ಮಂಗಳೂರು: ಈರುಳ್ಳಿ ದರ ಏರಿಕೆಯಿಂದಾಗಿ ಜನ ಈಗಾಗಲೇ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಇನ್ನೂ ಎರಡು ತಿಂಗಳ ಕಾಲ ಇದೇ ರೀತಿ ಈರುಳ್ಳಿ ಖರೀದಿಸುವಾಗ ಗ್ರಾಹಕರು ಕಣ್ಣೀರು ಸುರಿಸಬೇಕಾಗ ಅನಿವಾರ್ಯತೆ ಎದುರಾಗಿದೆ.
ಈರುಳ್ಳಿ ದರ ಇಳಿಯೋದಿಲ್ವಾ ಎಂದು ಕರಾವಳಿ ಜನ ಟೆನ್ಷನ್ ಆಗಿದ್ದಾರೆ. ಮಂಗಳೂರಿನಲ್ಲಿ ಈರುಳ್ಳಿ ದರ ದಿನದಿಂದ ದಿನಕ್ಕೆ ಏರುತ್ತಿದ್ದು, ಪ್ರತಿ ಕೇಜಿಗೆ 120 ಇದ್ದ ಈರುಳ್ಳಿ ದರ ಇದೀಗ 140ರಿಂದ 150 ರೂ.ಗೆ ಬಂದು ನಿಂತಿದೆ. ಈ ದರ ಇನ್ನೂ ಎರಡು ತಿಂಗಳ ಕಾಲ ಮುಂದುವರಿಯುತ್ತದೆ ಎನ್ನುವುದೇ ಕರಾವಳಿಗರಿಗೆ ತಲೆ ನೋವಾಗಿದೆ. ಇದನ್ನೂ ಓದಿ: ‘ಈರುಳ್ಳಿ ದರ ಏರಿಕೆ ಬಗ್ಗೆ ಯೋಚಿಸಿದ ಕೊಹ್ಲಿ, ಪೋಲಾರ್ಡ್’
Advertisement
Advertisement
ಸಗಟು ವ್ಯಾಪಾರಿಗಳಿಗೆ ಈರುಳ್ಳಿ ಸಾಕಷ್ಟು ಪೂರೈಕೆಯಾಗದೆ ದರ ಹೆಚ್ಚಿದ್ದರೂ ಗ್ರಾಹಕರಿಗೆ ಬೇಕಾದಷ್ಟು ಈರುಳ್ಳಿ ಪೂರೈಸಲು ಸಾಧ್ಯವಾಗುತ್ತಿಲ್ಲ. ನಾನ್‍ವೆಜ್ ಪ್ರಿಯರಾದ ಕರಾವಳಿ ಮಂದಿಗೆ ನಿತ್ಯದ ಬಳಕೆಗೆ ಈರುಳ್ಳಿ ಅನಿವಾರ್ಯ ಆಗಿದ್ದು, ಪೂರೈಕೆ ಕಡಿಮೆಯಾದರೂ ಬಳಕೆ ಮಾಡದೇ ಬಿಡಲ್ಲ. ಹೀಗಾಗಿ ಬೆಲೆ ಜಾಸ್ತಿಯಾಗಿದ್ದರಿಂದ ಈರುಳ್ಳಿ ಖರೀದಿಯನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಇದನ್ನೂ ಓದಿ: ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ
Advertisement
ಕಳೆದ ವಾರದ ಹಿಂದೆ ಒಂದು ಕೆಜಿ ಈರುಳ್ಳಿಗೆ 100 ರೂಪಾಯಿ ಇತ್ತು. ಬಳಿಕ ಮೂರು ದಿನಗಳ ಹಿಂದೆ ಈರುಳ್ಳಿ ದರ, 120 ರೂ. ಆಗಿದ್ದು ಈಗ 140ಕ್ಕೆ ಏರಿಕೆಯಾಗಿದೆ. ಇದೇ ರೀತಿ ದಿನದಿಂದ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಇನ್ನೂ ಎರಡು ತಿಂಗಳ ಕಾಲ ಇದೇ ರೀತಿ ಇರಲಿದೆ ಎಂದು ಮಂಗಳೂರಿನ ಈರುಳ್ಳಿ ವ್ಯಾಪಾರಸ್ಥ ಸುರೇಶ್ ಹೇಳಿದ್ದಾರೆ.
Advertisement
ಮಂಗಳೂರಿಗೆ ಮಹಾರಾಷ್ಟ್ರದ ಪೂನಾ, ಬೆಂಗಳೂರು, ಹಾಸನದಿಂದ ಈರುಳ್ಳಿ ಪೂರೈಕೆಯಾಗುತ್ತಿದ್ದು, ಇದನ್ನೇ ಅವಲಂಬಿಸಿ ವ್ಯಾಪಾರ ಮಾಡಬೇಕಾಗಿದೆ. ಇದೀಗ ಪೂರೈಕೆ ಕಡಿಮೆಯಾಗಿದ್ದರಿಂದ ವ್ಯಾಪಾರಸ್ಥರು ಈರುಳ್ಳಿ ಬೆಲೆ ಕಡಿಮೆ ಮಾಡುತ್ತಿಲ್ಲ.