ಬೆಳಗಾವಿ: ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್‍ನಲ್ಲಿ (Gokak) ಉದ್ಯಮಿ (Businessman) ಹತ್ಯೆ ಪ್ರಕರಣ ಸಂಬಂಧ ಶಹರ ಠಾಣೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೊಯಿನ್ ಪಟೇಲ್ (24), ಅಬುತಾಲ್ ಮುಲ್ಲ (21) ಬಂಧಿತ ಆರೋಪಿಗಳು. ಈ ಆರೋಪಿಗಳಿಬ್ಬರೂ ಎ2 ಆರೋಪಿ ಶಫತ್ ತ್ರಾಸಗಾರ್‍ನ ಸ್ನೇಹಿತರು. ಉದ್ಯಮಿ ರಾಜು ಝಂವರ್ ಕೊಲೆಯಾಗುವ ನಾಲ್ಕು ದಿನಗಳ ಮಧ್ಯೆ ಎ2 ಆರೋಪಿ ಶಫತ್ ತ್ರಾಸಗಾರ್ ಎ1 ಆರೋಪಿ ಡಾ.ಸಚಿನ್ ಶಿರಗಾವಿ ಬಳಿ 50 ಸಾವಿರ ರೂ. ಸುಪಾರಿ ಪಡೆದಿದ್ದರು. ಈ ಸುಪಾರಿ ಹಣವನ್ನು ಆರೋಪಿಗಳಾದ ಮೊಯಿನ್ ಪಟೇಲ್, ಅಬುತಾಲ್ ಮುಲ್ಲ ಹಾಗೂ ಶಫತ್ ತ್ರಾಸಗಾರ್ ಸಮವಾಗಿ ಹಂಚಿಕೊಂಡಿದ್ದರು.
Advertisement
Advertisement
ಉದ್ಯಮಿ ರಾಜು ಝಂವರ್ ಫೆಬ್ರವರಿ 1ರಂದು ಗೋಕಾಕ್ ನಿಂದ ನಾಪತ್ತೆಯಾಗಿದ್ದು, ನಗರದ ಸಿಟಿ ಆಸ್ಪತ್ರೆ ಬಳಿ ಇವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು, ಉದ್ಯಮಿ ರಾಜು ಝಂವರ್‍ಗೆ ಕೊನೇ ಬಾರಿ ಕರೆ ಮಾಡಿದ್ದವರನ್ನು ಕರೆಸಿ ವಿಚಾರಣೆ ನಡೆಸಿದ್ದರು. ರಾಜು ಝಂವರ್ ನಾಪತ್ತೆಗೂ ಮುನ್ನ ವೈದ್ಯ ಡಾ.ಸಚಿನ್ ಶಿರಗಾವಿಯಿಂದ ದೂರವಾಣಿ ಕರೆ ಹೋಗಿತ್ತು.
Advertisement
Advertisement
ಮಾಹಿತಿ ತಿಳಿದ ಪೊಲೀಸರು ಡಾ.ಸಚಿನ್ ಶಿರಗಾವಿ ಅವರನ್ನು ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ. ಉದ್ಯಮಿ ರಾಜು ಝಂವರ್ ಎ-1 ಆರೋಪಿ ಡಾ.ಸಚಿನ್ ಅವರಿಗೆ ಸಾಲ ನೀಡಿದ್ದರು. ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕಾಗಿ ವೈದ್ಯ ಡಾ.ಸಚಿನ್ ಶಿರಗಾವಿ ಅವರು ಉದ್ಯಮಿ ರಾಜು ಅವರನ್ನು ಹತ್ಯೆ ಮಾಡುವಂತೆ ಎ-2 ಆರೋಪಿ ಶಫತ್ ಸೇರಿದಂತೆ ಮೂವರಿಗೆ ಸುಪಾರಿ ನೀಡಿದ್ದರು.
ಫೆಬ್ರವರಿ 10ರಂದು ಯೋಗಿಕೊಳ್ಳ ಮಾರ್ಗದ ಬಳಿ ಉದ್ಯಮಿ ರಾಜು ಝಂವರ್ ಅವರನ್ನು ಕೊಲೆಗೈದು ಬಳಿಕ ಕೊಳವಿ ಗ್ರಾಮದ ಬಳಿ ಘಟಪ್ರಭಾ ಬಲದಂಡೆ ಕಾಲುವೆಗೆ ಶವ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಘಟನೆ ನಡೆದು ಆರು ದಿನಗಳ ಬಳಿಕ ಉದ್ಯಮಿ ರಾಜು ಝಂವರ್ ಶವ ಪತ್ತೆಯಾಗಿತ್ತು. ಇದನ್ನೂ ಓದಿ: ಶಿವಸೇನೆ ಹೆಸರು ಚಿಹ್ನೆಗಾಗಿ ಫೈಟ್ – ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ
ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಬಂಧಿತರಿಂದ ರಾಡ್ ಸೇರಿ ಇನ್ನಿತರ ಮಾರಕಾಸ್ತ್ರಗಳನ್ನು ಜಪ್ತಿಗೊಳಿಸಲಾಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ VS ರೂಪಾ – ಸರ್ಕಾರಕ್ಕೆ ಎಲ್ಲರ ಮೇಲೂ ಕ್ರಮ ಕೈಗೊಳ್ಳುವ ಶಕ್ತಿಯಿದೆ: ಗೋಪಾಲಯ್ಯ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k