ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಆತ್ಮಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿದ್ದು, ಪೊಲೀಸತು ತನಿಖೆ ಮುಂದುವರಿಸಿದ್ದಾರೆ.
ನಿನ್ನೆ ಸೌಂದರ್ಯ ಪತಿ ಡಾ. ನೀರಜ್ ಅವರನ್ನು ಪೊಲೀಸರು ವಿಚಾರಣೆಗೆ ಒಳಡಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಇದಾದ ಬಳಿಕ ಮನೆ ಕೆಲಸದವರ ಹೇಳಿಕೆಯನ್ನು ಕೂಡ ಪೊಲೀಸರು ಪಡೆದುಕೊಂಡಿದ್ದಾರೆ.
Advertisement
Advertisement
ಮನೆ ಕೆಲಸದವರು ಹೇಳಿದ್ದೇನು..?
ಮನೆ ಕೆಲಸದ ವಿಚಾರವಾಗಿ ಮೇಡಂ ಬಳಿ ಕೇಳೋಕೆ ಹೋದೆ. ರೂಂ ಲಾಕ್ ಆಗಿತ್ತು. ಸಾಕಷ್ಟು ಬಾರಿ ಕರೆದ್ರೂ ಮೇಡಂ ಮಾತನಾಡಿಲ್ಲ. ಡೋರ್ ಓಪನ್ ಕೂಡ ಮಾಡುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಆತಂಕವಾಯ್ತು. ಸರ್ ಬೇರೆ ಡ್ಯೂಟಿಗೆ ಹೋಗಿದ್ರು. ಕೂಡಲೇ ಸರ್ ಗ ಕಾಲ್ ಮಾಡಿ, ಮೇಡಂ ಮಾತಾಡ್ತಿಲ್ಲ. ಡೋರ್ ಕೂಡ ಓಪನ್ ಮಾಡ್ತಿಲ್ಲ ಅಂತ ಹೇಳ್ದೆ. ಕೂಡಲೇ ಸರ್ ಬಂದು ನೋಡಿ ಕರೆದ್ರು ಪ್ರತಿಕ್ರಿಯೆ ಬರ್ಲಿಲ್ಲ. ಆಮೇಲೆ ಹೊರಗಿಂದ ನೋಡಿದಾಗ ಹ್ಯಾಂಗ್ ಮಾಡಿಕೊಂಡಿರೋ ವಿಚಾರ ಗೊತ್ತಾಯ್ತು. ಇದನ್ನೂ ಓದಿ: EXCLUSIVE: ಪೊಲೀಸರ ಮುಂದೆ ಡಾ. ಸೌಂದರ್ಯ ಪತಿ ಡಾ. ನೀರಜ್ ಹೇಳಿದ್ದೇನು..?
Advertisement
Advertisement
ಮನೆ ಸರ್ಚ್ ಮಾಡಿದ್ರೂ ಸಿಕ್ಕಿಲ್ಲ ಯಾವುದೇ ಸಾಕ್ಷ್ಯ..!
ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನಿನ್ನೆ ಸೌಂದರ್ಯ ಪತಿ ಸಮ್ಮುಖದಲ್ಲಿ ಸತತ 2.30 ಗಂಟೆಗಳ ಕಾಲ ಸ್ಥಳ ಮಹಜರು ಮಾಡಿದ್ದಾರೆ. ಇಡೀ ಮನೆ ಹುಡುಕಾಡಿದ್ರೂ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ. ಆ ರೂಮ್‍ನಲ್ಲಿ ಕೂಡ ಯಾವುದೇ ಅನುಮಾನದ ವಸ್ತು ದೊರಕಿಲ್ಲ. ಡೆತ್‍ನೋಟ್ ಸಿಕ್ಕಿದ್ರೆ ಸಾವಿಗೆ ಅಸಲಿ ಕಾರಣವಾದರೂ ತಿಳಿಯುತ್ತಿತ್ತು. ಸಾಂದರ್ಭಿಕ ಸಾಕ್ಷ್ಯಗಳು ಖಿನ್ನತೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳುತ್ತಿದ್ದು, ಪೊಲೀಸರು ಕೂಡ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ.
ಬಿಎಸ್‍ವೈ ಮೊಮ್ಮಗಳು ಸೌಂದರ್ಯ ಅವರು ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಅವರ ಪತಿ ಡಾ. ನಿರಂಜನ್ ಕೂಡ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ದಂಪತಿಗೆ 9 ತಿಂಗಳ ಗಂಡು ಮಗು ಇದೆ. ರಾಮಯ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಬೌರಿಂಗ್‍ನಲ್ಲೇ ಸರ್ಜನ್ ಆಗಿದ್ದ ಸೌಂದರ್ಯ ಅವರು ಮಗುವಾದ ನಂತರ ಕೆಲಸ ಬಿಟ್ಟಿದ್ದರು. ನಂತರ ಡಿಪ್ರೆಷನ್‍ಗೆ ಒಳಗಾಗಿದ್ದರು. ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಸೌಂದರ್ಯ ಹಾಗೂ ಪತಿ ಡಾ. ನಿರಂಜನ್ ಅವರು ಧವಳಗಿರಿ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು. ಆದರೆ ಶುಕ್ರವಾರ ಡಾಲರ್ಸ್ ಕಾಲೋನಿಯ ಲೆಗೆಸ್ಸಿ ಅಪಾರ್ಟ್ ಮೆಂಟ್ ಫ್ಲ್ಯಾಟ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 11 ಗಂಟೆಯ ಸುಮಾರಿಗೆ ಮಗುವನ್ನು ಪಕ್ಕದ ರೂಮ್‍ನಲ್ಲಿ ಮಲಗಿಸಿ ತಾನು ಬೇರೊಂದು ರೂಮ್‍ನಲ್ಲಿ ಸೌಂದರ್ಯ ಸೂಸೈಡ್ ಮಾಡಿಕೊಂಡಿದ್ದಾರೆ. ಸಂಜೆ ಅಬ್ಬಿಗೆರೆ ಫಾರಂ ಹೌಸ್‍ನಲ್ಲಿ ಲಿಂಗಾಯತ ಸಂಪ್ರದಾಯದಂತೆ ಸೌಂದರ್ಯ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದರು.