Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೈಸೂರು ಸಕ್ಕರೆ ಕಾರ್ಖಾನೆಗೆ ಶೀಘ್ರ ಹಣ ಬಿಡುಗಡೆ ಮಾಡಲು ಸಿಎಂಗೆ ದಿನೇಶ್ ಗೂಳಿಗೌಡ ಒತ್ತಾಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮೈಸೂರು ಸಕ್ಕರೆ ಕಾರ್ಖಾನೆಗೆ ಶೀಘ್ರ ಹಣ ಬಿಡುಗಡೆ ಮಾಡಲು ಸಿಎಂಗೆ ದಿನೇಶ್ ಗೂಳಿಗೌಡ ಒತ್ತಾಯ

Districts

ಮೈಸೂರು ಸಕ್ಕರೆ ಕಾರ್ಖಾನೆಗೆ ಶೀಘ್ರ ಹಣ ಬಿಡುಗಡೆ ಮಾಡಲು ಸಿಎಂಗೆ ದಿನೇಶ್ ಗೂಳಿಗೌಡ ಒತ್ತಾಯ

Public TV
Last updated: May 28, 2022 3:59 pm
Public TV
Share
3 Min Read
basavaraj bommai dinesh guligowda
SHARE

– ಶಾಸಕ ದಿನೇಶ್ ಗೂಳಿಗೌಡರಿಗೆ ಸಕಾರತ್ಮಕವಾಗಿ ಸ್ಪಂದಿಸಿದ ಸಿಎಂ
– ಬಾಕಿ 46.25 ಕೋಟಿ ರೂ. ಬಿಡುಗಡೆಗೆ ಮನವಿ

ಬೆಂಗಳೂರು: ಮೈಸೂರು ಸಕ್ಕರೆ ಕಂಪನಿ ನಿಗಮದ ಮಂಡ್ಯ ಕಾರ್ಖಾನೆಗೆ 3.75 ಕೋಟಿ ರೂ.ವನ್ನು ಬಿಡುಗಡೆ ಮಾಡಿದ್ದು, ಬಾಕಿ ಇರುವ 46.25 ಕೋಟಿ ರೂ. ಹಣವನ್ನು ಕೂಡಲೇ ಬಿಡುಗಡೆ ಮಾಡಿ, ಕಬ್ಬು ನುರಿಯುವ ಕೆಲಸ ಪ್ರಾರಂಭಕ್ಕೆ ಚಾಲನೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಡ್ಯ ಶಾಸಕ ದಿನೇಶ್ ಗೂಳಿಗೌಡ ಅವರು ಮನವಿಪತ್ರ ಸಲ್ಲಿಸಿದರು.

ಬೊಮ್ಮಾಯಿ ಅವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ಮನವಿ ಸಲ್ಲಿಸಿದರು. ಈ ಸಂಬಂಧ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಶೀಘ್ರವೇ ಬಾಕಿ ಅನುದಾನಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.

basavaraj bommai dinesh guligowda 1

ಪತ್ರದ ಸಾರಾಂಶ ಹೀಗಿದೆ: ಮಂಡ್ಯ ಜಿಲ್ಲೆ ಜನತೆಯ ಜೀವನಾಧಾರವಾಗಿರುವ ಮೈಸೂರು ಸಕ್ಕರೆ ಕಾರ್ಖಾನೆ ಪುನಾರಂಭ ಹಾಗೂ ಪುನಶ್ಚೇತನಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 50 ಕೋಟಿ ರೂ.ವನ್ನು ಮೀಸಲಿಟ್ಟಿದ್ದು, ಅದರಲ್ಲಿ ಪ್ರಥಮ ಹಂತವಾಗಿ 15 ಕೋಟಿ ರೂ.ವನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬ ಆಶ್ವಾಸನೆಯನ್ನು ಸಾರ್ವಜನಿಕವಾಗಿ ನೀಡಲಾಗಿತ್ತು. ಆದರೆ, ಇದೀಗ ಕೇವಲ 3.75 ಕೋಟಿ ರೂ.ವನ್ನು ಮಾತ್ರವೇ ಬಿಡುಗಡೆ ಮಾಡಲಾಗಿದ್ದು, ಸದರಿ ಹಣ ಜನರ ನಿರೀಕ್ಷೆ ಮತ್ತು ಕಾರ್ಖಾನೆ ಪುನಾರ್ ಆರಂಭಿಸುವ ಕಾರ್ಯಕ್ಕೆ ತೊಡಕನ್ನುಂಟು ಮಾಡಿದೆ.

ಕಾರ್ಖನೆಯಲ್ಲಿ ಸಾಕಷ್ಟು ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಂದರೆಗಳು ಇದ್ದು, ಈಗಾಗಲೇ ಕಾರ್ಖಾನೆ ಆರಂಭವಾಗದೆ ಸುಮಾರು 2 ವರ್ಷಗಳು ಕಳೆದಿವೆ. ಜೊತೆಗೆ ಸಾಕಷ್ಟು ಯಂತ್ರಗಳ ದುರಸ್ತಿಯಾಗಬೇಕಿದ್ದು, ಇನ್ನು ಹೊಸ ಯಂತ್ರೊಪಕರಣಗಳು ಅಥವಾ ಬಿಡಿಭಾಗಗಳು ಬೇಕಿರುತ್ತವೆ. ಜೊತೆಗೆ ಇನ್ನಿತರ ಮೂಲಭೂತ ಸೌಲಭ್ಯವನ್ನು ಒದಗಿಸಿ ಸುಸ್ಥಿತಿಗೆ ತರಬೇಕಿದ್ದು, ಈ ಎಲ್ಲಾ ಪ್ರಕ್ರಿಯೆಗೆ ಈಗ ಬಿಡುಗಡೆ ಮಾಡಿರುವ 3.75 ಕೋಟಿ ರೂ. ಯಾವುದಕ್ಕೂ ಸಾಕಾಗುವುದಿಲ್ಲ.

basavaraj bommai dinesh guligowda..

ಈಗ ಜೂನ್ ತಿಂಗಳ ಆರಂಭಿಕ ಹಂತದಲ್ಲಿದ್ದೇವೆ. ಜುಲೈ ಮಾಸಾಂತ್ಯದಲ್ಲಿ ಕಾರ್ಖಾನೆಯನ್ನು ಆರಂಭಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಕ್ಕರೆ ಸಚಿವರು ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಕಬ್ಬು ನುರಿಯಲು ಗರಿಷ್ಠ ಎಂದರೆ ಇನ್ನು ಎರಡರಿಂದ ಎರಡೂವರೆ ತಿಂಗಳ ಅವಕಾಶ ಮಾತ್ರ ಇದೆ. ಇಂತಹ ಸಂದರ್ಭದಲ್ಲಿ ಯಂತ್ರೋಪಕರಣಗಳನ್ನು ಸರಿಪಡಿಸಿ, ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಕಾರ್ಯನಿರ್ವಹಣೆ ಮಾಡಬೇಕೆಂದರೆ ಕೆಲಸ ಕಾರ್ಯಗಳು ಚುರುಕಾಗಿ ನಡೆಯಬೇಕು. ಇದಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ. ಹಣ ಬಿಡುಗಡೆ ನಿಧಾನವಾಗುತ್ತಾ ಹೋದಂತೆ ಕಾರ್ಖಾನೆ ಆರಂಭವೂ ವಿಳಂಬವಾಗುತ್ತಾ ಹೋಗುತ್ತದೆ. ತೀರಾ ವಿಳಂಬವಾದರೆ ಕಾರ್ಖಾನೆ ಪ್ರಾರಂಭಿಸಿಯೂ ಯಾರಿಗೂ ಪ್ರಯೋಜನ ಇರುವುದಿಲ್ಲ. ಇದನ್ನೂ ಓದಿ: ಗೋ ಪೂಜೆ ಮಾಡುವವರು ಗೋಮಾಂಸ ತಿಂತೀನಿ ಅಂದ್ರೆ ಅವರಿಗಿಂತ ಕಟುಕ ಈ ಪ್ರಪಂಚದಲ್ಲಿ ಯಾರು ಇಲ್ಲ: ಆರ್.ಅಶೋಕ್

ಇನ್ನು ಬಂದಿರುವ ಪ್ರಾಥಮಿಕ ಮಾಹಿತಿ ಪ್ರಕಾರ 15 ಕೋಟಿ ರೂ. ಹಣಕಾಸು ಇಲಾಖೆಯಲ್ಲಿ ಮಂಜೂರಾಗಿದ್ದು, ಆದರೆ ಕೇವಲ 3.75 ಕೋಟಿ ರೂ. ಬಿಡುಗಡೆಯಾಗಿರುತ್ತದೆ. ಆದರೆ, ಉಳಿದ ಮೊತ್ತವನ್ನು ಸಹ ಶೀಘ್ರದಲ್ಲಿ ಬಿಡುಗಡೆ ಮಾಡಿದರೆ ಮುಂದಿನ ಚಟುವಟಿಕೆಗೆ ಅನುಕೂಲವಾಗಿ ಈ ಭಾಗದ ರೈತರಿಗೆ ಸೂಕ್ತ ಸಮಯದಲ್ಲಿ ಕಬ್ಬು ನುರಿಸಲು ಅನುಕೂಲವಾದಂತೆ ಆಗುತ್ತದೆ.

basavaraj bommai dinesh guligowda 2

ವಕಿರ್ಂಗ್ ಕ್ಯಾಪಿಟಲ್‍ಗೆ ವ್ಯವಸ್ಥೆ ಮಾಡಿ: ಯಾವುದೇ ಒಂದು ಕಾರ್ಖಾನೆ ಆರಂಭಕ್ಕೆ ಮೊದಲು ವರ್ಕಿಂಗ್ ಕ್ಯಾಪಿಟಲ್ ಇರುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಬಜೆಟ್‍ನಲ್ಲಿಯೂ ಪ್ರಸ್ತಾಪವಾಗಿದೆ. ಬ್ಯಾಂಕ್ ಮೂಲಕ ವರ್ಕಿಂಗ್ ಕ್ಯಾಪಿಟಲ್‍ಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತಾದರೂ ಇನ್ನೂ ಆ ಬಗ್ಗೆ ಅಧಿಕೃತ ಕ್ರಮವಾಗಲಿ, ಆದೇಶವಾಗಲಿ ಹೊರಬಿದ್ದಿಲ್ಲ. ಇದನ್ನೂ ಓದಿ: ಕನ್ನಡಿಗರ ತಂಟೆಗೆ ಬಂದ್ರೆ ಹುಷಾರ್! – MES ಪುಂಡರಿಗೆ ಸಿಎಂ ಎಚ್ಚರಿಕೆ

ಕಾರ್ಖಾನೆ ಒಮ್ಮೆ ಪ್ರಾರಂಭವಾದ ಮೇಲೆ ಬರುವಂತಹ ಖರ್ಚು ವೆಚ್ಚಗಳು ಸೇರಿದಂತೆ ಕಾರ್ಖಾನೆಗೆ ಕಬ್ಬು ಹಾಕಿದ ರೈತರಿಗೆ ಹಣ ಪಾವತಿ ಮಾಡಲು ಅನುದಾನವು ಇರಬೇಕಾಗುತ್ತದೆ. ಈ ಮೂಲಕ ಸುಗಮವಾಗಿ ಚಾಲನೆಯನ್ನು ಮಾಡಬೇಕಿದೆ. ಆದರೆ, ಈ ಬಗ್ಗೆ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ಈ ಎಲ್ಲಾ ವಿಷಯಗಳ ನಿಟ್ಟಿನಲ್ಲಿ ಗಮನಹರಿಸಿ, ಕಾರ್ಖಾನೆಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡುವುದಲ್ಲದೆ, ಸಂಪೂರ್ಣ 50 ಕೋಟಿ ರೂ.ವನ್ನು (ಅಂದರೆ ಬಾಕಿ 46.25 ಕೋಟಿ ರೂ.) ಆದಷ್ಟು ಶೀಘ್ರವಾಗಿ ಬಿಡುಗಡೆಗೊಳಿಸಿ ರೈತರ ನೆರವಿಗೆ ದಾವಿಸಬೇಕು ಎಂದು ಮಂಡ್ಯ ಜಿಲ್ಲೆಯ ರೈತರ ಪರವಾಗಿ ಮನವಿ ಮಾಡಿದರು.

TAGGED:Basavaraj Bommaidinesh guligowdamandyaMysugar Factoryದಿನೇಶ್ ಗೂಳಿಗೌಡಬಸವರಾಜ ಬೊಮ್ಮಾಯಿಮಂಡ್ಯಮೈಶುಗರ್
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

Vidhana Soudha
Bengaluru City

ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಆದೇಶ

Public TV
By Public TV
28 minutes ago
drone camera captures footage of people gambling in bhadravati forest 19 detained
Crime

ಪೊಲೀಸರ ಕಣ್ತಪ್ಪಿಸಿ ಕಾಡಲ್ಲಿ ಜೂಜು – ಡ್ರೋನ್‌ ಕಣ್ಣಲ್ಲಿ ಸಿಕ್ಕಿಬಿದ್ದ ಗ್ಯಾಂಗ್‌, 19 ಮಂದಿ ವಶಕ್ಕೆ

Public TV
By Public TV
40 minutes ago
S 400 missile system
Latest

ಆಪರೇಷನ್ ಸಿಂಧೂರ ಆ್ಯನಿವರ್ಸರಿ ಹೊತ್ತಲ್ಲೇ ಭಾರತಕ್ಕೆ ಬರುತ್ತಿದೆ 4ನೇ ಸುದರ್ಶನ

Public TV
By Public TV
1 hour ago
visl worker dies after falling iron billet 8 lakh compensation before funeral job guarantee letter for wife
Districts

ಕಬ್ಬಿಣದ ಬಿಲ್ಲೆಟ್ ಬಿದ್ದು VISL ಕಾರ್ಮಿಕ ಸಾವು – ಅಂತ್ಯಸಂಸ್ಕಾರಕ್ಕೂ ಮುನ್ನವೇ 8 ಲಕ್ಷ ಪರಿಹಾರ, ಪತ್ನಿಗೆ ಉದ್ಯೋಗ ಭರವಸೆ

Public TV
By Public TV
1 hour ago
Weather
Bengaluru City

ಬೆಂಗಳೂರಿನ ಹಲವೆಡೆ ತಂಪೆರೆದ ವರುಣ – ರಾಜ್ಯದಲ್ಲಿ ಏ.30ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Public TV
By Public TV
2 hours ago
Nitin Gadkari
Latest

ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಭವಿಷ್ಯವಿಲ್ಲ: ನಿತಿನ್ ಗಡ್ಕರಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?