ನಟಿ ಸಮಂತಾಗೆ ವಿಶೇಷ ರೀತಿಯ ಸೀಮಂತ ಶಾಸ್ತ್ರ ನಡೆದಿದೆ. ಇದನ್ನು ‘ಇಶಾ ಜನನಿ’ (Samantha Ruth Prabhu) ಎಂದು ಕರೆಯಲಾಗುತ್ತದೆ. ಈ ವಿಶೇಷ ಸಂಪ್ರದಾಯದ ಪ್ರಕಾರವೇ ನಟಿ ಸಮಂತಾ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ.
ಈ ವಿಶೇಷ ಸೀಮಂತ ಕಾರ್ಯಕ್ರಮದಲ್ಲಿ ಸಮಂತಾ ಅವರ ಗೆಳತಿ ಹಾಗೂ ಪತಿ ರಾಜ್ ಮಾತ್ರ ಭಾಗಿಯಾಗಿದ್ದರು. ವಿಭಿನ್ನ ಸಂಪ್ರದಾಯದಲ್ಲಿ ನಡೆದ ಈ ಶಾಸ್ತ್ರದ ಫೋಟೋಗಳನ್ನು ಸಮಂತಾ ಇದೀಗ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಸಮಂತಾ ಲಿಂಗಭೈರವಿ ದೇವಿಯ ಭಕ್ತೆಯಾಗಿದ್ದು, ಕಳೆದ ಡಿಸೆಂಬರ್‌ನಲ್ಲಿ ಇಶಾ ಫೌಂಡೇಶನ್‌ನಲ್ಲಿ ರಾಜ್ ಜೊತೆ ವಿವಾಹವಾಗಿದ್ದರು. ಇದೀಗ ಗರ್ಭಾವಸ್ಥೆಯ ಎರಡನೇ ತ್ರೈಮಾಸಿಕ ಹಂತದಲ್ಲಿರುವ ನಟಿ ಸಮಂತಾ, ಸೀಮಂತದಲ್ಲೂ ‘ಇಶಾ ಜನನಿ’ ಸಂಪ್ರದಾಯವನ್ನು ಪಾಲಿಸಿದ್ದಾರೆ.ಇದನ್ನೂ ಓದಿ: ಹೊಡೆದೇ ಬಿಟ್ರು ಸೌಂದರ್ಯ… ಮಂಜನ ಮಿತಿಮೀರಿದ ಆಕ್ರೋಶ – ಬಿಗ್‌ಬಾಸ್ ರೂಲ್ಸ್ ಬ್ರೇಕ್

ಗರ್ಭಾವಸ್ಥೆಯಲ್ಲಿ ಮನಸ್ಸಿಗೆ ಉಲ್ಲಾಸ ಬಹಳ ಮುಖ್ಯ ಎನ್ನಲಾಗುತ್ತದೆ. ಈ ವಿಶೇಷ ಸಂಪ್ರದಾಯದಲ್ಲಿ ಮಂತ್ರೋಚ್ಚಾರಣೆ ಮೂಲಕ ತಾಯಿ ಹಾಗೂ ಮಗುವಿಗೆ ನೆಮ್ಮದಿ ನೀಡುವ ಆಚರಣೆ ನಡೆಯುತ್ತದೆ. ಈ ಸಂಪ್ರದಾಯದ ಫೋಟೋಗಳನ್ನು ಹಂಚಿಕೊಂಡಿರುವ ಸಮಂತಾ, ಅದರ ಮಹತ್ವದ ಬಗ್ಗೆ ಭಾವುಕವಾಗಿ ಬರೆದುಕೊಂಡಿದ್ದಾರೆ.
ವಿಭಿನ್ನ ಸೀಮಂತದ ಕುರಿತು ಸಮಂತಾ ಹೇಳಿದ್ದೇನು?
“ನಮ್ಮ ಸಂಪ್ರದಾಯದ ಬಗ್ಗೆ ನನಗೆ ಸದಾ ಆಳವಾದ ಗೌರವವಿದೆ. ಪ್ರತಿಯೊಂದು ಆಚರಣೆಯ ಹಿಂದಿರುವ ಅರ್ಥ ನನಗೆ ಸಂಪೂರ್ಣವಾಗಿ ತಿಳಿದಿರದೇ ಇರಬಹುದು. ಆದರೆ ಅವುಗಳ ಹಿಂದೆ ಯಾವುದೋ ಆಳವಾದ ಅರ್ಥವಿದೆ ಎಂಬ ನಂಬಿಕೆ ಇದೆ.

ಮಂತ್ರಗಳ ಧ್ವನಿಯಲ್ಲಿ, ಮಂತ್ರೋಚ್ಚಾರಣೆಯಿಂದ ಸೃಷ್ಟಿಯಾಗುವ ಶಕ್ತಿಯಲ್ಲಿ ಹಾಗೂ ಪೂರ್ವದಿಂದ ತಲತಲಾಂತರಗಳಿಂದ ನಮ್ಮ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಿಕೊಂಡು ಬಂದಿರುವ ರೀತಿಯಲ್ಲಿ ಆಳವಾದ ಅರ್ಥವಿದೆ” ಎಂದು ಸಮಂತಾ ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಬೆಂಗಳೂರಲ್ಲಿ ಹಬ್ಬದ ಸಂಭ್ರಮ – 14 ಲಕ್ಷದ ಅಮೆರಿಕನ್ ಡೈಮಂಡ್‌ನಲ್ಲಿ ಮಿಂಚಿದ ಗಣಪ!

