ನವದೆಹಲಿ: ಡಿಂಚಕ್ ಪೂಜಾ ಅಭಿಮಾನಿಗಳಿಗೆ ಇದು ಬೇಸರ ತರುವ ಸುದ್ದಿ. ಹಾಗೆ ಇನ್ನೂ ಕೆಲವರಿಗೆ ಇದರಿಂದ ನಿರಾಳವಾಗಬಹುದು. ತನ್ನ ಹಾಡುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರೋ ಡಿಂಚಕ್ ಪೂಜಾ ವಿಡಿಯೋಗಳನ್ನ ಯೂಟ್ಯೂಬ್‍ನಿಂದ ತೆಗೆದುಹಾಕಲಾಗಿದೆ. ಆಕೆಯ ಇತ್ತೀಚಿನ ದಿಲೋ ಕಾ ಶೂಟರ್ ಹಾಡನ್ನು ಬಿಟ್ಟು ಉಳಿದ ಎಲ್ಲಾ ಹಾಡುಗಳನ್ನ ಯೂಟ್ಯೂಬ್‍ನಿಂದ ಡಿಲೀಟ್ ಮಾಡಲಾಗಿದೆ.
ಯೂಟ್ಯೂಬ್‍ನಲ್ಲಿ ಕಟ್ಟಪ್ಪ ಸಿಂಗ್ ಎಂಬ ಬಳಕೆದಾರರೊಬ್ಬರು ಕಾಪಿರೈಟ್ ಉಲ್ಲಂಘನೆಗೆ ಸಂಬಂಧಿಸಿದಂತೆ ಡಿಂಚಕ್ ಪೂಜಾ ಬಗ್ಗೆ ರಿಪೋರ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಕಟ್ಟಪ್ಪ ಯಾರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದ್ರೆ ಕಟ್ಟಪ್ಪನನ್ನ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಡಿ ಹೊಗಳುತ್ತಿದ್ದಾರೆ. ಈ ಬಗ್ಗೆ ಮೀಮ್‍ಗಳು ಹಾಗೂ ಟ್ರೋಲ್‍ಗಳು ಹರಿದಾಡ್ತಿವೆ.
Advertisement
Advertisement
ಡಿಂಚಕ್ ಪೂಜಾ ವಿಡಿಯೋಗಳನ್ನ ಯೂಟ್ಯೂಬ್‍ನಿಂದ ತೆಗೆದುಹಾಕಿರುವುದು ಪೊಲೀಸರ ಕ್ರಮವೂ ಇರಬಹುದು ಎಂದು ಹೇಳಲಾಗ್ತಿದೆ. ಡಿಂಚಕ್ ಪೂಜಾ ತನ್ನ “ದಿಲೋ ಕಾ ಶೂಟರ್ ಹೈ ಮೆರಾ ಸ್ಕೂಟರ್…” ಹಾಡಿನಲ್ಲಿ ಹೆಲ್ಮೆಟ್ ಧರಿಸಿಲ್ಲ ಅಂತ ಇತ್ತೀಚೆಗಷ್ಟೆ ವ್ಯಕ್ತಿಯೊಬ್ಬರು ಟ್ವಿಟ್ಟರ್‍ನಲ್ಲಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ ಈ ಹಾಡು ಇನ್ನೂ ಯೂಟ್ಯೂಬ್‍ನಲ್ಲಿ ಇರೋ ಕಾರಣ ಈ ವಾದವನ್ನು ಕೆಲವರು ತಳ್ಳಿಹಾಕಿದ್ದಾರೆ. ಇದು ಪಬ್ಲಿಸಿಟಿ ಸ್ಟಂಟ್ ಕೂಡ ಇರಬಹುದು ಅನ್ನೋ ಮಾತುಗಳು ಕೂಡ ಕೇಳಿಬರ್ತಿವೆ.
Advertisement
@dtptraffic @DelhiPolice आपके संदर्भ में ये मोहतरमा बिना हेलमेट स्कूटर चला रही है और ख़ूब शोर करके गाने गा रही है । pic.twitter.com/osz56KsSpM
— Mohit Singh (@Mohit_journo) June 27, 2017
Advertisement
Thanks,action will be taken.
— Delhi Traffic Police (@dtptraffic) June 27, 2017
ಸ್ವ್ಯಾಗ್ ವಾಲಿ ಟೋಪಿ, ಸೆಲ್ಫಿ ಮೇನೆ ಲೇಲಿ ಆಜ್, ದಿಲೋ ಕಾ ಶೂಟರ್ ಹೈ ಮೆರಾ ಸ್ಕೂಟರ್…. ಹೀಗೆ ಯುವಕರಿಗೆ ಇಷ್ಟವಾಗುವಂತೆ ಡಿಂಚಕ್ ಪೂಜಾ ಹಾಡುಗಳಿದ್ದರೂ, ಹಾಡಿನ ರಾಗ ಹಾಗೂ ಆಕೆಯ ಗಾಯನ ಮಾತ್ರ ಹೇಳಿಕೊಳ್ಳುವಂತದ್ದೇನಲ್ಲ. ಆದರೂ ಆಕೆಯ ವಿಡಿಯೋಗಳು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಪಡೆದಿವೆ. ದಿಲೋ ಕಾ ಶೂಟರ್ ಹಾಡಿಗೆ 6 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಸಿಕ್ಕಿದೆ. ಈಕೆಯ ಯೂಟ್ಯೂಬ್ ಅಕೌಂಟ್‍ಗೆ 1.80 ಲಕ್ಷ ಹೆಚ್ಚಿನ ಸಬ್ಸ್ ಕ್ರೈಬರ್ಸ್ ಇದ್ದಾರೆ.
ಪೂಜಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೀಮ್‍ಗಳು ಹಾಗೂ ಟ್ರೋಲ್‍ಗಳು ಹರಿದಾಡ್ತಿರುತ್ತವೆ. ಈ ಬಗ್ಗೆ ಆಕೆಗೂ ಅರಿವಿದ್ದು, ತನ್ನನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ದ್ವೇಷಿಸುವುದು ಹಾಗೆ ಕೆಲವು ಅಪ್ಪಟ ಅಭಿಮಾನಿಗಳನ್ನ ಭೇಟಿಯಾದ ಬಗ್ಗೆಯೂ ಸ್ವತಃ ಪೂಜಾ ಲೇಖನವೊಂದರಲ್ಲಿ ಹೇಳಿಕೊಂಡಿದ್ದಾಳೆ.
ಇತ್ತೀಚೆಗೆ ಖ್ಯಾತ ಗಾಯಕ ಸೋನು ನಿಗಮ್ ಕೂಡ ಆಕೆಯ ದಿಲೋ ಕಾ ಶೂಟರ್ ಹಾಡನ್ನ ಹಾಡಿ ವಿಡಿಯೋ ಹಂಚಿಕೊಂಡಿದ್ದರು.
Thinking to send #DinchakPooja to #PakistanBorder. All #Terrorists will die there only. But they are lucky as YT removed her Videos.. #PoK
— Anup Srinivas Reddy (@paturi_anup) July 12, 2017
#DinchakPooja songs deleted from #YouTube Faith in #scooter restored
— Sourav_Sanyal ???????? (@SanySourav) July 11, 2017
Ab desh badlega????#DinchakPooja pic.twitter.com/qubtaPt7w5
— Shantanu Dey (@Hrthrb_shantanu) July 11, 2017
#YouTube to #DinchakPooja : Kattappa sent his regards ???????? #WinterIsHere for #DinchakPooja and will lasts for years.
— Vinod Kumar M (@VinoDrogo) July 11, 2017
https://twitter.com/i_m_piyush_10/status/884851810040729600
Shocked to hear that YouTube has banned #DinchakPooja videos.My prayers and thoughts to her #DinchakPooja ???????????????? pic.twitter.com/Q3q5p46lsV
— Sudarshan Jinagi (@SudarshanJinagi) July 12, 2017
https://www.youtube.com/watch?v=YZSXaFkhiC4