Connect with us

Bengaluru City

ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ ಎಂದ ರಚಿತಾ ಸೋದರಿ

Published

on

– ಮಾಸ್ಕ್ ಧರಿಸಿ ಲಿಪ್‍ಲಾಕ್

ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಪ್ರಕರಣ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಈಗಾಗಲೇ ಸೀರಿಯಲ್, ಸಿನಿಮಾ ಶೂಟಿಂಗ್‍ಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಕೆಲವು ನಟ-ನಟಿಯರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಈ ಮಧ್ಯೆ ನಟಿ ನಿತ್ಯಾ ರಾಮ್ ಮಾಸ್ಕ್ ಧರಿಸಿ ಪತಿಯೊಂದಿಗೆ ಕಿಸ್ ಮಾಡಿದ್ದಾರೆ.

ನಟಿ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಪತಿ ಗೌತಮ್ ಜೊತೆ ಮಾಸ್ಕ್ ಧರಿಸಿ ಕಿಸ್ ಮಾಡಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಮಾಸ್ಕ್ ಧರಿಸಿ ಕಿಸ್ ಮಾಡಿದ್ದು, “ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ” ಎಂದು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

ಅಷ್ಟೇ ಅಲ್ಲದೇ ಆ ಫೋಟೋಗೆ #CoronaEffect #StaySafe #NeverStopRomance ಎಂಬ ಹ್ಯಾಶ್ ಟ್ಯಾಗ್‍ಗಳನ್ನು ಬಳಸಿದ್ದಾರೆ. ಈ ಫೋಟೋವನ್ನು ಅಪ್ಲೋಡ್ ಮಾಡಿದ ತಕ್ಷಣ ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡಿದ್ದಾರೆ. ‘ಮೊದಲು ಸುರಕ್ಷತೆ ಆಮೇಲೆ ಕಿಸ್’, ‘ಕೊರೊನಾ ಗಂಭೀರವಾದ ಸಮಸ್ಯೆ, ತಮಾಷೆಯಲ್ಲ’ ಅಲ್ಲಿ ಕೊರೊನಾ ಇದ್ರೂ ನೀವು ರೊಮ್ಯಾನ್ಸ್ ಮಾಡುವುದು ಬಿಡುತ್ತಿಲ್ಲ’ ಎಂದು ಅನೇಕ ರೀತಿ ಕಮೆಂಟ್ ಮಾಡಿದ್ದಾರೆ.

2019 ಡಿಸೆಂಬರ್‌ನಲ್ಲಿ ನಿತ್ಯ ರಾಮ್ ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ.

ನಿತ್ಯ ರಾಮ್ ಹಾಗೂ ಗೌತಮ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿದೆ. ನಿತ್ಯಾ ರಾಮ್ ತಾಯಿಯ ಸ್ನೇಹಿತರ ಮಗನೇ ಗೌತಮ್. ಹೀಗಾಗಿ ಕುಟುಂಬದವರ ಮೂಲಕ ಪರಿಚಯರಾದ ಗೌತಮ್ ಅವರನ್ನೇ ನಿತ್ಯಾ ವರಿಸಿದ್ದಾರೆ. ಗೌತಮ್ ಉದ್ಯಮಿಯಾಗಿದ್ದು, ಆಸ್ಟ್ರೇಲಿಯಾದಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ಮದುವೆ ನಂತರ ನಟಿ ನಿತ್ಯಾ ಕೂಡ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾರೆ.

ನಿತ್ಯಾ ರಾಮ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿದ್ದರು.