ದಾವಣಗೆರೆ: ದಿನಪೂರ್ತಿ ಎಸ್‌ಐಆರ್ (SIR) ಡ್ಯೂಟಿ ಮಾಡಿ ಮನೆಗೆ ಬಂದಿದ್ದ ಬಿಎಲ್ಒ (BLO) ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ಘಟನೆ ಚನ್ನಗಿರಿ (Channagiri) ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ನಡೆದಿದೆ.
ಡಿ.ಆರ್.ರಾಜಪ್ಪ (57) ಹೃದಯಾಘಾತದಿಂದ ಸಾವನ್ನಪ್ಪಿದ ಬಿಎಲ್ಒ. ಅವರು ಚಿರಡೋಣಿ ಗ್ರಾಮ ಪಂಚಾಯತ್‌ನಲ್ಲಿ ಬಿಲ್ ಕಲೆಕ್ಟರ್ ಆಗಿದ್ದರು. ಜು.10 ರಂದು ಎಸ್‌ಐಆರ್ ಕೆಲಸದ ಮೇಲೆ ಮನೆ ಮನೆಗೆ ಭೇಟಿ ನೀಡಿ, ವಾಪಸ್ ಆಗಿದ್ದರು. ಇದನ್ನೂ ಓದಿ: ಬೀದರ್ | SIR ಸರ್ವೆ ವೇಳೆ ಮತ್ತೊಬ್ಬ BLO ಹೃದಯಾಘಾತದಿಂದ ಸಾವು
ರಾತ್ರಿ 11 ಗಂಟೆ ಸುಮಾರಿಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ. ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: SIR ಕರ್ತವ್ಯಕ್ಕೆ ಹೊರಟಿದ್ದ ವೇಳೆ ಹೃದಯಾಘಾತದಿಂದ BLO ಸಾವು
