ಬೆಂಗಳೂರು: ನಗರದ ಮೊದಲ ಟನಲ್ ರಸ್ತೆ (Bengaluru Tunnel Road) ಕಾಮಗಾರಿಗೆ ಇಂದು ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಗುದ್ದಲಿಯಲ್ಲಿ ಅಗೆಯುವ ಮೂಲಕ ಟನಲ್ ರಸ್ತೆ ಕಾಮಗಾರಿಗೆ ಸಿಎಂ ಚಾಲನೆ ಕೊಟ್ಟರು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಸಾರಿಗೆ ಸಚಿವ ಬೈರತಿ ಸುರೇಶ್, ಇಂಧನ ಸಚಿವ ಕೆ.ಜೆ.ಜಾರ್ಜ್, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಉಪಸ್ಥಿತರಿದ್ದರು. ಇದನ್ನೂ ಓದಿ: ಬೆಂಗಳೂರಿನ ಮೊದಲ ಟನಲ್ ರಸ್ತೆ ಕಾಮಗಾರಿಗೆ ಇಂದು ಸಿಎಂ ಭೂಮಿಪೂಜೆ
ಬೆಂಗಳೂರಿನ ಹಸಿರು ಅಭಿಯಾನಕ್ಕೆ ಜಾಗತಿಕ ಗಿನ್ನಿಸ್ ಮನ್ನಣೆ!
ಜೂನ್ 27ರಂದು ಕೆಂಪೇಗೌಡ ಜಯಂತಿಯ ಶುಭ ಸಂದರ್ಭದಲ್ಲಿ ನಡೆದ ಬೃಹತ್ ಹಸಿರು ಅಭಿಯಾನದಲ್ಲಿ, “ಅತಿ ಕಡಿಮೆ ಅವಧಿಯಲ್ಲಿ (12 ಗಂಟೆಗಳಲ್ಲಿ) ವಿವಿಧ ಸ್ಥಳಗಳಲ್ಲಿ ತಂಡವೊಂದರಿಂದ ಅತಿ ಹೆಚ್ಚು ಸಸಿಗಳನ್ನು ನೆಟ್ಟ” ಐತಿಹಾಸಿಕ ಸಾಧನೆಗಾಗಿ ಜಾಗತಿಕ ಮನ್ನಣೆಯ ‘ಗಿನ್ನಿಸ್ ವರ್ಲ್ಡ್… pic.twitter.com/pqlDqQe5nV
— DK Shivakumar (@DKShivakumar) June 28, 2026
ಗುದ್ದಲಿ ಪೂಜೆ ಬಳಿಕ ಸಿಎಂ ಡಿಕೆಶಿ ಯೋಜನೆ ರೂಪುರೇಷೆ ವೀಕ್ಷಿಸಿದರು. ಅಧಿಕಾರಿಗಳಿಂದ ಪೂರ್ತಿ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಹೆಬ್ಬಾಳ ಫ್ಲೈಓವರ್‌ನಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಮೂಲಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಬ್ಬಂದಿ ವಸತಿಗೃಹದವರೆಗೆ ನಿರ್ಮಿಸಲಿರುವ 3 ಪಥಗಳ ಅವಳಿ ಸುರಂಗ ಮಾರ್ಗ ಇದಾಗಿದೆ. ಇದನ್ನೂ ಓದಿ: ಮೈಸೂರು| ಬಿಲ್ ವಿಚಾರಕ್ಕೆ ಗಲಾಟೆ ತೆಗೆದು ಪಬ್ ಮ್ಯಾನೇಜರ್ ಮೇಲೆ ಹಲ್ಲೆ
ಬೆಂಗಳೂರಿನ ಕ್ಷಿಪ್ರ ಬೆಳವಣಿಗೆಗೆ ಪೂರಕವಾಗಿ ಸುಸ್ಥಿರ ಮತ್ತು ಜನಸ್ನೇಹಿ ಮೂಲಸೌಕರ್ಯಗಳ ಅಗತ್ಯವಿದೆ. ಈ ಯೋಜನೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಪ್ರಯಾಣದ ಸಮಯವನ್ನು ಉಳಿಸಲು ಹಾಗೂ ಲಕ್ಷಾಂತರ ಪ್ರಯಾಣಿಕರ ದೈನಂದಿನ ಪ್ರಯಾಣವನ್ನು ಸುಗಮಗೊಳಿಸಲು ಮಹತ್ವದ ಹೆಜ್ಜೆಯಾಗಿದೆ ಎಂದು ಸಿಎಂ ಡಿಕೆಶಿ ತಿಳಿಸಿದ್ದಾರೆ.
