Connect with us

Bengaluru City

ನವೆಂಬರ್ 17ರಿಂದ ಡಿಗ್ರಿ ಕಾಲೇಜ್ ಓಪನ್- ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ

Published

on

– ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ

ಬೆಂಗಳೂರು: ರಾಜ್ಯದಲ್ಲಿ ಸ್ಕೂಲ್ ಆರಂಭದ ಬಗ್ಗೆ ಇನ್ನೂ ಗೊಂದಲ ಬಗೆಹರಿದಿಲ್ಲ. ಮತ್ತೊಂದು ಕಡೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗ್ತಿದೆ. ಇದರ ನಡುವೆ ನವೆಂಬರ್ 17ರಿಂದ ಡಿಗ್ರಿ ಕಾಲೇಜ್ ಆರಂಭಕ್ಕೆ ಕಾಲೇಜು ಶಿಕ್ಷಣ ಇಲಾಖೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದಾಗಿ ಕಠಿಣ ಮಾರ್ಗಸೂಚಿಗಳನ್ನೇ ಪ್ರಕಟಿಸಿದೆ.

ಮಾರ್ಗಸೂಚಿಗಳು: ಕಾಲೇಜ್ ಆರಂಭಕ್ಕೆ 3 ದಿನ ಮೊದಲು ಬೋಧಕರು, ವಿದ್ಯಾರ್ಥಿಗಳು, ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಬೋಧಕರು ಫೇಸ್ ಮಾಸ್ಕ್, ಫೇಸ್ ಶೀಲ್ಡ್ ಧರಿಸಬೇಕು. ಅವಶ್ಯಕತೆ ಇದ್ದರೆ ಪಾಳಿ ವ್ಯವಸ್ಥೆಯಲ್ಲಿ ಬೋಧನಾ ವ್ಯವಸ್ಥೆಯನ್ನ ಕಾಲೇಜುಗಳು ಮಾಡಿಕೊಳ್ಳಬಹುದು. ಕೆಮ್ಮು, ಜ್ವರ ಲಕ್ಷಣಗಳು ಇದ್ದರೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ. ಪ್ರವೇಶ, ನಿರ್ಗಮನ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು.

ಕಾಲೇಜ್ ಆವರಣದಲ್ಲಿ ಲೈಬ್ರರಿ, ಕ್ಯಾಂಟೀನ್ ತೆರೆಯುವಂತಿಲ್ಲ. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮನೆಯಿಂದಲೇ ಊಟ, ನೀರಿನ ಬಾಟಲಿ ತರಬೇಕು. ವಿದ್ಯಾರ್ಥಿಗಳು ಸಹ ಕಾಲೇಜ್‍ನಲ್ಲಿ ದೈಹಿಕ ಅಂತರಕ್ಕೆ ಅಗತ್ಯ ಕ್ರಮವಹಿಸಬೇಕು. ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು. ಕಾಲೇಜ್‍ಗೆ ಬರಲು ಇಚ್ಚಿಸದ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡುವಂತಿಲ್ಲ. ಕಾಲೇಜ್‍ಗೆ ಬರಲು ಇಚ್ಚಿಸದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ನೀಡಬೇಕು. ಕಾಲೇಜ್ ಆವರಣದಲ್ಲಿ ಗುಂಪು ಸೇರುವಂತಿಲ್ಲ. ಕಾಲೇಜ್‍ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಎನ್‍ಸಿಸಿ, ಎನ್‍ಎಸ್‍ಎಸ್ ಚಟುವಟಿಕೆ ಬಂದ್

ಸ್ಕೂಲ್ ಆರಂಭದ ಬಗ್ಗೆ ಗೊಂದಲ ಮುಂದುವರಿದಿದ್ದು, ಶಾಲೆ ಆರಂಭದ ಸಾಧ್ಯತೆ ಸದ್ಯಕ್ಕೆ ಕ್ಷೀಣವಾಗಿದೆ. ಡಿಸೆಂಬರ್ 2ನೇ ವಾರದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯು ತರಗತಿಯಷ್ಟೇ ಆರಂಭವಾಗಬಹುದು. ಜನವರಿ ನಂತರ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಕ್ಲಾಸ್ ಓಪನ್ ಆಗಲಿದ್ದು, ಸದ್ಯಕ್ಕೆ 1ರಿಂದ 9ನೇ ತರಗತಿ ಕ್ಲಾಸ್ ಡೌಟ್ ಎನ್ನಲಾಗ್ತಿದೆ. ಯಾಕಂದ್ರೆ ಶಿಕ್ಷಣ ಸಚಿವರಿಗೆ ಇನ್ನೂ ಶಿಕ್ಷಣ ಇಲಾಖೆ ಆಯುಕ್ತರ ವರದಿ ಸಲ್ಲಿಕೆ ಆಗಿಲ್ಲ. ಇವತ್ತು ಸಲ್ಲಿಕೆ ಆಗಬೇಕಿತ್ತು. ಆದರೆ ವರದಿ ಅಂತಿಮ ರೂಪುರೇಷೆ ಸಿದ್ಧತೆ ವಿಳಂಬವಾಗಿರೋ ಕಾರಣ ಈ ವಾರದಲ್ಲಿ ಮುಖ್ಯಮಂತ್ರಿ ನಿರ್ಧಾರ ಸಾಧ್ಯತೆ ಇದೆ.

ಶಾಲೆ ಆರಂಭದ ಬಗ್ಗೆ ಸರ್ಕಾರವೇ ಇನ್ನೂ ಸ್ಪಷ್ಟ ನಿಲುವು ತಳೆದಿಲ್ಲ. ಅದಾಗಲೇ ಕೊಪ್ಪಳದ ಗಂಗಾವತಿಯ ಖಾಸಗಿ ಶಾಲೆಯಲ್ಲಿ 8, 9ನೇ ತರಗತಿಗೆ ಪರೀಕ್ಷೆ ನಡೆದಿದೆ. ನಿಯಮಗಳನ್ನು ಉಲ್ಲಂಘಿಸಿ, ಸೆಂಟ್‍ಪೌಲ್ ಅನ್ನೋ ಶಾಲೆ ಪರೀಕ್ಷೆ ನಡೆಸಿದೆ. ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಶಿಕ್ಷಣ ಇಲಾಖೆ, ಶಾಲೆಗೆ ನೋಟಿಸ್ ನೀಡಲು ನಿರ್ಧರಿಸಿದ್ದಾರೆ. ಶಾಲೆಯ ಕಾರ್ಯದರ್ಶಿ ಸರ್ವೇಶ್ ವಸ್ತ್ರದ್ ಕ್ಷಮೆಯನ್ನೂ ಕೇಳಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in