Connect with us

Bengaluru City

ಹುಟ್ಟಿದಾಗ ಕುಣಿದಾಡಿದ್ದೆ, ಆದ್ರೆ ಇಂದು ಈ ರೀತಿ ಸಾಲುಗಳನ್ನು ಬರೀತೀನಿ ಅಂದ್ಕೊಂಡಿರ್ಲಿಲ್ಲ: ಅರ್ಜುನ್ ಸರ್ಜಾ

Published

on

Share this

– ಗಣ್ಯರು, ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ

ಬೆಂಗಳೂರು: ದಿವಂಗತ ನಟ ಚಿರಂಜೀವಿ ಸರ್ಜಾ ಅವರ 36ನೇ ವರ್ಷದ ಹುಟ್ಟುಹಬ್ಬಕ್ಕೆ ಸ್ಯಾಂಡಲ್‍ವುಡ್, ನಟ, ನಟಿಯರು ಹಾಗೂ ಗಣ್ಯರು ಶುಭ ಕೋರುತ್ತಿದ್ದು, ಅವರ ಮಾವ ಅರ್ಜುನ್ ಸರ್ಜಾ ಸಹ ಭಾವನಾತ್ಮಕ ಸಾಲುಗಳಿಂದ ಅಳಿಯನಿಗೆ ಶುಭಾಶಯ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ್ ಸರ್ಜಾ, ಸುದೀಪ್, ದರ್ಶನ್ ಸೇರಿದಂತೆ ಹಲವು ಗಣ್ಯರು ಚಿರು ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ಅರ್ಜುನ್ ಸರ್ಜಾ ಅವರು ಚಿರು ಹುಟ್ಟಿದ ಸಂದರ್ಭ, ಅವರು ತೀರಿದ ಬಳಿಕ ಅನುಭವಿಸುತ್ತಿರುವ ಸಂಕಟದ ಬಗ್ಗೆ ಬರೆದುಕೊಂಡಿದ್ದಾರೆ.

ನಟ ಅರ್ಜುನ್ ಸರ್ಜಾ ಇನ್‍ಸ್ಟಾಗ್ರಾಮ್‍ನಲ್ಲಿ ಚಿರು ಫೋಟೋ ಹಾಕಿ ಪೋಸ್ಟ್ ಮಾಡಿದ್ದು, 36 ವರ್ಷಗಳ ಹಿಂದೆ ನೀನು ಹುಟ್ಟಿದಾಗ ಸಂತಸದಿಂದ ಕುಣಿದು ಕುಪ್ಪಳಿಸಿದ್ದೆ. ವಿಧಿಯ ಕ್ರೌರ್ಯವನ್ನು ನಾನು ನಂಬಿರಲಿಲ್ಲ. ನಿನ್ನ ಹುಟ್ಟುಹಬ್ಬದಂದು ಈ ರೀತಿಯ ಪದಗಳನ್ನು ಬರೆಯುತ್ತೇನೆಂದು ನನ್ನ ಹುಚ್ಚು ಕನಸುಗಳಲ್ಲಿಯೂ ಯೋಚಿಸಿರಲಿಲ್ಲ. ನನ್ನ ಸಂದೇಶದಲ್ಲಿ ಯಾವಾಗಲೂ ನೀನು ಜೊತೆಗಿರುತ್ತೀಯ ಮಗನೆ. ಲವ್ ಯು ಸೋ ಮಚ್ ಮೈ ಬೇಬಿ ಎಂದು ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ಗೆ ಹಲವು ಅಭಿಮಾನಿಗಳು ಕಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿ, ಶುಭಾಶಯ ತಿಳಿಸಿದ್ದಾರೆ.

ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಅವನನ್ನು ಕಳೆದುಕೊಂಡ, ಅವನನ್ನು ತಿಳಿದಿದ್ದ ಹಾಗೂ ಪ್ರೀತಿಸಿದ್ದ ಎಲ್ಲರಿಂದಲೂ ಅವನು ತಪ್ಪಿಸಿಕೊಂಡಂತಾಗಿದೆ. ಯಾವಾಗಲೂ ನಗುವುದು ಹಾಗೂ ವಿಷಯಗಳನ್ನು ಬಂದ ರೀತಿಯಲ್ಲೇ ತೆಗೆದುಕೊಳ್ಳುವುದನ್ನು ಅವನಲ್ಲಿ ನೋಡಿದೆ. ಅವನು ಶಾಂತಿ ಹಾಗೂ ಸ್ವರ್ಗದಲ್ಲಿ ಸ್ಥಾನ ಪಡೆದಿದ್ದಾನೆ ಎಂಬುದು ನನಗೆ ಖಾತ್ರಿ ಇದೆ. ಲವ್ ಯು ಮೈ ಬ್ರದರ್ ಚಿರು, ಚೀಯರ್ಸ್ ಆನ್ ಯುವರ್ ಬರ್ಥ್ ಡೇ ಎಂದು ಬರೆದು ಹಾರ್ಟ್ ಸಿಂಬಾಲ್ ಹಾಕಿದ್ದಾರೆ.

ನಟ ದರ್ಶನ್ ಚಿರು ಜೊತೆ ನಾಯಿ ಹಿಡಿದು ನಿಂತಿರುವ ಫೋಟೋ ಪೋಸ್ಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಚಿರು. ರಾಜಮಾರ್ತಾಂಡ ಚಿತ್ರದ ಇಂಟ್ರೋ ಸಾಂಗ್ ಇಂದು ಬಿಡುಗಡೆಯಾಗಿದೆ. ನೋಡಿ ಹರಸಿ ಎಂದು ಹೇಳಿದ್ದಾರೆ. ಹೀಗೆ ಹಲವು ಗಣ್ಯರು ಹಾಗೂ ನಟ, ನಟಿಯರು ಚಿರು ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದಾರೆ.

ಇಂದು ಬೆಳಗ್ಗೆ ಧ್ರುವ ಹಾಗೂ ಮೇಘನಾ ಸಹ ಫೋಟೋ ಹಾಕಿ ಚಿರು ಹಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅಣ್ಣನೊಂದಿಗೆ ಇದ್ದ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಹಾಕಿಕೊಂಡು ಧ್ರುವ ಸರ್ಜಾ ಅಣ್ಣನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಹ್ಯಾಪಿ ಬರ್ಥ್ ಡೇ ಲವ್ ಯು ಫಾರ್ ಎವರ್ ಎಂದು ಬರೆದುಕೊಂಡಿದ್ದಾರೆ. ಚಿಕ್ಕ ವಯಸ್ಸಿನ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಎರಡನೇ ಸ್ಟೇಟಸ್‍ನಲ್ಲಿ 3 ಫೋಟೋಗಳನ್ನು ಸೇರಿಸಿ ಸಣ್ಣವರಿದ್ದಾಗಿನ ಹಾಗೂ ಹಳೆಯ, ಇನ್ನೊಂದು ಇತ್ತೀಚಿನ ಫೋಟೋ ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಚಿರಂಜೀವಿ ಸರ್ಜಾ ಅವರ ರಾಜಮಾರ್ತಾಂಡ ಸಿನಿಮಾದ ಟೈಟಲ್ ಟ್ರ್ಯಾಕ್ ಹಂಚಿಕೊಂಡಿದ್ದಾರೆ. ಈ ಮೂಲಕ ಅಣ್ಣನಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಿನ್ನೆಯೂ ವಿಡಿಯೋ ಪೋಸ್ಟ್ ಮಾಡಿದ್ದ ಧ್ರುವ ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಹೇಳಿದ್ದರು. ಈ ಮೂಲಕ ಅವರ ಹುಟ್ಟುಹಬ್ಬದಂತೆ ಜೂನಿಯರ್ ಚಿರು ಬರಲಿದ್ದಾರೆ ಎಂಬ ಸುಳಿವು ನೀಡಿದ್ದರು.

 

View this post on Instagram

 

Happy Birthday My World! @chirusarja I LOVE YOU! Forever and Always!

A post shared by Meghana Raj Sarja (@megsraj) on

ಚಿರು ಪತ್ನಿ ಮೆಘನಾ ರಾಜ್ ಸಹ ಫೋಟೋ ಹಂಚಿಕೊಂಡು ಸಾಲುಗಳನ್ನು ಬರೆದಿದ್ದು, ಹ್ಯಾಪಿ ಬರ್ತ್ ಡೇ ಮೈ ವಲ್ರ್ಡ್ ಐ ಲವ್ ಯು ಫಾರ್ ಎವರ್ ಆ್ಯಂಡ್ ಆಲ್‍ವೇಸ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಭಾವನಾತ್ಮಕವಾಗಿ ಶುಭಾಶಯ ಕೋರಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement