ಬೆಂಗಳೂರು: ರೌಡಿಶೀಟರ್‌ಗಳ ಮನೆಗಳ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮನೆಯೊಂದರಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ.
ಬೆಂಗಳೂರಿನ ಪೂರ್ವ ವಿಭಾಗದಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಸಿಸಿಬಿ ಡಿಸಿಪಿ ಶ್ರೀಹರಿಬಾಬು ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಇಂದಿರಾನಗರದ ಪ್ರಭಾಕರ್ ಎಂಬಾತನ ಮನೆಯಲ್ಲಿ ಮಾರಾಕಾಸ್ತ್ರಗಳು ಕಂಡುಬಂದಿವೆ. ಇದನ್ನೂ ಓದಿ: ಕಡಿಮೆ ಇತ್ತು ನೀರು – ಆತ್ಮಹತ್ಯೆಗೆ ಹೇಮಾವತಿ ನದಿಗೆ ಹಾರಿ ಮರಳಿನ ಮೇಲೆ ಬಿದ್ದವನ ರಕ್ಷಣೆ
ಅಲ್ಲದೇ, ಅನುಮಾನಿತ ವ್ಯಕ್ತಿಗಳು ಮತ್ತು ಅವರಿಗೆ ಸೇರಿದ ವಾಹನಗಳ ತಪಾಸಣೆ ನಡೆಸಲಾಗಿದೆ. ಮೂವತ್ತಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ.
