ದಾವಣಗೆರೆ: ಹೊನ್ನಾಳಿ (Honnali )ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಹೋರಿಗಳ ಅದ್ದೂರಿ ಹುಟ್ಟುಹಬ್ಬವನ್ನು (Birthday) ಗ್ರಾಮಸ್ಥರು ಆಚರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P Renukacharya) ಭಾಗಿಯಾಗಿದ್ದರು.
ಭೂಪತಿ, ರಾಜಾಹುಲಿ, ತಿರುಪತಿ ಎಕ್ಸ್‌ಪ್ರೆಸ್, ಹೈ ಸ್ಪೀಡ್ ಸುಲ್ತಾನ್ ಹೆಸರಿನ ಹೋರಿಗಳ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಇವು ಗ್ರಾಮದ ರಂಗಪ್ಪ ಹಾಗೂ ರಾಜಪ್ಪ ಎಂಬವರ ಹೋರಿಗಳು. ಹೋರಿಗಳಿಗೆ ಅಲಂಕಾರ ಮಾಡಿ, ಕೇಕ್ ಕತ್ತರಿಸಿ ಮನುಷ್ಯರ ಹುಟ್ಟುಹಬ್ಬದಂತೆಯೇ ಆಚರಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಗಣೇಶ ಹಬ್ಬದ ಸಂಭ್ರಮ – ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ
ದೀಪಾವಳಿ ಹಬ್ಬದಂದು ಹೋರಿ ಬೆದರಿಸುವ ಸ್ಪರ್ಧೆ ಹಾಗೂ ಕೊಬ್ಬರಿ ಕಟ್ಟಿ ಓಡಿಸುವ ಸ್ಪರ್ಧೆಯಲ್ಲಿ ಈ ಹೋರಿಗಳು ಗೆದ್ದು ಹೆಸರು ಮಾಡಿವೆ. ಇದನ್ನೂ ಓದಿ: ನಗರ ಪ್ರದೇಶದಲ್ಲೂ 1 ಗಂಟೆ ಲೋಡ್ ಶೆಡ್ಡಿಂಗ್ ಅನಿವಾರ್ಯ: ರಮೇಶ್ ಬಂಡಿಸಿದ್ದೇಗೌಡ

