ಚಿತ್ರದುರ್ಗ: ನಗರದ ಸಂಗೀತಾ ಅಂಗಡಿಯ ಗೋಡೆ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್‍ಗಳನ್ನು ಕಳ್ಳರು ದೋಚಿದ್ದು, ಕಳ್ಳರ ಕೈಚಳಕ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ವಾಸವಿ ಮಹಲ್ ರಸ್ತೆಯಲ್ಲಿರುವ ಸಂಗೀತ ಮೊಬೈಲ್ ಅಂಗಡಿಗೆ ಸೋಮವಾರ ತಡರಾತ್ರಿ ಮೊಬೈಲ್ ಕದಿಯಲು ಸ್ಕೆಚ್ ಹಾಕಿರುವ ಕಳ್ಳರು ಗೋಡೆ ಕೊರೆದು ಒಳನುಗ್ಗಿದ್ದಾರೆ.
Advertisement
ಗೋಡೆ ಕೊರೆದು ಅಂಗಡಿಯೊಳಗೆ ಬಂದ ಕಳ್ಳರು 1 ಲಕ್ಷಕ್ಕೂ ಅಧಿಕ ಮೌಲ್ಯದ 9 ಮೊಬೈಲ್‍ಗಳನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದಾರೆ. ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದೂ ದೃಶ್ಯದಲ್ಲಿ ಕಳ್ಳರ ಚಹರೆ ಕೂಡ ದಾಖಲಾಗಿವೆ. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ ಪೊಲೀಸರು ಮೂವರು ಕಳ್ಳರು ಜೊತೆಯಾಗಿ ಕೃತ್ಯ ಎಸಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.