Bengaluru CityCrimeDistrictsKarnatakaLatestLeading NewsMain Post

ಬೆಂಗ್ಳೂರಿನಲ್ಲಿ ಕ್ರೇನ್ ಹರಿದು ವಿದ್ಯಾರ್ಥಿನಿ ದಾರುಣ ಸಾವು

ಆನೇಕಲ್: ಚಾಲಕನ ಅಜಾರೂಕತೆಯಿಂದ ಕ್ರೇನ್ (Crane Vehicle) ಹರಿದು ವಿದ್ಯಾರ್ಥಿನಿ (Student) ದಾರುಣ ಸಾವಿಗೀಡಾದ ಘಟನೆ ಮಹದೇವಪುರ ಕ್ಷೇತ್ರದ ಕನ್ನಮಂಗಲ ಗೇಟ್‌ನ ಜೈನ್ ಶಾಲೆ (Jain School) ಬಳಿ ನಡೆದಿದೆ.

ಕುಮಾರಿ ನೂರ್ ಫಿಜ (19) ಮೃತ ವಿದ್ಯಾರ್ಥಿನಿ (Student). ಶಾಲೆ ಮುಗಿಸಿಕೊಂಡು ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ – ಹೊಸಕೋಟೆ ಮಾರ್ಗವಾಗಿ ಕನ್ನಮಂಗಲ ಬಳಿ ಹೋಗುತ್ತಿದ್ದಾಗ ಕ್ರೇನ್ ಚಾಲಕನ ಹಿಂಬದಿಯಿಂದ ಬಂದು ಗುದ್ದಿ, ವಿದ್ಯಾರ್ಥಿನಿ ಮೇಲೆ ಕ್ರೇನ್ ಹತ್ತಿಸಿದ್ದಾನೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

ಅಪಘಾತಕ್ಕೀಡಾಗಿ ರಕ್ತಸಿಕ್ತವಾಗಿ ಬಳಲುತ್ತಿದ್ದ ವಿದ್ಯಾರ್ಥಿನಿಯನ್ನು ಸಮೀಪದ ಆಸ್ಪತ್ರೆಗೆ (Hospital) ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ವೈಟ್ ಫೀಲ್ಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಕ್ರೇನ್ ಮಾಲೀಕ ಪೆರಿಯಸ್ವಾಮಿ ವಿರುದ್ಧ ಯುವತಿ ತಂದೆ ರೆಹಮಾನ್ ಖಾನ್ ವೈಟ್ ಫೀಲ್ಡ್ ಸಂಚಾರ (Traffic Police) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button