ಚಿಕ್ಕಮಗಳೂರು: ವಾಟರ್ ಹೀಟರ್ (Water Heater) ಹಾಕಿದ್ದ ಬಕೆಟ್ ಮುಟ್ಟಿ ಬಾಲಕ ಸಾವನ್ನಪ್ಪಿದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ (Sakharayapatna) ನಡೆದಿದೆ.
ಈತ 2ನೇ ತರಗತಿ ಬಾಲಕ ನೀಲಾಂಶ್ (8) ಮೃತ ದುರ್ದೈವಿ. ಭಾನುವಾರ (ನ.1) ಶಾಲೆಗೆ ರಜೆ ಇದ್ದಿದ್ದರಿಂದ ಮನೆಯಲ್ಲಿ ಒಬ್ಬನೇ ಇದ್ದ. ಸ್ನಾನಕ್ಕೆ ನೀರು ಕಾಯಿಸಲು ಕರೆಂಟ್ ವಾಟರ್ ಹೀಟರ್ ಹಾಕಿ, ಬಕೆಟ್ನಲ್ಲಿದ್ದ ನೀರಿಗೆ ಕೈ ಹಾಕಿದಾಗ ಬಾಲಕ ವಿದ್ಯುತ್ ಶಾಕ್ನಿಂದ (Electric Shock) ಸಾವನ್ನಪ್ಪಿದ್ದಾನೆ.ಇದನ್ನೂ ಓದಿ: ಕೊಪ್ಪಳ | ಬೈಕ್ಗೆ ಲಾರಿ ಡಿಕ್ಕಿ – ತಂದೆ, ಇಬ್ಬರು ಮಕ್ಕಳ ದಾರುಣ ಸಾವು
ಮನೆಗೆ ಪೋಷಕರು ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ದೇವಾಲಯದಲ್ಲಿ ನವಗ್ರಹ ವಿಗ್ರಹ ಧ್ವಂಸ – ಬಿಹಾರ ಮೂಲದ ಕಿಡಿಗೇಡಿ ಅರೆಸ್ಟ್
