ಬಾಗಲಕೋಟೆ: ದರ್ಶನ್ ಬುದ್ಧಿವಂತರಾಗಿದ್ದು ಮುಳುಗುವ ಹಡಗನ್ನು ಏರುವ ಮೂರ್ಖತನ ಮಾಡಲಿಕ್ಕಿಲ್ಲ ಎನ್ನುವ ವಿಶ್ವಾಸವಿದೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.
ದರ್ಶನ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆದರೆ ಮುಳುಗುವ ಹಡಗನ್ನು ಏರುವ ಮೂರ್ಖತನದ ದರ್ಶನನವನ್ನು ಅವರು ಮಾಡಲಿಕ್ಕಿಲ್ಲ ಎಂಬ ವಿಸ್ವಾಸವಿದೆ. ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಸ್ಟಾರ್ ಗಳು ಎಂದು ಹೇಳಿದರು.
Advertisement
ರಾಹುಲ್ ಗಾಂಧಿ ಅವರಿಗೆ ಮದುವೆ ವಯಸ್ಸು ಆಗ್ತಿದೆ. ಗೋವಿಂದ್ ಕಾರಜೋಳರ ಆಫರ್ ಬಿಟ್ರೆ ಜೀವನದಲ್ಲಿ ಮತ್ತೆ ಇಂತಹ ಅವಕಾಶ ಅವರಿಗೆ ಸಿಗಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರು ಇದರ ಮಧ್ಯಸ್ಥಿಕೆ ವಹಿಸಲಿ ಎಂದು ಅವರು ಹೇಳಿದರು.
Advertisement
ಲಿಂಗಾಯತ ಹಾಗೂ ವೀರಶೈವ ಕಿತ್ತಾಟ ಇದು ಸಿಎಂ ಸಿದ್ದರಾಮಯ್ಯ ಅವರ ಕ್ರಿಮಿನಲ್ ಕ್ಯಾಬಿನೆಟ್ ಹೆಣೆದ ರಾಜಕೀಯ ಅಸ್ತ್ರ. ಲಿಂಗಾಯತ ವ್ಯಕ್ತಿ ಮುಖ್ಯಮಂತ್ರಿಯಾಗೋದನ್ನ ತಪ್ಪಿಸಲು ಈ ರೀತಿಯಾಗಿ ಮಾಡಲಾಗುತ್ತಿದೆ. ಇದರಲ್ಲಿ ಕೆಟ್ಟ ಹುಳುಗಳು ಇವೆ. ಅವು ಬೇಗನೇ ತೀರಿಹೋಗ್ತವೆ ಎಂದು ಟಾಂಗ್ ನೀಡಿದರು.
Advertisement
ರಮಾನಾಥ ರೈ ಅವರಿಗೆ ಗೃಹ ಇಲಾಖೆ ಕೊಟ್ಟರೆ ಅದು ರಾಜ್ಯದ ಗ್ರಹಚಾರ. ನಾಲಿಗೆ ತಲೆ ಮೇಲೆ ಹಿಡಿತವಿಲ್ಲದವರಿಗೆ ಈ ಖಾತೆ ನೀಡುವುದು ಸರಿಯಲ್ಲ. ಐಟಿ ರೇಡ್ ಬಗ್ಗೆ ಕಾಂಗ್ರೆಸ್ ನಾಯಕರು ಭಯಗೊಳ್ತಿರೋದನ್ನ ನೋಡಿದ್ರೆ ಇವರ ಬಳಿ ಅಕ್ರಮ ಸಂಪತ್ತು ಸಾಕಷ್ಟಿದೆ ಎಂಬ ಸಂಶಯ ಹುಟ್ಟಿಕೊಳ್ಳುತ್ತೆ. ಹಾಗಾಗಿ ಇನ್ನಷ್ಟು ಐಟಿ ದಾಳಿಗಳಾಗಲಿ ಎಂದರು.