ನವದೆಹಲಿ: ದೆಹಲಿ ಎಸ್‌ಐಆರ್‌ನ (Delhi SIR) ಕರಡು ಮತದಾರರ ಪಟ್ಟಿ ಇಂದು (ಆ.31) ರಿಲೀಸ್ ಆಗಿದೆ. 1.45 ಕೋಟಿ ಜನರ ಪೈಕಿ 47.7 ಲಕ್ಷ ಮತದಾರರ ಹೆಸರು ಡಿಲೀಟ್ ಆಗಿದೆ.
ಈ ಕುರಿತು ಮುಖ್ಯ ಚುನಾವಣಾ ಅಧಿಕಾರಿಯವರು ಮಾಹಿತಿ ನೀಡಿದ್ದು, ದೆಹಲಿಯಲ್ಲಿದ್ದ ಒಟ್ಟು 1.45 ಕೋಟಿ ಮತದಾರರದಲ್ಲಿ 47.7 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಕರಡು ಮತದಾರರ ಪಟ್ಟಿಯಿಂದ (Electoral Roll) ಹೊರಗುಳಿದಿರುವವರು ಸೆ.30ರವರೆಗೆ ನಮೂನೆ 6 ಮತ್ತು ಅಗತ್ಯ ದಾಖಲೆಗಳೊಂದಿಗೆ ಹಕ್ಕುಗಳನ್ನು ಸಲ್ಲಿಸಿ ಹೆಸರು ಸೇರಿಸಿಕೊಳ್ಳಬಹುದು. ಬಳಿಕ ಅಂತಿಮ ಪಟ್ಟಿಯು ನವೆಂಬರ್ 4 ರಂದು ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಆಗಸ್ಟ್ ತಿಂಗಳ ಅನ್ನಭಾಗ್ಯ ಅಕ್ಕಿಗೆ ಬ್ರೇಕ್
ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ, ರಾಷ್ಟ್ರ ರಾಜಧಾನಿಯ ಒಟ್ಟು 1,45,10,299 ಮತದಾರರ ಪೈಕಿ ಸುಮಾರು ಶೇ.67.18ರಷ್ಟು ಮಂದಿಯ ನಮೂನೆಗಳನ್ನು ಅಧಿಕಾರಿಗಳು ಡಿಜಿಟಲ್ ಮಾಡಿದ್ದಾರೆ. ಉಳಿದ 47.7 ಲಕ್ಷ ಮತದಾರರನ್ನು ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಮತ್ತು ಇತರೆ (ಎಎಸ್‌ಡಿಡಿಒ) ಎಂದು ವರ್ಗೀಕರಿಸಲಾಗಿದೆ. ಅಂತವರನ್ನು ಕರಡು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜೂನ್ 30ರಂದು ಪ್ರಾರಂಭವಾಗಿ ಆಗಸ್ಟ್ 17ರಂದು ಮುಕ್ತಾಯಗೊಂಡ ಎಸ್‌ಐಆರ್ ಅಭಿಯಾನದ ಸಮಯದಲ್ಲಿ ಸ್ವೀಕರಿಸಿ ಡಿಜಿಟಲೀಕರಣಗೊಳಿಸಲಾದ ಸುಮಾರು 97.5 ಲಕ್ಷ ಮತದಾರರನ್ನು ಕರಡು ಪಟ್ಟಿಯು ಒಳಗೊಂಡಿದೆ.ಇದನ್ನೂ ಓದಿ: ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ನಿಲುವೇನು ಅಂತ ಸಿಎಂ, ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಬೇಕು: ಎನ್.ರವಿಕುಮಾರ್
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಡಿಜಿಟಲೀಕರಣ ಪ್ರಮಾಣವು ಗಣನೀಯವಾಗಿ ವ್ಯತ್ಯಾಸಗೊಂಡಿದೆ. ರೋಹಿಣಿ ಕ್ಷೇತ್ರವು ಶೇ.83.43ರಷ್ಟು ಅತ್ಯಧಿಕ ಪ್ರಮಾಣವನ್ನು ಹೊಂದಿದ್ದರೆ, ತುಘಲಕಾಬಾದ್ ಕ್ಷೇತ್ರವು ಶೇ.52.15ರಷ್ಟು ಅತ್ಯಂತ ಕಡಿಮೆ ಪ್ರಮಾಣವನ್ನು ಹೊಂದಿದೆ. ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸುವ ಮೂಲಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಎಸ್‌ಐಆರ್ ಅನ್ನು ಕೈಗೊಳ್ಳಲಾಗಿತ್ತು. ಈ ಅಭಿಯಾನದ ಸಮಯದಲ್ಲಿ ಹೆಸರು ನೋಂದಣಿ ಫಾರ್ಮ್‌ಗಳು ಸಿಗದ ಮತದಾರರು ಈಗ ಹಕ್ಕುಗಳು ಮತ್ತು ಆಕ್ಷೇಪಣೆಗಳ ಪ್ರಕ್ರಿಯೆಯ ಮೂಲಕ ತಮ್ಮ ಹೆಸರನ್ನು ಸೇರಿಸಿಕೊಳ್ಳಲು ಅವಕಾಶವಿದೆ.
ಈ ಎಸ್‌ಐಆರ್ ಅಭಿಯಾನವು ಏಕಕಾಲದಲ್ಲಿ ದೆಹಲಿಯ ಮತಗಟ್ಟೆಯಲ್ಲಿ ಬದಲಾವಣೆಗಳನ್ನು ತಂದಿದೆ. ಮತಗಟ್ಟೆಗಳ ಸಂಖ್ಯೆಯು 13,033 ರಿಂದ 14,947ಕ್ಕೆ ಏರಿದೆ ಹಾಗೂ ಮತಗಟ್ಟೆ ಸ್ಥಳಗಳ ಸಂಖ್ಯೆಯು 2,696 ರಿಂದ 2,856ಕ್ಕೆ ಏರಿಕೆಯಾಗಿದೆ.ಇದನ್ನೂ ಓದಿ: ಕರ್ನಾಟಕ ನೀರು ಹರಿಸುತ್ತಿದೆಯಲ್ಲ? – ತಮಿಳುನಾಡು ವಾದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ
