– ನಾಲ್ವರು ಆರೋಪಿಗಳು ಅರೆಸ್ಟ್
ಬೀದರ್: ಸರ್ಕಾರಿ ಶಾಲೆ, ಅಂಗನವಾಡಿಗಳಿಂದ ಕಳ್ಳತನ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 55 ಗ್ಯಾಸ್ ಸಿಲಿಂಡರ್ ಸೇರಿ 9 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ಬೀದರ್ ಪೊಲೀಸರು (Bidar Police) ಜಪ್ತಿ ಮಾಡಿದ್ದಾರೆ.
ಸರ್ಕಾರಿ ಶಾಲೆ, ಅಂಗನವಾಡಿ ಹಾಗೂ ವಿವಿಧ ಕಡೆಗಳಿಂದ ಸಿಲಿಂಡರ್‌ಗಳನ್ನು ಕಳ್ಳತನ ಮಾಡಿ, ಬೀದರ್‌ನಿಂದ ಮಹಾರಾಷ್ಟ್ರದ ಉದ್ದಗೀರ್‌ಗೆ ಅಕ್ರಮವಾಗಿ ಸಾಗಾಟ ಮಾಡಲಾಗ್ತಿತ್ತು. ಈ ವೇಳೆ ದಾಳಿ ನಡೆಸಿದ ಪೊಲೀಸರು 55 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಮೇಹಕರ್, ಭಾಲ್ಕಿ ಗ್ರಾಮೀಣ, ಖಟಕ್ ಚಿಂಚೋಳಿ ಪೊಲೀಸ್ ಠಾಣೆ ಸೇರಿದಂತೆ ಹಲವು ಠಾಣೆಗಳಲ್ಲಿ 9 ಪ್ರಕರಣ ದಾಖಲಾಗಿವೆ. ಇದನ್ನೂ ಓದಿ: ʻಗಜʼ ಚಿತ್ರದಲ್ಲಿ ದರ್ಶನ್ ಜೊತೆಗೆ ನಟಿಸಿದ್ದ ಖ್ಯಾತ ಖಳನಾಯಕ ಪ್ರದೀಪ್ ರಾವತ್ ನಿಧನ
ಇದೇ ವೇಳೆ ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದಂತೆ ಒಟ್ಟು 9 ಲಕ್ಷಕ್ಕೂ ಅಧಿಕ ಮೌಲ್ಯದ ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ. ಎಸ್ಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 9 ಪ್ರಕರಣಗಳಲ್ಲಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ಇದನ್ನೂ ಓದಿ: ಬಿಗ್‌ಬಾಸ್ ಕನ್ನಡ 13ರ ವೇದಿಕೆ ಸಜ್ಜು – ದೊಡ್ಮನೆಗೆ ಎಂಟ್ರಿ ಕೊಡೋಕೆ `ಅಗ್ನಿಪರೀಕ್ಷೆ’ಗೆ ಮುಹೂರ್ತ ಫಿಕ್ಸ್
