– ಸಿಎಂ ಬಳಿಯೇ ಇವೆ 8 ಕ್ಕೂ ಹೆಚ್ಚು ಖಾತೆಗಳು
ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ ಸಂಪುಟ ನೂತನ ಸಚಿವರಿಗೆ ಅಳೆದು ತೂಗಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯಪಾಲರ ಸಹಿ, ಖಾತೆ ಹಂಚಿಕೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.
ಯಾರಿಗೆ ಯಾವ ಖಾತೆ?
ಜಮೀರ್ ಅಹ್ಮದ್ – ವಕ್ಫ್, ವಸತಿ
ರಾಮಲಿಂಗಾರೆಡ್ಡಿ – ಅರಣ್ಯ, ಭೂವಿಜ್ಞಾನ & ಪರಿಸರ
ಲಕ್ಷ್ಮಣ ಸವದಿ – ಸಹಕಾರ
ರುದ್ರಪ್ಪ ಲಮಾಣಿ – ಸಕ್ಕರೆ, ಜವಳಿ
ಕೆ.ಹೆಚ್.ಮುನಿಯಪ್ಪ – ಸಮಾಜ ಕಲ್ಯಾಣ
ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ & ಸಂಸ್ಕೃತಿ
ಯು.ಟಿ.ಖಾದರ್ – ಅಲ್ಪಸಂಖ್ಯಾತರ ಕಲ್ಯಾಣ, ಹಜ್ & ವಕ್ಫ್, ಆರೋಗ್ಯ & ಕುಟುಂಬ ಕಲ್ಯಾಣ
ಟಿ.ರಘುಮೂರ್ತಿ – ಎಸ್‌ಟಿ ಕಲ್ಯಾಣ
ಅಜಯ್ ಸಿಂಗ್ – ಸಣ್ಣ ನೀರಾವರಿ, ವಿಜ್ಞಾನ & ತಂತ್ರಜ್ಞಾನ
ಎನ್.ಚಲುವರಾಯಸ್ವಾಮಿ – ಜಲಸಂಪನ್ಮೂಲ
ಮಧು ಬಂಗಾರಪ್ಪ – ಪ್ರಾಥಮಿಕ & ಪ್ರೌಢಶಿಕ್ಷಣ
ಬಸವರಾಜ ರಾಯರೆಡ್ಡಿ – ಉನ್ನತ ಶಿಕ್ಷಣ
ಶಿವಲಿಂಗೇಗೌಡ – ಅಬಕಾರಿ
ಪುಟ್ಟರಂಗಶೆಟ್ಟಿ – ಪಶುಸಂಗೋಪನೆ
ವಿಜಯಾನಂದ ಕಾಶಪ್ಪನವರ್ – ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ಯಮ
ಸಂತೋಷ್ ಲಾಡ್ – ಕಾರ್ಮಿಕ
ಕೆ.ಎಸ್.ಬಸವಂತಪ್ಪ – ಮುಜರಾಯಿ, ಮೀನುಗಾರಿಕೆ, ಒಳನಾಡು, ಬಂದರು
ಎಸ್.ಎಸ್.ಮಲ್ಲಿಕಾರ್ಜುನ್ – ಗಣಿ & ಭೂವಿಜ್ಞಾನ, ತೋಟಗಾರಿಕೆ
ರಿಜ್ವಾನ್ ಅರ್ಷದ್ – ಆಹಾರ & ನಾಗರಿಕ ಸರಬರಾಜು
ನರೇಂದ್ರ ಸ್ವಾಮಿ – ಕೃಷಿ
ಹೆಚ್.ಸಿ.ಬಾಲಕೃಷ್ಣ – ಪುರಸಭೆ ಆಡಳಿತ
ಬಿ.ನಾಗೇಂದ್ರ – ಸಾಂಖ್ಯಿಕ ಇಲಾಖೆ
ಡಾ. ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್ ಬಳಿ ಇರುವ ಹೆಚ್ಚುವರಿ ಖಾತೆಗಳು ಯಾರಿಗೂ ಹಂಚಿಕೆ ಆಗಿಲ್ಲ. ಸಿಎಂ ಬಳಿ 8 ಕ್ಕೂ ಹೆಚ್ಚು ಖಾತೆಗಳಿವೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನೂ ಸಿಎಂ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

