ಹಿಂದಿ ಕಿರುತೆರೆಯ `ಬಿಗ್ ಬಾಸ್’ 12ರ (Bigg Boss Hindi 12) ವಿನ್ನರ್ ದೀಪಿಕಾ ಕಾಕರ್ (Deepika Kakar) ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದೀಪಿಕಾ ಮತ್ತು ನಟ ಶೋಯೆಬ್ ಇಬ್ರಾಹಿಂ (Shoaib Ibrahim) ದಂಪತಿ ತಾವು ಮೊದಲ ಮಗುವಿನ (First Child) ನಿರೀಕ್ಷೆಯಲ್ಲಿರುವ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆ ಬಳಿಕ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ, ಪಾಪಾರಾಜಿಗಳಿಗೆ ಸುನೀಲ್ ಶೆಟ್ಟಿ ಅಭಯ
View this post on Instagram
ಸಾಕಷ್ಟು ಸೀರಿಯಲ್ಗಳ ಮೂಲಕ ಹಿಂದಿ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ನಟಿ ದೀಪಿಕಾ ಕಾಕರ್ ಬಿಗ್ ಬಾಸ್ ಸೀಸನ್ 12ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಇನ್ನೂ ಸೀರಿಯಲ್ವೊಂದರಲ್ಲಿ ದೀಪಿಕಾ ಮತ್ತು ಶೋಯೆಬ್ ಒಟ್ಟಿಗೆ ನಟಿಸಿದ್ದರು. ಈ ವೇಳೆ ಇಬ್ಬರಿಗೂ (Love) ಪ್ರೇಮಾಂಕುರವಾಗಿತ್ತು. ಬಳಿಕ 2018ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
View this post on Instagram
ಇದೀಗ ದೀಪಿಕಾ ಮತ್ತು ಶೋಯೆಬ್ ಇಬ್ರಾಹಿಂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ (Pregnancy News) ಸಿಹಿಸುದ್ದಿಯನ್ನು ವಿಶೇಷ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
View this post on Instagram
ಇನ್ನೂ ಕಳೆದ ವರ್ಷ ದೀಪಿಕಾ ಅವರಿಗೆ ಗರ್ಭಪಾತವಾಗಿತ್ತು. ಹಾಗಾಗಿ ಈ ವರ್ಷ ಕೊಂಚ ಸಮಯ ತೆಗೆದುಕೊಂಡು, ಈ ಸಿಹಿಸುದ್ದಿಯನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k