ಬೆಂಗಳೂರು: ಮನೆಯಲ್ಲಿ ಮಕ್ಕಳ ಜೊತೆಗೆ ಪೋಷಕರು ಮಲಗಿದ್ದ ವೇಳೆ ನಾಗರಹಾವೊಂದು ಪ್ರತ್ಯಕ್ಷವಾಗಿ ಆತಂಕಕ್ಕೆ ಒಳಗಾಗಿರುವ ಘಟನೆ ನಡೆದಿದೆ.
ಬೆಂಗಳೂರು (Bengaluru) ಉತ್ತರ ತಾಲೂಕಿನ ಹೆಸರಘಟ್ಟ (Hesaraghatta) ಬಳಿ ಗುಡ್ಡದಹಳ್ಳಿಯಲ್ಲಿ ಘಟನೆ ನಡೆದಿದೆ. ಮಕ್ಕಳು ಮಲಗಿದ್ದ ಹಾಸಿಗೆಯಲ್ಲೇ ಹಾವು ಅಡಗಿತ್ತು. ಆದರೆ, ಅವರಿಗೆ ಹಾವಿನಿಂದ ಯಾವುದೇ ತೊಂದರೆ ಆಗಿಲ್ಲ. ಅದೃಷ್ಟವಶಾತ್ ಜೀವಾಪಾಯದಿಂದ ಪುಟ್ಟ ಮಕ್ಕಳು ಜಸ್ಟ್ ಮಿಸ್ ಆಗಿದ್ದಾರೆ. ಇದನ್ನೂ ಓದಿ: ಮಕ್ಕಳ ಮೇಲೆ ಹಲ್ಲೆ ಕೇಸ್ – ಬೇಬಿ ಕೇರ್ ನಡೆಸ್ತಿದ್ದ ಕಂಪನಿಯಿಂದ ಸ್ಪಷ್ಟನೆ
ಮಕ್ಕಳ ಬಳಿಯೇ ನಾಗರಹಾವು ಇರುವುದನ್ನು ಕಂಡು ಪೋಷಕರು ಕಂಗಾಲಾಗಿದ್ದಾರೆ. ಬರೋಬ್ಬರಿ 5 ಅಡಿ ಉದ್ದವಿದ್ದ ನಾಗರಹಾವನ್ನು ಉರಗ ರಕ್ಷಕರ ಮೂಲಕ ರಕ್ಷಣೆ ಮಾಡಲಾಗಿದೆ. ಹಾವಿನಿಂದ ಯಾವುದೇ ತೊಂದರೆಯಾಗದಂತೆ ಮೊದಲು ಮಕ್ಕಳನ್ನು ರಕ್ಷಿಸಲಾಯಿತು.
ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದ ಉರಗ ರಕ್ಷಕ ಪ್ರಶಾಂತ್ ಸದ್ಯ ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟು ಸಂರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ – ಮಾರಕಾಸ್ತ್ರಗಳು ಪತ್ತೆ
