ದಾವಣಗೆರೆ: ಭದ್ರ ಜಲಾಶಯದಿಂದ (Bhadra Dam) ಬಲದಂಡೆ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ (BJP) ಹಾಗೂ ರೈತ ಒಕ್ಕೂಟ ಸೇರಿ ದಾವಣಗೆರೆ (Davanagere) ಹೊರ ವಲಯದ ಬಾಡ ಕ್ರಾಸ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಯುತ್ತಿದೆ.
ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P Renukacharya) ನೇತೃತ್ವದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಪ್ಪರ್ ಭದ್ರಗೆ ಮೂರು ಟಿಎಂಸಿ ನೀರು ಬಿಟ್ಟು ಭದ್ರ ಅಚ್ಚು ಕಟ್ಟು ಪ್ರದೇಶದ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ. ಮಳೆ ಇಲ್ಲದೇ ತೋಟ, ಬೆಳೆಗಳು, ಭತ್ತ ಒಣಗುತ್ತಿವೆ. ಕೆರೆಗಳು ಬತ್ತಿ ಅಂತರ್ಜಲ ಮಟ್ಟ ಕುಸಿದಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಭದ್ರ ಬಲ ದಂಡೆ ನಾಲೆಗೆ ನೀರು ಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬರಪೀಡಿತ ಪಟ್ಟಿಗೆ ಜಗಳೂರು ಸೇರಿಸದಿದ್ರೆ ರಾಜೀನಾಮೆ ನೀಡುತ್ತೇನೆ: ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ
ಈ ಬಗ್ಗೆ ಮಾತನಾಡಿರುವ ಎಂ.ಪಿ ರೇಣುಕಾಚಾರ್ಯ ಅವರು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮನವಿ ಮಾಡಿದ್ದೆವು. ಡಿ.ಕೆ ಶಿವಕುಮಾರ್ ಅವರು ನೀರಾವರಿ ಸಚಿವರಾಗಿದ್ದಾಗ ಸಹ ಅವರಿಗೆ ಸಹ ಮನವಿ ಮಾಡಲಾಗಿತ್ತು. ಈಗ ನಾವು ಪ್ರಯತ್ನ ಮಾಡದಿದ್ದರೆ ಭದ್ರೆ ನಮ್ಮ ಕೈತಪ್ಪಿ ಹೋಗಲಿದೆ ಎಂದು ಆತಂಕ ಹೊರಹಾಕಿದ್ದಾರೆ. ಇದನ್ನೂ ಓದಿ: ಹೋರಿಗಳ ಅದ್ದೂರಿ ಹುಟ್ಟುಹಬ್ಬದಲ್ಲಿ ಭಾಗಿಯಾದ ರೇಣುಕಾಚಾರ್ಯ

