ಉಡುಪಿ: ಅರಬ್ಬಿ ಸಮುದ್ರದಲ್ಲಿ ಅಪರೂಪದ ದೊಡ್ಡ ಗಾತ್ರದ ಡೆವಿಲ್ ಫಿಶ್ ಪತ್ತೆಯಾಗಿದೆ. ಉಡುಪಿಯ ಮಲ್ಪೆಯಿಂದ ತೆರಳಿದ ಕಡಲಮಕ್ಕಳ ಬಲೆಗೆ ವಿಭಿನ್ನ ಆಕಾರದ ಮೀನು ಸೆರೆಯಾಗಿದೆ.
ಸುಮಾರು ಐದೂವರೆ ಅಡ್ಡಿ ಎತ್ತರವಿರುವ ಈ ಮೀನು ಆರು ಕೆಜಿ ಭಾರವಿದೆ. ದೆವ್ವದ ಆಕಾರದಲ್ಲಿರುವ ಮೀನು ತಟ್ಟಂತ ಕಂಡರೆ ಭಯವಾಗದೆ ಇರದು. ಇದೊಂದು ಜಾತಿಯ ಆಕ್ಟೋಪಸ್. ಇದರ ವೈಜ್ಞಾನಿಕ ಹೆಸರು ಬಿಗ್ ಬ್ಲೂ ಆಕ್ಟೋಪಸ್ ಅಂತ. ಡೆವಿಲ್ ಫಿಶ್ ಎಂದೇ ಈ ಮೀನು ಜನರ ಬಾಯಲ್ಲಿ ಖ್ಯಾತಿ ಪಡೆದಿದೆ.
Advertisement
Advertisement
ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದ ಕಲ್ಲು ಬಂಡೆಗಳ ಅಡಿಯಲ್ಲಿ ಈ ಜಾತಿ ಮೀನುಗಳು ಓಡಾಡುತ್ತವೆ. 150 ಮೀಟರ್ ಆಳದಲ್ಲಿ ಈ ಅಕ್ಟೋಪಸ್ ಜೀವಿಸುತ್ತದೆ. ಚೀನಾ, ಸಿಂಗಾಪುರ್, ಹಾಂಗ್ ಕಾಂಗ್ ನಲ್ಲಿ ಈ ಮೀನಿಗೆ ಬೇಡಿಕೆ ಹೆಚ್ಚು. ಸಂತಾನೋತ್ಪತ್ತಿ ಬಳಿಕ ಗಂಡು ಮೀನು ಸತ್ತರೆ, ಹೆಣ್ಣು ಮೀನು ಮರಿ ಹಾಕಿ ಅಸುನೀಗುತ್ತೆ. ಈ ತಳಿಯ ಮೀನಿನ ವಿಶೇಷ.
Advertisement
ಮಲ್ಪೆಯಲ್ಲಿ ಆರಂಭದಲ್ಲಿ ಈ ಮೀನು ಬಿಕರಿಯಾಗಿಲ್ಲ. ಆ ನಂತರ ಹೋಟೆಲ್ ಮಾಲೀಕರು ಫಿಶ್ ಪುಳಿಮುಂಚಿ ತಯಾರಿಗೆ ಈ ಮೀನನ್ನು ಖರೀದಿ ಮಾಡಿದ್ದರಂತೆ. ಈ ಮೀನಿನ ದೇಹದಲ್ಲಿ ಮುಳ್ಳಿನ ಅಂಶ ಕಡಿಮೆ ಇರುತ್ತದೆ. ಮಾಂಸವೇ ತುಂಬಿಕೊಂಡಿರುವುದರಿಂದ ನಾನ್ ವೆಜ್ ಖಾದ್ಯಗಳ ತಯಾರಿಗೆ ಇದನ್ನು ಬಳಸಲಾಗುತ್ತದೆ ಎಂದು ಸ್ಥಳೀಯ ಯತೀಶ್ ತಿಂಗಳಾಯ ಉದ್ಯಾವರ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.