– ಹಣ ನನ್ನದಲ್ಲ ಅಂತ ಆರತಿ ತಟ್ಟೆ, ಹುಂಡಿಗೆ ಎಲ್ಲ ನೋಟುಗಳನ್ನು ಹಾಕಿದ ಸಿಎಂ
ಚಿಕ್ಕಮಗಳೂರು: ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಅವರು ಮಂಗಳಾರತಿಗೆ ಕಾಣಿಕೆ ಹಾಕುವಾಗ 500ರ ನೋಟುಗಳು ನೆಲಕ್ಕೆ ಬಿದ್ದಿತು. ಕೊನೆಗೆ ಈ ಹಣ ನನ್ನದಲ್ಲ ಎಂದು ಎಲ್ಲವನ್ನೂ ಸಿಎಂ ಆರತಿ ತಟ್ಟೆ ಮತ್ತು ಹುಂಡಿಗೆ ಹಾಕಿದ ಪ್ರಸಂಗ ನಡೆಯಿತು.
ಸಿಎಂ ಆದ ಬಳಿಕ ಮೊದಲ ಬಾರಿಗೆ ಕಾಫಿನಾಡು ಮತ್ತು ರಂಭಾಪುರಿ ಮಠಕ್ಕೆ (Rambhapuri Matha) ಸಿಎಂ ಡಿಕೆಶಿ ಇಂದು ಭೇಟಿ ನೀಡಿದರು. ಕ್ಷೇತ್ರನಾಥ ವೀರಭದ್ರಸ್ವಾಮಿ ದರ್ಶನ ಪಡೆದರು. ರಂಭಾಪುರಿ ಮಠದಲ್ಲಿ ಮಂಗಳಾರತಿ ಕಾಣಿಕೆ ಹಾಕಲು ಕಂತೆಯಿಂದ ಹಣ ಎಳೆಯುವಾಗ 500 ರೂ. ಮುಖಬೆಲೆಯ ನೋಟುಗಳು ನೆಲಕ್ಕೆ ಬಿದ್ದವು. ಎಲ್ಲಾ ನೋಟುಗಳನ್ನ ಆಯ್ದುಕೊಂಡ ಸಿಎಂ, ಎಲ್ಲವನ್ನೂ ಆರತಿ ತಟ್ಟೆ ಮತ್ತು ಕಾಣಿಕೆ ಹುಂಡಿಗೆ ಹಾಕಿದರು. ರಂಭಾಪುರಿ ಮಠದಲ್ಲಿ ಶ್ರೀಗಳಿಂದ ಡಿಕೆಶಿಗೆ ಶಾಲು ಹೊದಿಸಿ ಆಶೀರ್ವಾದ ನೀಡಲಾಯಿತು. ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ಸಂವಾದ ವಿಧಾನಸೌಧದಲ್ಲಿ ಕುಳಿತು ಮಾಡಿದ್ರೇ ಪ್ರಯೋಜನ ಆಗಲ್ಲ: ಡಿ.ಕೆ ಶಿವಕುಮಾರ್
ರಂಭಾಪುರಿ ಮಠದಲ್ಲಿ ನೂತನ ದೇವಾಲಯಕ್ಕೆ ಸಿಎಂ ಡಿಕೆಶಿ ಶಂಕುಸ್ಥಾಪನೆ ನೆರವೇರಿಸಿದರು. ರೇಣುಕಾಚಾರ್ಯರ ನೂತನ ದೇವಾಲಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಇಡೀ ದೇಗುಲ ಸಂಪೂರ್ಣ ಕಲ್ಲಿನಿಂದ ನಿರ್ಮಾಣಗೊಳ್ಳಲಿದೆ.
ರಂಭಾಪುರಿ ಮಠಕ್ಕೆ ಇತಿಹಾಸವಿದೆ. ಸುಮಾರು 200 ವರ್ಷಗಳ ಹಳೇ ಕಟ್ಟಡವನ್ನ ತೆರವುಗೊಳಿಸಿ ಹೊಸ ಕಲ್ಲಿನ ಕಟ್ಟಡ ನಿರ್ಮಾಣವಾಗಲಿದೆ. ಮಠದ ಕಟ್ಟಡವನ್ನ ಆಗಾಗ್ಗೆ ನವೀಕರಣಗೊಳಿಸಲಾಗಿದೆ. ಇದನ್ನೂ ಓದಿ: ನಿಮ್ ಸೆಕ್ಯೂರಿಟಿ ಯಾವನಿಗ್ ಬೇಕು? ಮೀನು ವ್ಯಾಪಾರ ಬಂದ್ ಮಾಡಿಸೋಕೆ ಹೇಳಿದ್ಯಾರು? ಅವ್ರನ್ನ ಸಸ್ಪೆಂಡ್ ಮಾಡ್ತೇನೆ: ಸಿಎಂ ಗರಂ

