ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ಜೊತೆಯಾಗಿ ಇಲ್ಲ, ಇಬ್ಬರ ಮಧ್ಯೆ ಮುನಿಸು ಬಂದ ಕಾರಣದಿಂದಾಗಿ ದೂರ ದೂರ ಇದ್ದಾರೆ. ಹೀಗಾಗಿ ಅವರಿಬ್ಬರೂ ಜೊತೆಯಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಬಾಲಿವುಡ್ (Bollywood) ಅಂಗಳದಲ್ಲಿ ಹಲವು ತಿಂಗಳುಗಳಿಂದ ಕೇಳಿ ಬರುತ್ತಿವೆ. ದೀಪಿಕಾ ಮತ್ತು ರಣವೀರ್ ಬೇರೆ ಬೇರೆ ಮನೆಯಲ್ಲೇ ವಾಸವಿದ್ದಾರೆ ಎಂದೂ ಹೇಳಲಾಗಿತ್ತು. ಈ ಕಾರಣದಿಂದಾಗಿಯೇ ಅವರಿಬ್ಬರೂ ಬಹಿರಂಗವಾಗಿ ಯಾವುದೇ ಕಾರ್ಯಕ್ರಮದಲ್ಲೂ ಭಾಗಿ ಆಗುತ್ತಿಲ್ಲ ಎಂದೂ ಹೇಳಲಾಗಿತ್ತು.
ಸ್ಟಾರ್ ದಂಪತಿ ದೂರವಾಗಿದ್ದಾರೆ ಎಂದು ಬಿಟೌನ್ ಮಾತಾಡಿಕೊಂಡರೂ, ಈ ಕುರಿತಾಗಿ ಈವರೆಗೂ ದೀಪಿಕಾ ಆಗಲಿ ಅಥವಾ ರಣವೀರ್ (Ranveer Singh) ಆಗಲಿ ಒಂದೇ ಒಂದು ಮಾತೂ ಕೂಡ ಆಡಿರಲಿಲ್ಲ. ಹೀಗಾಗಿ ದೂರ ಆಗಿರುವುದು ಪಕ್ಕಾ ಎಂದೇ ನಂಬಲಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ದೀಪಿಕಾ ಈ ಕುರಿತು ಮಾತನಾಡಿದ್ದಾರೆ. ಪತಿಯ ಜೊತೆ ತಾವು ಚೆನ್ನಾಗಿಯೇ ಇರುವುದಾಗಿ ತಿಳಿಸಿದ್ದಾರೆ. ಇಬ್ಬರೂ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಇರುವ ಕಾರಣದಿಂದಾಗಿ ಜೊತೆಯಾಗಿ ಕಾಣಿಸಿಕೊಂಡಿಲ್ಲ ಎಂದು ಗಾಸಿಪ್ ಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ:‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ
ರಣವೀರ್ ಸಿಂಗ್ ಮತ್ತು ದೀಪಿಕಾ ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾದವರು. ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರನ್ನು ಗೌರವಿಸುತ್ತಿದ್ದಾರೆ. ಬಾಲಿವುಡ್ ನ ಬೆಸ್ಟ್ ಕಪಲ್ ಅಂತಾನೇ ಅನಿಸಿಕೊಂಡಿದ್ದಾರೆ. ಹೀಗಾಗಿ ಇದನ್ನು ನೋಡಲು ಆಗದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎನ್ನುವುದು ದೀಪಿಕಾ ಮಾತು. ರಣವೀರ್ ಸಿಂಗ್ ಅದ್ಭುತ ಮನುಷ್ಯ. ಅವನನ್ನು ದೂರ ಮಾಡುವುದಾಗಲಿ ಅಥವಾ ಕಿತ್ತುಕೊಳ್ಳುವುದಾಗಲಿ ಯಾರಿಂದಲೂ ಸಾಧ್ಯವಿಲ್ಲ ಎಂದು ಸಂದರ್ಶನವೊಂದರಲ್ಲಿ ದೀಪಿಕಾ ಹೇಳಿಕೊಂಡಿದ್ದಾರೆ.