Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕ ರಾಜ್ಯವೇ ಎಟಿಎಂ ಆಗಿದೆ – ವಿಜಯೇಂದ್ರ ಕಿಡಿ
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕ ರಾಜ್ಯವೇ ಎಟಿಎಂ ಆಗಿದೆ – ವಿಜಯೇಂದ್ರ ಕಿಡಿ

Bengaluru City

ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕ ರಾಜ್ಯವೇ ಎಟಿಎಂ ಆಗಿದೆ – ವಿಜಯೇಂದ್ರ ಕಿಡಿ

Public TV
Last updated: February 4, 2026 1:39 pm
Public TV
Share
2 Min Read
BY Vijayendra
SHARE

– ಅಬಕಾರಿ ಸಚಿವರ ರಾಜೀನಾಮೆ ಪಡೆದು ಭ್ರಷ್ಟಾಚಾರದ ತನಿಖೆ ನಡೆಸಲು ಒತ್ತಾಯ

ಬೆಂಗಳೂರು: ಭ್ರಷ್ಟಾಚಾರದಲ್ಲಿ (Corruption) ಮುಳುಗಿ ಹೋಗಿರುವ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳು ಅಬಕಾರಿ ವಿಚಾರದಲ್ಲಿ ಗಟ್ಟಿ ನಿರ್ಧಾರವನ್ನ ತೆಗೆದುಕೊಳ್ಳಬೇಕೆಂಬುದು ಬಿಜೆಪಿ ಮತ್ತು ಜೆಡಿಎಸ್ ನಿಲುವು. ಅಬಕಾರಿ ಸಚಿವರ ರಾಜೀನಾಮೆ ಪಡೆದು ಆಮೇಲೆ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಅವರು ಒತ್ತಾಯಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರವು ಇವತ್ತು ಅಬಕಾರಿ ಇಲಾಖೆಗೂ ಬಂದು ತಲುಪಿದೆ. ರಾಜ್ಯ ಸರಕಾರವು (Karnataka Government) ಒಂದು ಕಡೆ ತನ್ನ ಗ್ಯಾರಂಟಿಗಳಿಗೆ ಹಣ ಕ್ರೋಢೀಕರಿಸಲು ಸಾಧ್ಯವಾಗದೇ ಅಬಕಾರಿ ಇಲಾಖೆಯಲ್ಲಿ ಟಾರ್ಗೆಟ್ ಹೆಚ್ಚಿಸಿ ಕರ್ನಾಟಕವನ್ನ ಕುಡುಕರ ರಾಜ್ಯವಾಗಿ ಮಾಡುತ್ತಿದೆ. ಮನಸೋಇಚ್ಛೆ ಲಿಕ್ಕರ್ ಲೈಸನ್ಸ್‍ಗಳನ್ನು ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ:  ಸಿಎಂ ಕುರ್ಚಿ ಉಳಿಯಬೇಕಿದೆ, ಅದಕ್ಕೆ AICC ಗೆ ಸಾವಿರ ಸಾವಿರ ಕೋಟಿ ಹೋಗ್ತಿದೆ; ಆರ್‌. ಅಶೋಕ್‌

ರಾಜ್ಯ ಸರಕಾರದ ನೀತಿಯ ಪರಿಣಾಮವಾಗಿ 500 ಮೀಟರ್‌ಗೆ ಒಂದರಂತೆ ಲಿಕ್ಕರ್ ಅಂಗಡಿ (liquor Shop) ಸಿಗುವಂತಾಗಿದೆ. ಯಾವುದೇ ಇಲಾಖೆಯನ್ನು ತೆಗೆದುಕೊಂಡರೂ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದೆ. ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ಹಗರಣ ಎಂದು ಅದರ ಅಧ್ಯಕ್ಷರೂ ಬಹಿರಂಗವಾಗಿ ಹೇಳಿದ್ದಾರೆ ಎಂದು ಗಮನ ಸೆಳೆದರು.

ಆಡಿಯೋ ಟೇಪ್ ಬಹಿರಂಗವಾಗಿದ್ದು ಅದರಲ್ಲಿ ಅಬಕಾರಿ ಸಚಿವ ತಿಮ್ಮಾಪುರ, ಅವರ ಮಗ, ಮುಖ್ಯಮಂತ್ರಿಗಳ ಬಗ್ಗೆ ಉಲ್ಲೇಖವಾಗಿದೆ ಎಂದು ಆರೋಪಿಸಿದರು. ಅಬಕಾರಿ ಸಚಿವರು ಹಿಂದೆ ಯಾರ‍್ಯಾರು ರಾಜೀನಾಮೆ ನೀಡಿದ್ದಾರೆಂದು ಉದ್ದುದ್ದ ಭಾಷಣ ಮಾಡಿದ್ದಾರೆ. ಮಡಿಕೇರಿಯ ಗಣಪತಿಯವರ ಆತ್ಮಹತ್ಯೆ ಪ್ರಕರಣದಲ್ಲೂ ಜಾರ್ಜ್ ಅವರು ರಾಜೀನಾಮೆ ಕೊಡಬೇಕಿತ್ತು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಈ ಸರಕಾರ ಆಡಳಿತಕ್ಕೆ ಬಂದ ಬಳಿಕ ಇತ್ತೀಚೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಡೆದಿತ್ತು. ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅನಿವಾರ್ಯವಾಗಿ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಗಮನ ಸೆಳೆದರು. ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ಹಗರಣ ಆರೋಪ – ಆರ್.ಬಿ ತಿಮ್ಮಾಪೂರ ರಾಜೀನಾಮೆಗೆ ಬಿಗಿಪಟ್ಟು

ನಿನ್ನೆ ಮುಖ್ಯಮಂತ್ರಿ ಹಾದಿಯಾಗಿ ಸಚಿವರ ಭಂಡತನವನ್ನ ಸದನದಲ್ಲಿ ನೋಡಿದ್ದು, ಎಲ್ಲೋ ಒಂದು ಕಡೆ ಈ ಭ್ರಷ್ಟಾಚಾರವು ಸಚಿವರಿಗೇ ಸೀಮಿತವಾಗಿಲ್ಲ ಎಂಬುದು ಸ್ಪಷ್ಟ ಎಂದರು. ಇದನ್ನೂ ಓದಿ: ಗೋವಿಂದ ಗೋವಿಂದ ಕೋಟಿ ಕೋಟಿ ಗೋವಿಂದ – ಸದನದಲ್ಲಿ ದೋಸ್ತಿ ನಾಯಕರಿಂದ ಅಹೋರಾತ್ರಿ ಪ್ರತಿಭಟನೆ

ಕರ್ನಾಟಕವು ಕಾಂಗ್ರೆಸ್ ಹೈಕಮಾಂಡಿಗೆ ಎಟಿಎಂ ಆಗಿ ಪರಿವರ್ತನೆಯಾಗಿದೆ. ರಾಜೀನಾಮೆ ಕೊಡದಂತೆ ಅಬಕಾರಿ ಸಚಿವರ ಮೇಲೂ ಒತ್ತಡ ಇದೆ. ಅವರು ರಾಜೀನಾಮೆ ಕೊಟ್ಟರೆ ಅದು ಯಾರ‍್ಯಾರ ಬುಡಕ್ಕೆ ಬರುತ್ತದೋ ಗೊತ್ತಿಲ್ಲ. ಹಾಗಾಗಿ ಅವರನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ- ಜೆಡಿಎಸ್ ನಿನ್ನೆ ಅಹೋರಾತ್ರಿ ಧರಣಿ ಮಾಡಿದ್ದೇವೆ. ಇವತ್ತು ಕೂಡ ಹೋರಾಟ ಮುಂದುವರೆಯಲಿದೆ ಎಂದು ಪ್ರಕಟಿಸಿದರು.

TAGGED:bjpBY Vijayendracongressexcise departmentr ashokಅಬಕಾರಿ ಇಲಾಖೆಆರ್. ಅಶೋಕ್‍ಕಾಂಗ್ರೆಸ್ಬಿ.ವೈ.ವಿಜಯೇಂದ್ರಬಿಜೆಪಿ
Share This Article
FacebookWhatsappWhatsappTelegram

Cinema news

Vijay Trisha Krishnan
ತಿರುಪತಿಯಿಂದ ನೇರ ವಿಜಯ್ ಮನೆಗೆ ತೆರಳಿದ ತ್ರಿಷಾ
CinemaLatestNationalTop Stories
Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
CinemaLatestNationalTop Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru CityCinemaCourtLatestMain Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru CityCrimeDistrictsKarnatakaLatestSandalwoodTop Stories

You Might Also Like

MK Stalin
Latest

ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ಗೆ ಸೋಲು – ದಳಪತಿ ಅಬ್ಬರಕ್ಕೆ ಡಿಎಂಕೆ ಧೂಳಿಪಟ

Public TV
ByPublic TV
10 minutes ago
Darshan bail
Bengaluru City

ಜೈಲಲ್ಲಿ ದರ್ಶನ್‌ಗೆ ಮೂಲಸೌಕರ್ಯ – 1 ವಾರದೊಳಗೆ ವರದಿ ಸಲ್ಲಿಸಲು ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

Public TV
ByPublic TV
16 minutes ago
udf congress rahul gandhi
Latest

ಕೇರಳದಲ್ಲಿ ಕಾಂಗ್ರೆಸ್ ಅಬ್ಬರ: ಪಿಣರಾಯಿ ಪಲ್ಟಿ, ಯುಡಿಎಫ್ ಚಕ್ರವರ್ತಿ!

Public TV
ByPublic TV
21 minutes ago
Vijay Car Driver
Latest

ವಿಜಯ್‌ ಕಾರು ಚಾಲಕನ ಪುತ್ರನಿಗೆ ಖುಲಾಯಿಸಿದ ಅದೃಷ್ಟ – ಗೆಲುವಿನ ಸನಿಹದತ್ತ ಶಬರಿನಾಥನ್‌

Public TV
ByPublic TV
46 minutes ago
R Ashok 3
Bengaluru City

ಬಂಗಾಳ ಫಲಿತಾಂಶದಿಂದ ಬಾಂಗ್ಲಾ, ಪಾಕಿಸ್ತಾನಕ್ಕೆ ಆಘಾತ: ಆರ್.ಅಶೋಕ್

Public TV
ByPublic TV
48 minutes ago
bjp flag
Latest

ಕಳೆದ ಬಾರಿ ಶೂನ್ಯ – ಈ ಬಾರಿ ಕೇರಳದಲ್ಲಿ ಖಾತೆ ತೆರೆದ ಬಿಜೆಪಿ

Public TV
ByPublic TV
56 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?