Connect with us

Bengaluru City

ಇಂದು 1,141 ಪಾಸಿಟಿವ್‌, 14 ಬಲಿ – 1,136 ಡಿಸ್ಚಾರ್ಜ್‌

Published

on

ಬೆಂಗಳೂರು: ಇಂದು ಕರ್ನಾಟಕದಲ್ಲಿ 1,141 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 1,136 ಜನ ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು 14 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,11,382ಕ್ಕೆ ಏರಿಕೆ ಆಗಿದೆ. ಈ ಪೈಕಿ 8,85,341 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ13,993 ಸಕ್ರಿಯ ಪ್ರಕರಣಗಳಿವೆ.

ವಿಮಾನ ನಿಲ್ದಾಣದಲ್ಲಿ ಒಟ್ಟು ಇಂದು 852 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಡಿಸೆಂಬರ್‌ 1 ರಿಂದ 22ರವರೆಗೆ ಇಂಗ್ಲೆಂಡ್‌ನಿಂದ ಒಟ್ಟು 2,127 ಮಂದಿ ಆಗಮಿಸಿದ್ದಾರೆ.

ಇಲ್ಲಿಯವರೆಗೆ ಒಟ್ಟು 12,029 ಮಂದಿ ಕೊರೊನಾಗೆ ಬಲಿಯಾಗಿದ್ದು, ಸದ್ಯ 216 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 13,427 ಆಂಟಿಜನ್‌ ಟೆಸ್ಟ್‌, 82,281 ಆರ್‌ಟಿ ಪಿಸಿಆರ್‌ ಸೇರಿದಂತೆ 95,708 ಪರೀಕ್ಷೆ ಮಾಡಲಾಗಿದೆ. ಒಟ್ಟು ರಾಜ್ಯದಲ್ಲಿ ಇಲ್ಲಿಯವರೆಗೆ 1, 32,17,127 ಕೊರೊನಾ ಪರೀಕ್ಷೆ ಮಾಡಲಾಗಿದೆ.

ಎಂದಿನಂತೆ ಬೆಂಗಳೂರು ನಗರದಲ್ಲಿ 585 ಮಂದಿಗೆ ಸೋಂಕು ಬಂದಿದ್ದು 8 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರು 67, ಚಿಕ್ಕಬಳ್ಳಾಪುರ 58, ತುಮಕೂರು 47, ದಕ್ಷಿಣ ಕನ್ನಡ 46 ಮಂದಿಗೆ ಕೊರೊನಾ ಬಂದಿದೆ.

ಐಸಿಯುನಲ್ಲಿಒಟ್ಟು 216 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 101, ತುಮಕೂರು 10, ಕಲಬುರಗಿಯಲ್ಲಿ 10 ಮಂದಿ ಇದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in