Bengaluru CityKarnatakaLatestMain Post

ಬೆಂಗ್ಳೂರಲ್ಲಿ ಆಪರೇಷನ್ ಬುಲ್ಡೋಜರ್ ಆರಂಭಿಸಿದ BBMP

ಬೆಂಗಳೂರು: ಬಿಬಿಎಂಪಿ (BBMP) ಕಡೆಗೂ ಆಪರೇಷನ್ ಬುಲ್ಡೋಜರ್ ಆರಂಭಿಸಿದೆ. ಮಹಾದೇವಪುರ ವ್ಯಾಪ್ತಿಯ ಯಮಲೂರಿನ ದಿವ್ಯಾಶ್ರೀ ಎಪ್ಸಿಲಾನ್ ವಿಲಾಸಿ ವಿಲ್ಲಾಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರೋದು ಸಾಬೀತಾಗಿದೆ.

BBMP

ಹೀಗಾಗಿ ದಿವ್ಯಾಶ್ರೀ ವಿಲ್ಲಾದವರು ರಾಜಕಾಲುವೆ ಮೇಲೆ ಕಟ್ಟಿದ್ದ ಸ್ಲಾಬನ್ನು ಬಿಬಿಎಂಪಿ ಜೆಸಿಬಿ (JCB) ಬಳಸಿ ತೆರವು ಮಾಡಿದೆ. ಎಪ್ಸಿಲಾನ್ ವಿಲ್ಲಾ (Epsilon Residential Villas) ಒತ್ತುವರಿ ಮಾಡಿದ್ದ 20 ಅಡಿ ಜಾಗವನ್ನು ಮತ್ತೆ ಬಿಬಿಎಂಪಿ ಸುಪರ್ಧಿಗೆ ತೆಗೆದುಕೊಂಡಿದೆ. ಮತ್ತೊಂದ್ಕಡೆ ಬೆಳ್ಳಂದೂರು ಕೆರೆಯಲ್ಲಿ ಹೂಳೆತ್ತುವ ಕಾರ್ಯವನ್ನು ಬಿಬಿಎಂಪಿ ಈಗ ಶುರು ಮಾಡಿಕೊಂಡಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಹಾವಳಿ – ಕಾಣೆಯಾಗಿದ್ದಾರೆಂದು ಸಚಿವರು, ಸಂಸದರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‌

ಇಕೋ ಸ್ಪೇಸ್ ಬಳಿಯ ಒತ್ತುವರಿ ವಿಚಾರದಲ್ಲಿ ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ. ಇಕೋ ಸ್ಪೇಸ್ ಬಳಿಯ ಸಾಮಾನ್ಯ ನಾಲಾವನ್ನೇ ರಾಜಕಾಲುವೆ ಎಂದು ಕೆಆರ್‌ಪುರ ತಹಶೀಲ್ದಾರ್ ಅಜಿತ್ ಬಿಂಬಿಸಲು ಪ್ರಯತ್ನಿಸಿದ್ದಾರೆ. ಇಕೋ ಸ್ಪೇಸ್ ಬಳಿ ಪರಿಶೀಲನೆಗೆ ಬಂದಿದ್ದ ಬೆಂಗಳೂರು ನಗರ ಡಿಸಿ ಶ್ರೀನಿವಾಸ್ ಮತ್ತು ತಹಶೀಲ್ದಾರ್ ಅಜಿತ್ ಪ್ರತಿಕ್ರಿಯೆ ನೀಡಲಾಗದೇ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಹಿಜಬ್ ಪ್ರಕರಣ: ಶಾಲಾ ವಿದ್ಯಾರ್ಥಿಗಳನ್ನು ಹೈಕೋರ್ಟ್ ಕೈದಿಗಳಿಗೆ ಹೋಲಿಸಿದೆ – ಸುಪ್ರೀಂಕೋರ್ಟ್‌ನಲ್ಲಿ 2 ಗಂಟೆ ಮಹತ್ವದ ವಿಚಾರಣೆ

Live Tv

Leave a Reply

Your email address will not be published.

Back to top button