ಪಂಚಾಂಗ
ಸಂವತ್ಸರ: ಪರಾಭವ ನಾಮ
ಋತು: ಗ್ರೀಷ್ಮ
ಅಯನ: ಉತ್ತರಾಯಣ
ಮಾಸ: ನಿಜ ಜ್ಯೇಷ್ಠ
ಪಕ್ಷ: ಕೃಷ್ಣ
ತಿಥಿ: ಪಂಚಮಿ
ನಕ್ಷತ್ರ: ಶತಭಿಷ
ರಾಹುಕಾಲ: 5:15 PM – 6:51 PM
ಗುಳಿಕಕಾಲ: 3:39 PM – 5:15 PM
ಯಮಗಂಡಕಾಲ: 12:27 PM – 2:03 PM
ಮೇಷ: ಕೈಗೊಂಡ ಕೆಲಸದಲ್ಲಿ ಪ್ರಗತಿ, ಅಲಂಕಾರಿಕ ವಸ್ತುಗಳಿಂದ ಲಾಭ, ದೂರವಾದ ಬಂಧುಗಳೊಂದಿಗೆ ಪುನರ್ಮಿಲನ.
ವೃಷಭ: ತಾಳ್ಮೆ ಕಳೆದುಕೊಳ್ಳದೆ ವ್ಯವಹರಿಸಿ, ವ್ಯಾಜ್ಯದಲ್ಲಿ ಜಯ, ಸ್ವಾಭಿಮಾನಕ್ಕೆ ಧಕ್ಕೆ.
ಮಿಥುನ: ದೀರ್ಘಪ್ರಯಾಣದಿಂದ ತೊಂದರೆ, ಹಿರಿಯರ ಆರೋಗ್ಯ ಸುಧಾರಣೆ, ಆರ್ಥಿಕ ಪರಿಸ್ಥಿತಿ ಉತ್ತಮ.
ಕಟಕ: ಕೆಲಸ ಕಾರ್ಯಗಳಲ್ಲಿ ನಿರಾಸೆ, ಪ್ರಕೃತಿಯ ಒಡನಾಟದಿಂದ ಆಲಸ್ಯ ದೂರ, ವಾಹನ ರಿಪೇರಿಗೆ ಅಧಿಕ ಖರ್ಚು.
ಸಿಂಹ: ದಾಯಾದಿ ಕಲಹ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವ್ಯರ್ಥ ಧನ ಹಾನಿ.
ಕನ್ಯಾ: ನಂಬಿದವರಿಂದ ಮೋಸ, ಪ್ರಭಾವಿ ವ್ಯಕ್ತಿಗಳಿಂದ ನೆರವಿನ ಆಶ್ವಾಸನೆ, ಸಾಲ ಮರುಪಾವತಿ.
ತುಲಾ: ಕೃಷಿ ಆಧಾರಿತ ಉದ್ಯಮಗಳಿಂದ ಅನುಕೂಲ, ನೆರೆಹೊರೆಯವರಿಂದ ಕಿರಿಕಿರಿ, ಖರ್ಚು ವೆಚ್ಚದ ಬಗ್ಗೆ ನಿಯಂತ್ರಣವಿರಲಿ.
ವೃಶ್ಚಿಕ: ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಹಿರಿಯರ ಮಾತಿಗೆ ಮನ್ನಣೆ.
ಧನಸ್ಸು: ಉದ್ಯೋಗದಲ್ಲಿ ಹೊಸ ಅವಕಾಶ, ಪಾಲುದಾರಿಕೆಯಲ್ಲಿ ಲಾಭ, ಹೊಸ ವಸ್ತುಗಳ ಖರೀದಿ ಬಗ್ಗೆ ಎಚ್ಚರ.
ಮಕರ: ಉನ್ನತ ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ, ಮಾನಸಿಕ ಒತ್ತಡ ಹೆಚ್ಚಾಗುವುದು, ಕುಟುಂಬದಲ್ಲಿ ಸಂತಸದ ವಾತಾವರಣ.
ಕುಂಭ: ಸ್ಥಿರಾಸ್ತಿ ವಿಷಯದಲ್ಲಿ ಎಚ್ಚರಿಕೆ, ಜಾಣತನದ ನಡೆಯಿಂದ ಕಠಿಣ ಕಾರ್ಯ ಸಾಧನೆ, ದೇವತಾ ಕಾರ್ಯಗಳಲ್ಲಿ ಭಾಗಿ.
ಮೀನ: ಹೊಗಳಿಕೆ ಮಾತಿಗೆ ಮರುಳಾಗದಿರಿ, ಚಂಚಲ ಮನಸ್ಸು, ಆರೋಗ್ಯ ಸಮಸ್ಯೆ ನಿವಾರಣೆ.
