ಬೆಂಗಳೂರು: ರಾಜ್ಯಾದ್ಯಂತ 10,000 ಯುವ ಸಂಘಗಳನ್ನು ಆರಂಭಿಸಲಾಗುವುದು. ಪ್ರತಿ ಸಂಘಕ್ಕೂ ಸರ್ಕಾರದಿಂದ 10 ಲಕ್ಷ ರೂ. ಹಣ ನೀಡಲಾಗುವುದು ಎಂದು ನೂತನ ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರದ ಬಳಿಕ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಹಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ನನ್ನ ಕನಸಿನ ಚಿಂತನೆ. 10 ಸಾವಿರ ಭಾರತ್ ಜೋಡೊ ಯುವಕರ ಸಂಘ ರಚನೆಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಪ್ರತಿ ಪಂಚಾಯತಿಗೆ ಒಂದು ಸಂಘ ಇರಲಿದೆ. ಸ್ಪೋರ್ಟ್ಸ್, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಯಕತ್ವ ಬೆಳೆಸಲು ಇದನ್ನ ಸ್ಥಾಪನೆ ಮಾಡಲಾಗುವುದು. ಆ ಸಂಘಕ್ಕೆ 10 ಲಕ್ಷ ಹಣವನ್ನು ಸರ್ಕಾರ ಕೊಡಲಿದೆ ಎಂದು ತಿಳಿಸಿದರು.
ಸಂಘ ಹೇಗೆ ನಡೆಯುತ್ತದೆ? ಜಾಗ ಎಲ್ಲಿ ಅಂತ ನಿರ್ಧಾರ ಮಾಡಿದ್ದೇವೆ. ಇದಕ್ಕೆ ಸರ್ಕಾರವೇ ಹಣ ಕೊಡಲಿದೆ. ಯುವಕರು ಬೇರೆ ಕೆಲಸಕ್ಕೆ ಹೋಗದೆ ನಾಯಕತ್ವ ಬೆಳೆಸಲು, ಸಾಂಸ್ಕೃತಿಕತೆ ಬೆಳೆಯಲು, ಪ್ರತಿಭೆ ಗುರುತಿಸಲು ಸಂಘ ರಚನೆ ಮಾಡಲಾಗುವುದು. ಒಂದು ಪಂಚಾಯತಿಗೆ 10 ಲಕ್ಷ ಹಣವನ್ನು ಸರ್ಕಾರವೇ ಕೊಡಲಿದೆ ಎಂದರು.

