ಟಾಲಿವುಡ್ ನಟ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ (Sobhita) ಯುರೋಪ್‌ಗೆ (Europe) ಹಾರಿದ್ದಾರೆ. ವಿದೇಶದ ಇಬ್ಬರ ಲವ್ವಿ ಡವ್ವಿ ಫೋಟೋ ಸೋಷಿಯಲ್ ಭಾರೀ ಸದ್ದು ಮಾಡುತ್ತಿದೆ. ಡೇಟಿಂಗ್ ಸುದ್ದಿ ಪುಷ್ಠಿ ನೀಡುವಂತಹ ಮತ್ತೊಂದು ಫೋಟೋ ವೈರಲ್ ಆಗಿದ್ದು, ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಪಡ್ಡೆಹುಡುಗರಿಗೆ ಶಾಕ್ ಕೊಟ್ಟ ಕೃತಿ ಶೆಟ್ಟಿ
Advertisement
ಸಮಂತಾ (Samantha) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಶೋಭಿತಾ ಜೊತೆ ನಾಗಚೈತನ್ಯ ಲವ್ವಿ ಡವ್ವಿ ಶುರು ಮಾಡಿದ್ದಾರೆ. ಈ ಜೋಡಿ ಜಂಟಿಯಾಗಿ ಯುರೋಪ್‌ಗೆ ಹಾರಿದ್ದಾರೆ. ವಿದೇಶದ ಬೀದಿಗಳಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಯುರೋಪ್‌ನಲ್ಲಿ ಸ್ಟೈಜ್ ಶೋ ಅನ್ನು ಇಬ್ಬರೂ ವೀಕ್ಷಿಸುತ್ತಿರುವ ಫೋಟೋ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದನ್ನು ನೋಡಿ ಶೋಭಿತಾ ಮೇಲೆ ನಾಗಚೈತನ್ಯ ಲವ್ ಆಗಿದೆ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
Advertisement
Advertisement
ಇನ್ನೂ ಕೆಲ ತಿಂಗಳುಗಳ ಹಿಂದೆ ಲಂಡನ್ ರೆಸ್ಟೋರೆಂಟ್‌ವೊಂದರಲ್ಲಿ ಇಬ್ಬರೂ ಜೊತೆಯಾಗಿದ್ದ ಫೋಟೋ ವೈರಲ್ ಆಗಿತ್ತು. ಆದರೆ ಇದು ಎಡಿಟ್ ಆಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದೆ ಎಂದು ಹೇಳಲಾಯ್ತು. ಫೇಕ್ ಫೋಟೋ ಎನ್ನುವ ಮಾತು ಕೇಳಿ ಬಂದಿತ್ತು. ಹಾಗಾದ್ರೆ ಈಗ ಯುರೋಪ್‌ನಲ್ಲಿ ಜೊತೆಯಾಗಿ ನಿಂತಿರುವ ಫೋಟೋಗೆ ಈ ಜೋಡಿಯ ಪ್ರತಿಕ್ರಿಯೆ ಏನು ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ.
Advertisement
ಅಂದಹಾಗೆ, ಹಲವು ವರ್ಷಗಳ ಡೇಟಿಂಗ್ ನಂತರ ಸಮಂತಾ ಮತ್ತು ನಾಗಚೈತನ್ಯ 2017ರಲ್ಲಿ ಮದುವೆಯಾದರು. 2021ಕ್ಕೆ ಈ ಜೋಡಿ ಡಿವೋರ್ಸ್ ಕುರಿತು ಅಧಿಕೃತ ಘೋಷಣೆ ಮಾಡಿದ್ದರು.