ಬ್ರೆಸಿಲಿಯಾ: ಬ್ರೆಜಿಲ್ನ (Brazil) ಹೋಟೆಲ್ನ 7ನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಹೋಟೆಲ್ ಕಿಟಕಿಯ ಅಲ್ಯೂಮಿನಿಯಂ ಚೌಕಟ್ಟಿಗೆ ಮಹಿಳೆ ಒರಗಿಕೊಂಡು ನಿಂತಿದ್ದರು. ಆದರೆ, ಕಿಟಕಿ ಮುರಿದು ಏಳನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ನಡೆದಾಗ ಆಕೆಯ ಗೆಳೆಯ ಕಾರಿಡಾರ್ನಲ್ಲಿ ನಿಂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಿಪಬ್ಲಿಕನ್ ಪಕ್ಷಕ್ಕೆ ಸೋಲಿನ ಬೆನ್ನಲ್ಲೇ ಚುನಾವಣಾ ಪೋಸ್ಟ್ಗಳು ಡಿಲೀಟ್ – ಮಸ್ಕ್ಗೆ 2.7 ಲಕ್ಷ ಕೋಟಿ ನಷ್ಟ
ಎರಡು ಮಕ್ಕಳ ತಾಯಿ ರೆನಾಟಾ ರೆಬೆಕಾ ನೆಗ್ರಾವೊ ಸಲ್ಡಾನ್ಹಾ ಡಾಸ್ ಸ್ಯಾಂಟೋಸ್ ಅವರು ಮರನ್ಹಾವೊ ರಾಜ್ಯದ ರಾಜಧಾನಿ ಸಾವೊ ಲೂಯಿಸ್ನಲ್ಲಿರುವ ಪೊಂಟಾ ಡಿ ಏರಿಯಾದಲ್ಲಿರುವ ರಿಯೊ ಪೊಟಿ ಹೋಟೆಲ್ನ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.
😱 Tragedy in Brazil: 26-year-old woman falls to her death from the seventh floor of a hotel after simply leaning against a window
The incident occurred on November 3 at the Rio Poty Hotel in São Luís. Renata Rebeca Saldanha dos Santos leaned against a window. The structure gave way, and she fell from the seventh floor.
Her boyfriend was questioned by police over suspicions of involvement in her death, but surveillance footage showed that he neither pushed nor assaulted her. He was released.
Police are treating the incident as an accident. The cause of the window’s structural failure is still under investigation.
— NEXTA (@nexta_tv) November 5, 2026
ರೆನಾಟಾ ಮತ್ತು ಆಕೆಯ ಗೆಳೆಯ ಹೋಟೆಲ್ನ ತಮ್ಮ ರೂಮ್ಗೆ ಹೋಗುತ್ತಿದ್ದರು. ಈ ವೇಳೆ ಕಳೆದು ಹೋಗಿದ್ದ ರೂಮ್ ಕೀಗಾಗಿ ಹುಡುಕಾಟ ನಡೆಸಿದ್ದರು. ಹುಡುಕಾಟದ ವೇಳೆ ರೆನಾಟಾ ಕಿಟಕಿಗೆ ಒರಗಿ ನಿಂತರು. ಕಿಟಕಿ ಮುರಿದು ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಇದನ್ನೂ ಓದಿ: ಇರಾನ್ ತೈಲ ವ್ಯಾಪಾರಕ್ಕೆ ನೆರವು: ಭಾರತೀಯ ಉದ್ಯಮಿ, ಪತ್ನಿ, 9 ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ
ಆಕೆಯ ಗೆಳೆಯ ಕೆಲವು ಸೆಕೆಂಡುಗಳ ಕಾಲ ಅಲ್ಲೇ ನಿಶ್ಚಲಯವಾಗಿ ನಿಂತಿದ್ದ. ಸ್ವಲ್ಪ ಸಮಯದ ನಂತರ ಹೋಟೆಲ್ ಉದ್ಯೋಗಿಯೊಬ್ಬರು ಸ್ಥಳಕ್ಕೆ ಆಗಮಿಸುತ್ತಾರೆ. ಹಾನಿಗೊಳಗಾದ ಕಿಟಕಿ ಗಮನಿಸಿ, ಯಾರೋ ಕೆಳಗೆ ಬಿದ್ದಿದ್ದಾರೆ ಎಂಬುದನ್ನು ಅರಿತುಕೊಳ್ಳುತ್ತಾರೆ. ಘಟನೆ ನಡೆದಾಗ ಆ ಜೋಡಿಯು ಯಾವುದೋ ಅಮಲಿನಲ್ಲಿದ್ದಂತೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಗಾಗಿ ಮಹಿಳೆಯ ಗೆಳೆಯನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ನಂತರ ಅವನನ್ನು ಬಿಡುಗಡೆ ಮಾಡಿದ್ದಾರೆ.
