ಚಾಮರಾಜನಗರ: ಮುನಿಸು ಎಲ್ಲಾ ಕಾಮನ್. ನನಗೂ ಸಚಿವ ಸ್ಥಾನ ಕೊಡದೇ ಇದ್ದಿದ್ದರೆ ಎರಡು-ಮೂರು ದಿನ ಮುನಿಸಿಕೊಳ್ಳುತ್ತಿದ್ದೆ ಎಂದು ಸಚಿವ ಪುಟ್ಟರಂಗಶೆಟ್ಟಿ (Puttaranga Shetty) ಪ್ರತಿಕ್ರಿಯಿಸಿದರು.
ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಶಾಸಕರ ಕುರಿತು ಮಾತನಾಡಿದ ಅವರು, ಮುನಿಸು ಎಲ್ಲಾ ಕಾಮನ್. ರಾಜಕಾರಣದಲ್ಲಿ ಒಳ್ಳೆದು, ಕೆಟ್ಟದ್ದು ಇರುತ್ತದೆ. ಯಾರು ಮುನಿಸಿಕೊಂಡವ್ರೆ ಅವರು ಕೂಡ ಸಮಾಧಾನ ಆಗುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕದ ರಾಜಕೀಯ ಹೊಲಸು ಮಾಡಿದ್ದೇ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
ವನ್ಯಜೀವಿ ಮಾನವ ಸಂಘರ್ಷ ಹೆಚ್ಚಳ ಕುರಿತು ಮಾತನಾಡಿ, ಪ್ರಾಣಿಗಳಿಗೆ ಕಾಡಿನಲ್ಲಿ ಮೇವು, ನೀರು ಸಿಗ್ತಿಲ್ಲ. ಹುಲಿ, ಚಿರತೆಗಳಿಗೆ ಮಾಂಸಾಹಾರವೇ ಬೇಕು. ಇದೀಗ ಕಾಡುಹಂದಿ, ಜಿಂಕೆ ಮೇವು ಅರಸಿ ನಾಡಿಗೆ ಬಂದಿವೆ. ಈ ಪ್ರಾಣಿಗಳನ್ನು ಹುಡುಕಿಕೊಂಡು ಚಿರತೆ, ಹುಲಿ ಬಂದಿವೆ. ಹೀಗಾಗಿಯೇ ಸಂಘರ್ಷ ನಡೆಯುತ್ತಿದೆ ಎಂದರು.
ಆನೆಗಳನ್ನು ರೈಲ್ವೆ ಬ್ಯಾರಿಕೇಡ್ ಅಳವಡಿಸಿ ತಪ್ಪಿಸಬಹುದು. ಆದರೆ ಚಿರತೆ, ಹುಲಿ ಹಾವಳಿ ತಪ್ಪಿಸಲು ಆಗಲ್ಲ. ಸೆರೆ ಹಿಡಿದು ಕಾಡಿಗೆ ಬಿಟ್ಟರು ಕೂಡ ವಾಪಾಸ್ ಬರ್ತಿದ್ದಾವೆ. ಅರಣ್ಯಾಧಿಕಾರಿಗಳು ಕೂಡ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನನಗೆ ಸಚಿವ ಸ್ಥಾನ ನೀಡಲೇಬೇಕು, ಅದನ್ನು ಬಿಟ್ಟು ಬೇರೆ ಮಾತುಕತೆ ಇಲ್ಲ: ಕೃಷ್ಣಪ್ಪ ಖಡಕ್ ಮಾತು



