ಚಾಮರಾಜನಗರ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಳೆದ ವಾರವಷ್ಟೇ ನೀರಿಲ್ಲದೇ ಬಣಗುಡುತ್ತಿದ್ದ ಭರಚುಕ್ಕಿ ಫಾಲ್ಸ್‌ಗೆ (Bharachukki Falls) ಜೀವಕಳೆ ಬಂದಿದೆ.
ಕಾವೇರಿ ಜಲಾನಯನ (Cauvery) ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಕಬಿನಿ ಜಲಾಶಯ (Kabini Dam) ಭರ್ತಿಯಾಗಿದೆ. ಜಲಾಶಯದಿಂದ 27 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದ್ದು, ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಕಳೆದ ವಾರ ನೀರಿಲ್ಲದೇ ಬಣಗುಡುತ್ತಿದ್ದ ಚಾಮರಾಜನಗರ (Chamarajanagar) ಜಿಲ್ಲೆಯ ಕೊಳ್ಳೇಗಾಲ (Kollegala) ತಾಲೂಕಿನ ಭರಚುಕ್ಕಿ ಫಾಲ್ಸ್‌ಗೆ ಇದೀಗ ಜೀವಕಳೆ ಬಂದಿದೆ. ಇದನ್ನೂ ಓದಿ:ಬೆಂಗ ಳೂರಿನ ಹಲವು ಭಾಗಗಳಲ್ಲಿ ಸಾಧಾರಣ ಮಳೆ
ಭರಚುಕ್ಕಿ ಇಂದು ಭೋರ್ಗರೆದು ಹರಿಯುತ್ತಿದೆ. ಹಾಲ್ನೊರೆಯಂತೆ ಕಾವೇರಿ ನೀರು ಧುಮ್ಮಿಕ್ಕುತ್ತಿದೆ. ಕಳೆದ ವಾರ ನೀರಿಲ್ಲದೆ ಭರಚುಕ್ಕಿ ಭಣಗುಡುತ್ತಿತ್ತು. ಬಂದ ಪ್ರವಾಸಿಗರು ನಿರಾಸೆಯಿಂದ ಹೋಗುತ್ತಿದ್ದರು. ಇದೀಗ ಜಲಪಾತದ ವೈಭವ ಮತ್ತೇ ಮರುಕಳಿಸಿದೆ.
