ದುಬೈ: ಮತ್ತೊಮ್ಮೆ ಏಷ್ಯಾ ಕಪ್ ಟ್ರೋಫಿ(Asia Cup Trophy) ವಿವಾದ ಮತ್ತೆ ಭುಗಿಲೆದ್ದಿದೆ. ಕಳೆದ ವರ್ಷ ಪುರುಷರ ತಂಡದ ಪಂದ್ಯದಲ್ಲಿ ನಡೆದಿದ್ದ ಹೈಡ್ರಾಮಾ ಈ ಬಾರಿ ಮಹಿಳಾ ಏಷ್ಯಾ ಕಪ್ ಫೈನಲ್ನಲ್ಲೂ ಪುನರಾವರ್ತನೆಯಾಗಿದೆ.
ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಶ್ರೀಲಂಕಾ ತಂಡವನ್ನು 72 ರನ್ಗಳಿಂದ ಮಣಿಸಿದ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ (Team India) ದಾಖಲೆಯ 8ನೇ ಬಾರಿಗೆ ಏಷ್ಯಾ ಕಪ್ ಮುಡಿಗೇರಿಸಿಕೊಂಡಿತು. ಆದರೆ ಪಂದ್ಯ ಮುಗಿದ ಬಳಿಕ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥ ಹಾಗೂ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ(Mohsin Naqvi) ಉಪಸ್ಥಿತಿಯಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೀವ್ರ ಗೊಂದಲ ನಿರ್ಮಾಣವಾಯಿತು.
Mohsin Naqvi crossed all limits of shamelessness. He knew that Devajit Saikia and Rajiv Shukla were talking to Team India about not accepting the trophy from him, yet he still went and stood on the podium and shamelessly kept looking at the Indian team.😭🙏🤡 pic.twitter.com/ec8sQvvCXw
— 𝐑𝐮𝐬𝐡𝐢𝐢𝐢⁴⁵ (@rushiii_12) September 13, 2026
ರಾತ್ರಿ ಏನಾಯ್ತು?
ಪಂದ್ಯ ಭಾರತೀಯ ಕಾಲಮಾನ ರಾತ್ರಿ 11:20ಕ್ಕೆ ಪಂದ್ಯ ಮುಕ್ತಾಯಗೊಂಡರೂ, ಪ್ರಶಸ್ತಿ ಪ್ರದಾನ ಸಮಾರಂಭ ತಡವಾಗಿ (ಮಧ್ಯರಾತ್ರಿ 12:05ಕ್ಕೆ) ಆರಂಭವಾಯಿತು. ನಿರೂಪಕ ಹಾಗೂ ಶ್ರೀಲಂಕಾದ ಮಾಜಿ ಆಟಗಾರ ಫರ್ವೀಜ್ ಮಹರೂಫ್, ರನ್ನರ್-ಅಪ್ ಶ್ರೀಲಂಕಾ ತಂಡವನ್ನು ವೇದಿಕೆಗೆ ಕರೆದರು. ನಖ್ವಿ ಅವರು ಲಂಕಾ ತಂಡಕ್ಕೆ ಚೆಕ್ ಹಸ್ತಾಂತರಿಸಿದರೆ ಶ್ರೀಲಂಕಾ ಕ್ರಿಕೆಟ್ನ ಮಧ್ಯಂತರ ಮುಖ್ಯಸ್ಥ ಎರಾನ್ ವಿಕ್ರಮರತ್ನೆ ಆಟಗಾರರಿಗೆ ಪದಕಗಳನ್ನು ವಿತರಿಸಿದರು.
ಇದಾದ ನಂತರ ಭಾರತ ತಂಡ ವೇದಿಕೆಗೆ ಬರಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾಗ, ನಿರೂಪಕರು ಸಮಾರಂಭ ಮುಕ್ತಾಯಗೊಂಡಿದೆ ಎಂದು ಏಕಾಏಕಿ ಘೋಷಿಸಿದರು.
ಬಿಸಿಸಿಐ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಗೂ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಉಪಸ್ಥಿತರಿದ್ದು, ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಯನ್ನು ನಂದಿನಿ ಶರ್ಮಾಗೆ ನೀಡಿ ತಂಡವನ್ನು ಅಭಿನಂದಿಸಿದರು. ಬಳಿಕ ಇಡೀ ತಂಡ ಡ್ರೆಸ್ಸಿಂಗ್ ಕೋಣೆಗೆ ಮರಳಿತು. ಚಾಮರಿ ಅಟಪಟ್ಟುಗೆ ಪ್ರಶಸ್ತಿ ನೀಡಿದ ತಕ್ಷಣವೇ ನಖ್ವಿ ಕ್ರೀಡಾಂಗಣದಿಂದ ನಿರ್ಗಮಿಸಿದರು.
Fans chanting “Trophy Chor, Trophy Chor” when they saw Mohsin Naqvi during the presentation. 😂🔥 pic.twitter.com/FakFZQhKcZ
— Johns. (@CricCrazyJohns) September 14, 2026
ಎಸಿಸಿ ಉಪಾಧ್ಯಕ್ಷ ಖಾಲಿದ್ ಝರೂನಿ ಅವರಿಂದ ಟ್ರೋಫಿ ಕೊಡಿಸುವಂತೆ ಭಾರತ ಮನವಿ ಮಾಡಿತ್ತು. ಆದರೆ ನಖ್ವಿ ತಾವೇ ಟ್ರೋಫಿ ನೀಡುವುದಾಗಿ ಪಟ್ಟು ಹಿಡಿದರು. ನಖ್ವಿ ಮೊಂಡುತನಕ್ಕೆ ಸೆಡ್ಡು ಹೊಡೆದ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ವೇದಿಕೆಗೆ ಬಾರದೆ ಡ್ರೆಸ್ಸಿಂಗ್ ರೂಮ್ನಲ್ಲೇ ಉಳಿದುಕೊಂಡಿತು.
ಸಮಾರಂಭ ಮುಗಿದು ಎಲ್ಲರೂ ನಿರ್ಗಮಿಸಿದ ನಂತರ, ಭಾರತ ತಂಡದ ಆಟಗಾರ್ತಿಯರು ಮತ್ತು ಕೋಚಿಂಗ್ ಸ್ಟಾಫ್ ಖಾಲಿ ಸ್ಟೇಡಿಯಂನಲ್ಲಿ ಒಟ್ಟಿಗೆ ನಿಂತು ಗ್ರೂಪ್ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಇದನ್ನೂ ಓದಿ: ದುಬೈನಲ್ಲಿ ಲಂಕಾದಹನ – 8ನೇ ಬಾರಿ ಭಾರತ ಚಾಂಪಿಯನ್
BIG NEWS 🚨 Smriti Mandhana refused to take trophy from Mohsin Naqvi.
After waiting for around 30 minutes, Mohsin Naqvi eventually left the stage and ran away with the trophy 😭😂 pic.twitter.com/DOJSSvtB9a https://t.co/zjbvALhSp6
— News Algebra (@NewsAlgebraIND) September 13, 2026
ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಿರುವುದು ಬಿಸಿಸಿಐ ತೆಗೆದುಕೊಂಡ ಅಧಿಕೃತ ನಿಲುವು ಎಂದು ಭಾರತ ತಂಡದ ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಸ್ಪಷ್ಟಪಡಿಸಿದ್ದಾರೆ.
ಕಳೆದ 2025ರ ಸೆಪ್ಟೆಂಬರ್ 28ರಂದು ಇದೇ ದುಬೈ ಮೈದಾನದಲ್ಲಿ ನಡೆದಿದ್ದ ಪುರುಷರ ಏಷ್ಯಾ ಕಪ್ ಫೈನಲ್ನಲ್ಲೂ ಭಾರತ-ಪಾಕಿಸ್ತಾನ ಪಂದ್ಯದ ನಂತರ ಇಂತಹುದೇ ವಿವಾದ ಉಂಟಾಗಿತ್ತು. ಅಂದು ನಖ್ವಿ ಉಪಸ್ಥಿತಿಯಿಂದಾಗಿ ಉಂಟಾದ ಬಿಕ್ಕಟ್ಟಿನಿಂದ ಟ್ರೋಫಿಯನ್ನೇ ಕ್ರೀಡಾಂಗಣದಿಂದ ಎಸಿಸಿ ಕಚೇರಿಗೆ ತೆಗೆದುಕೊಂಡು ಹೋಗಲಾಗಿತ್ತು. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಟ್ರೋಫಿ ಇಲ್ಲದೆಯೇ ವೇದಿಕೆಯಲ್ಲಿ ಸಂಭ್ರಮ ಆಚರಿಸಿತ್ತು. ಆ ಟ್ರೋಫಿ ಇಂದಿಗೂ ಎಸಿಸಿ ಕಚೇರಿಯಲ್ಲೇ ಉಳಿದುಕೊಂಡಿದೆ.

