ರಾಯ್ಪುರ್: ಗೆಳೆಯನೊಬ್ಬ ತನ್ನ ಗೆಳತಿಗೆ (Girlfriend) ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೋಲಿನಿಂದ ಥಳಿಸಿ ಕೊಂದ ಘಟನೆ ಛತ್ತಿಸ್‌ಗಢದ (Chhattisgarh) ಧಮ್ತಾರಿ ಜಿಲ್ಲೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ರೇಶಮಿ ಸಾಹು (25) ಎಂದು ಗುರುತಿಸಲಾಗಿದೆ. ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯ ಟೀ ಸ್ಟಾಲ್‌ನಲ್ಲಿ ಈ ಘಟನೆ ನಡೆದಿದೆ. ರೇಶಮಿ ಜೀವನೋಪಾಯಕ್ಕಾಗಿ ಮಗರ್‌ಲೋಡ್ ನಗರ ಪಂಚಾಯತ್ ಕಚೇರಿ ಬಳಿ ಟೀ ಸ್ಟಾಲ್ ನಡೆಸುತ್ತಿದ್ದಳು. ಈಕೆಗೆ ಖಿಸೋರಾ ಗ್ರಾಮದ ನಿವಾಸಿಯೊಬ್ಬನ ಪರಿಚಯವಾಗಿ ಪ್ರೀತಿಗೆ ಬದಲಾಗಿತ್ತು. ಇಬ್ಬರು 4 ವರ್ಷದಿಂದ ಸಂಬಂಧವನ್ನು ಹೊಂದಿದ್ದರು.
Advertisement
Advertisement
ಆದರೆ ರೇಶಮಿಯ ಗೆಳೆಯ ಆಕೆಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದ. ಅಷ್ಟೇ ಅಲ್ಲದೇ ಈ ವಿಷಯಕ್ಕೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಜಗಳ ತೀವ್ರಗೊಂಡಿದ್ದು, ರೇಶಮಿ ಮೇಲೆ ಆತ ಹಲ್ಲೆ ನಡೆಸಿದ್ದಾನೆ. ಅದಾದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಮಹಾ-ಕರ್ನಾಟಕ ಗಡಿ ವಿವಾದ; ಇಂದು ಮುಖಾಮುಖಿಯಾಗ್ತಾರೆ ಎರಡೂ ರಾಜ್ಯಗಳ ಸಿಎಂ
Advertisement
Advertisement
ಆತ ನಡೆಸಿದ ಹಲ್ಲೆಯಿಂದಾಗಿ ತಲೆಗೆ ಗಂಭೀರ ಗಾಯವಾಗಿತ್ತು. ರೇಶಮಿಯಾಳ ತಲೆಗೆ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿ ಮಗರಲೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. (Arrest) ಇದನ್ನೂ ಓದಿ: ಬೆಳಗಾವಿಯ ಲಾಡ್ಜ್‌ನಲ್ಲಿ ವ್ಯಕ್ತಿ ಅನುಮಾನಸ್ಪದವಾಗಿ ಸಾವು