ಬೆಂಗಳೂರು: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್‌ಗೆ (Congress) ಪ್ರಮುಖ ಸಮುದಾಯಗಳ ಹೆಚ್ಚುವರಿ ಟಿಕೆಟ್ ಡಿಮ್ಯಾಂಡ್ ತಲೆಬಿಸಿ ತಂದಿಟ್ಟಿದೆ ಎನ್ನಲಾಗಿದೆ. ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿ ಎರಡು ವಾರದ ಒಳಗೆ ಮೊದಲ ಪಟ್ಟಿ ಬಿಡುಗಡೆಗೆ ʼಕೈʼ ಪಾಳಯದಲ್ಲಿ ಸಿದ್ದತೆ ನಡೆಯುತ್ತಿದೆ.
ಜಾತಿವಾರು ಟಿಕೆಟ್ ಬೇಡಿಕೆ ಈ ಸಲ ಕಳೆದ ಬಾರಿಗಿಂತ ಹೆಚ್ಚಾಗಿರುವುದು ಕಾಂಗ್ರೆಸ್ ಪಾಳಯಕ್ಕೆ ಹೊಸ ತಲೆಬಿಸಿ ತಂದಿಟ್ಟಿದೆ. ಜಾತಿ ನಾಯಕರ ಸಂಖ್ಯಾ ಬಲ ಹೆಚ್ಚಳದ ಕಸರತ್ತಿನಿಂದಾಗಿ ಸಾಮಾಜಿಕ ನ್ಯಾಯದ ಹೆಸರಲ್ಲಿ ಹೆಚ್ಚುವರಿ ಟಿಕೆಟ್ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಾರ್ಚ್ ಮೊದಲ ವಾರ ಮೋದಿ ಫೈನಲ್ ಮೆಗಾ ಶೋ?
Advertisement
Advertisement
ಪ್ರಮುಖ ಜಾತಿಗಳ ಜೊತೆಗೆ ಸಣ್ಣಪುಟ್ಟ ಜಾತಿಗಳು ಸಹ ಈ ಬಾರಿ ಹೆಚ್ಚುವರಿ ಟಿಕೆಟ್ ಡಿಮ್ಯಾಂಡ್ ಮಾಡುತ್ತಿವೆ. ಈಗಾಗಲೇ ಕೆಲವು ಸಮುದಾಯದ ನಾಯಕರು ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಪ್ರಮುಖ ನಾಯಕರ ಮುಂದೆ ಡಿಮ್ಯಾಂಡ್ ಇಟ್ಟಿದ್ದಾರೆ. ಕೆಲವು ಜಾತಿ ಸಮುದಾಯದ ನಾಯಕರು ಸಭೆ ನಡೆಸಲು ಸಹ ಮುಂದಾಗಿದ್ದಾರೆ. ಹಾಗಾದರೆ ಕಳೆದ ಬಾರಿ ಕಾಂಗ್ರೆಸ್ ನೀಡಿದ ಜಾತಿವಾರು ಟಿಕೆಟ್ ಹಂಚಿಕೆ ಹೇಗಿತ್ತು? ಈ ಬಾರಿ ಇರುವ ಡಿಮ್ಯಾಂಡ್ ಏನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Advertisement
ಲಿಂಗಾಯತರು ಸಮುದಾಯದಲ್ಲಿ ಕಳೆದ ಬಾರಿ 47 ಇದ್ದದ್ದು, ಈ ಬಾರಿ 65 ಇದೆ. ಒಕ್ಕಲಿಗರಲ್ಲಿ ಕಳೆದ ಬಾರಿ- 46, ಈ ಬಾರಿ 55-60 ಇದೆ. ಹಿಂದುಳಿದ ವರ್ಗ ಸಮುದಾಯದಲ್ಲಿ (20 ಸಣ್ಣಪುಟ್ಟ ಜಾತಿಗಳು ಸೇರಿ) ಕಳೆದ ಬಾರಿ- 51, ಈ ಬಾರಿ- 65 ಇದೆ. ಮುಸ್ಲಿಂ ಸಮುದಾಯದಲ್ಲಿ ಕಳೆದ ಬಾರಿ- 17, ಈ ಬಾರಿ- 25-30 ಇದೆ. ಕ್ರಿಶ್ಚಿಯನ್ ಸಮುದಾಯದಲ್ಲಿ ಕಳೆದ ಬಾರಿ- 02 ಇದ್ದದ್ದು, ಈ ಬಾರಿ- 5ರಿಂದ 7 ಇದೆ. ಜೈನ ಸಮುದಾಯದಲ್ಲಿ ಕಳೆದ ಬಾರಿ- 02, ಈ ಬಾರಿ- 3ರಿಂದ 5 ಇದೆ. ಬ್ರಾಹ್ಮಣ ಸಮುದಾಯದಲ್ಲಿ ಕಳೆದ ಬಾರಿ- 6, ಈ ಬಾರಿ- 8ರಿಂದ 10 ಇದೆ. ಎಸ್‌ಸಿ ಸಮುದಾಯದಲ್ಲಿ ಕಳೆದ ಬಾರಿ- 35, ಈ ಬಾರಿ- 45ರಿಂದ 50 ಇದೆ. ಎಸ್‌ಟಿ ಸಮುದಾಯದಲ್ಲಿ ಕಳೆದ ಬಾರಿ- 17 ಇದ್ದದ್ದು, ಈ ಬಾರಿ- 25 ಬೇಡಿಕೆ ಇದೆ. ಇದನ್ನೂ ಓದಿ: ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ – ಶಿವಲಿಂಗೇಗೌಡರ ಮತ್ತೊಂದು ಆಡಿಯೋ ವೈರಲ್
Advertisement
ಹೀಗೆ, ಕಳೆದ ಸಲಕ್ಕಿಂತ ಈ ಬಾರಿ ಹೆಚ್ಚುವರಿ ಟಿಕೆಟ್ ಬೇಡಿಕೆ ಎಲ್ಲಾ ಜಾತಿ ಸಮುದಾಯಗಳಿಂದಲೂ ಶುರುವಾಗಿದೆ ಎನ್ನಲಾಗಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಈ ಬಾರಿ ಕಳೆದ ಸಲಕ್ಕಿಂತ ಹೆಚ್ಚುವರಿ ಟಿಕೆಟ್ ಬೇಕು ಅನ್ನೋದು ಸಮುದಾಯಗಳ ಬೇಡಿಕೆಯಾಗಿದೆ. ಕೈ ಪಾಳಯದಲ್ಲಿ ಟಿಕೆಟ್ ಸಂಖ್ಯೆ ಹೆಚ್ಚಳ ಡಿಮ್ಯಾಂಡ್ ಪಕ್ಷದ ಮಟ್ಟದಲ್ಲಿ ದೊಡ್ಡ ತಲೆನೋವಾಗಿದ್ದು, ಅದನ್ನು ಸರಿಪಡಿಸುವುದೇ ದೊಡ್ಡ ಸವಾಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k