ಮುಂಬೈ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶದ ಅತಿ ದೊಡ್ಡ ಅಟೋಮೊಬೈಲ್ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಮಹೀಂದ್ರಾ, ಮರ್ಸಿಡೀಸ್ ಬೆಂಜ್, ಫಿಯೆಟ್, ಹುಂಡೈ ಮೋಟಾರ್ ಕಂಪನಿ ತನ್ನ ಉತ್ಪಾದನೆಯನ್ನು ನಿಲ್ಲಿಸಿದೆ.
ಕೊರೊನಾ ವೈರಸಿಗೆ ವಿಶ್ವದಲ್ಲಿ 13 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟ ಹಿನ್ನೆಲೆಯಲ್ಲಿ ಕಳೆದ ವಾರವೇ ಯುರೋಪ್, ಅಮೆರಿಕ, ಕೆನಡಾ, ಮೆಕ್ಸಿಕೋದಲ್ಲಿ ಉತ್ಪಾದನೆಯನ್ನು ನಿಲ್ಲಿಸಿತ್ತು. ಈಗ ಭಾರತದಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅಟೋ ಕಂಪನಿಗಳು ಉತ್ಪಾದನೆಯನ್ನು ನಿಲ್ಲಿಸಿವೆ.
Advertisement
ಮಹೀಂದ್ರಾ ಕಂಪನಿ ನಮ್ಮ ಘಟಕದಲ್ಲಿ ವೆಂಟಿಲೇಟರ್ ನಿರ್ಮಾಣ ಮಾಡುವುದಕ್ಕೆ ಹೆಚ್ಚು ಗಮನ ನೀಡುತ್ತೇವೆ ಎಂದು ತಿಳಿಸಿವೆ.
Advertisement
ಈ ರೀತಿ ಸಂಪೂರ್ಣ ಲಾಕ್ಡೌನ್ ಮಾಡುವುದರಿಂದ ಕೊರೊನಾ ಹರಡುತ್ತಿರುವ ವೇಗ ಕಡಿಮೆ ಆಗಬಹುದು ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
Advertisement
—A lockdown over the next few weeks will help flatten the curve & moderate the peak pressure on medical care. —However, we need to create scores of temporary hospitals & we have a scarcity of ventilators. (2/5)
— anand mahindra (@anandmahindra) March 22, 2020