲಕ ಸಿಹಿ ಸುದ್ದಿಯನ್ನು ತಿಳಿಸಿದ್ದಾರೆ. ಇದನ್ನೂ ಓದಿ: 2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ದಂಪತಿ
ಪೊ
ಪೋಸ್ಟ್‌ನಲ್ಲಿ, ನನಗೆ ಒಬ್ಬಳು ತಂಗಿ ಸಿಕ್ಕಳು.. ನಾನೀಗ ಬಿಗ್ ಬ್ರದರ್ ಮೀರ್ ಎಂದು ಬರೆದಿದ್ದು, ಪಕ್ಕದಲ್ಲಿ ಕಾರಿನ ಮೇಲೆ ಓರ್ವ ಪುಟ್ಟು ಹುಡುಗ ಕುಳಿತಿದ್ದಾನೆ. ರಶ್ಮಿಕಾ ಮಂದಣ್ಣ, ಅನನ್ಯ ಪಾಂಡೆ, ಸಮಂತಾ ರುತ್ ಪ್ರಭು ಮತ್ತು ಹುಮಾ ಖುರೇಷಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.
View this post on Instagram
ಜ.20ರಂದು ದಂಪತಿ ಗರ್ಭಧರಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. 2014ರ ನ.9ರಂದು ತಮ್ಮ ಬಹುಕಾಲದ ಗೆಳತಿ ಪ್ರಿಯಾ ಅವರನ್ನ ಅಟ್ಲೀ ಮದುವೆಯಾಗಿದ್ದರು. ಬಳಿಕ 2023ರ ಜನವರಿಯಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದರು.ಇದನ್ನೂ ಓದಿ: ದರ್ಶನ್, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್ ಹೇಳಿದ್ದೇನು?

