Sunday, 18th November 2018

Recent News

ದಿನ ಭವಿಷ್ಯ 9-11-2018

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಶುಕ್ರವಾರ, ಅನೂರಾಧ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:40 ರಿಂದ 12:07
ಗುಳಿಕಕಾಲ: ಬೆಳಗ್ಗೆ 7:46 ರಿಂದ 9:13
ಯಮಗಂಡಕಾಲ: ಮಧ್ಯಾಹ್ನ 3:01 ರಿಂದ 4:28

ದಿನ ವಿಶೇಷ: ಹಾಸನಾಂಬೆ ದರ್ಶನಕ್ಕೆ ಕೊನೆ ದಿನ

ಮೇಷ: ತಂದೆಯ ಬೈಗುಳದಿಂದ ಬೇಸರ, ಉದ್ಯೋಗ ಸ್ಥಳದಲ್ಲಿ ಮಂದತ್ವ, ದೇಹದಲ್ಲಿ ಆಲಸ್ಯ, ಮನಸ್ಸಿನಲ್ಲಿ ಜಿಗುಪ್ಸೆ, ವಯೋವೃದ್ಧರಿಗೆ ನಿಂದನೆ, ವಾಹನದಿಂದ ಪೆಟ್ಟಾಗುವ ಸಾಧ್ಯತೆ, ಹಳೇ ಸ್ನೇಹಿತರಿಂದ ಅನುಕೂಲ.

ವೃಷಭ: ಆಕಸ್ಮಿಕ ಪೆಟ್ಟು ಮಾಡಿಕೊಳ್ಳುವಿರಿ, ಬಂಧುಗಳಿಂದ ಕಿರಿಕಿರಿ, ಕುಟುಂಬದಲ್ಲಿ ಆತಂಕ, ಯತ್ನ ಕಾರ್ಯದಲ್ಲಿ ವಿಘ್ನ, ಕೆಲಸ ಕಾರ್ಯಗಳಲ್ಲಿ ನಿರಾಸೆ, ಸಂಗಾತಿಯ ನಡವಳಿಕೆಯಿಂದ ಬೇಸರ.

ಮಿಥುನ: ದಾಂಪತ್ಯದಲ್ಲಿ ಸಂಶಯ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ತಂದೆಯಿಂದ ಅನುಕೂಲ, ಹಿರಿಯರಿಂದ ಧನಾಗಮನ.

ಕಟಕ: ಮಕ್ಕಳಿಂದ ಅನುಕೂಲ, ದುಶ್ಚಟಗಳಿಂದ ಸಮಸ್ಯೆ, ಸ್ನೇಹಿತರು ಶತ್ರುವಾಗುವರು, ಕೂಲಿ ಕಾರ್ಮಿಕರ ಕೊರತೆ ನಿವಾರಣೆ, ಉದ್ಯೋಗದಲ್ಲಿ ಪ್ರಗತಿ, ತೊಡೆಯ ಭಾಗಕ್ಕೆ ಪೆಟ್ಟಾಗುವ ಸಾಧ್ಯತೆ.

ಸಿಂಹ: ಗ್ಯಾಸ್ಟ್ರಿಕ್ ಸಮಸ್ಯೆ, ರೋಗ ಬಾಧೆ, ಮನಸ್ಸಿಗೆ ಬೇಸರ, ದೀರ್ಘಕಾಲದ ಸಾಲ ಬಾಧೆ, ಮಾನಸಿಕ ವ್ಯಥೆಯಿಂದ ನಿದ್ರಾಭಂಗ, ದಾಂಪತ್ಯದಲ್ಲಿ ವಿರಸ.

ಕನ್ಯಾ: ಸ್ಥಿರಾಸ್ತಿ ವಿಚಾರದಲ್ಲಿ ಅಡೆತಡೆ, ಮಕ್ಕಳಿಂದ ಕೆಲಸದಲ್ಲಿ ಹಿನ್ನಡೆ, ದುಷ್ಟ ಸ್ನೇಹಿತರ ಸಹವಾಸದಿಂದ ತೊಂದರೆ, ನೆರೆಹೊರೆಯವರಿಂದ ಲಾಭ, ದೀರ್ಘಕಾಲದ ಅನಾರೋಗ್ಯ, ಮಾನಸಿಕ ಚಿಂತೆ.

ತುಲಾ: ಉದ್ಯೋಗ ಬದಲಾವಣೆಗೆ ಮನಸ್ಸು, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮನೆಯ ವಾತಾವರಣದಲ್ಲಿ ಆತಂಕ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ,

ವೃಶ್ಚಿಕ: ಆರ್ಥಿಕ ಸಂಕಷ್ಟಗಳ ಬಾಧೆ, ಸ್ವಂತ ಉದ್ಯಮಕ್ಕೆ ಮನಸ್ಸು, ವ್ಯಾಪಾರ-ವ್ಯವಹಾರ ಪ್ರಾರಂಭಕ್ಕೆ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ತೊಂದರೆ, ವ್ಯಕ್ತಿಗಳಿಂದ ಕುಟುಂಬಕ್ಕೆ ಸಂಕಷ್ಟ, ಕಾಲು-ಗಂಟಲು ನೋವು, ಉಸಿರಾಟದ ಸಮಸ್ಯೆ.

ಧನಸ್ಸು: ಗೌರವಕ್ಕೆ ಧಕ್ಕೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಬಂಧುಗಳೇ ಶತ್ರುವಾಗುವರು, ಸ್ಥಳ ಬದಲಾವಣೆಗೆ ಮನಸ್ಸು, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಹಣಕಾಸು ತೀರ್ಮಾನಗಳಿಂದ ದೂರವಿರಿ, ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ.

ಮಕರ: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮಾಟ-ಮಂತ್ರದ ಭೀತಿ, ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಆತಂಕ.

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ರೋಗ ಬಾಧೆ, ಉದ್ಯೋಗ ಸ್ಥಳದಲ್ಲಿ ಲಾಭ, ಮಿತ್ರರಿಂದ ಅನುಕೂಲ, ಒಪ್ಪಂದಗಳಲ್ಲಿ ತಪ್ಪು ನಿರ್ಧಾರ, ಉದ್ಯೋಗ ಬದಲಾವಣೆಗೆ ಮನಸ್ಸು.

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಬಗ್ಗೆ ಚಿಂತೆ, ಸಂಪತ್ತಿನ ಮೇಲೆ ಆಸೆ, ಅಪರಿಚಿತರಿಂದ ಸಹಾಯ, ಪ್ರಯಾಣದಲ್ಲಿ ಮೋಸ, ನಂಬಿಕಸ್ಥರಿಂದ ದ್ರೋಹ.

Leave a Reply

Your email address will not be published. Required fields are marked *