ವೀಡಿಯೋ: ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಗೂಂಡಾಗಿರಿ- ಟೋಲ್ ಸಿಬ್ಬಂದಿ ಮೇಲೆ ಹಲ್ಲೆ

1 Min Read

ತುಮಕೂರು: ಕೆಲ ದಿನಗಳ ಹಿಂದಷ್ಟೇ ತುರುವೇಕೆರೆಯ ಜೆಡಿಎಸ್ ಶಾಸಕ ಎಮ್‍ಟಿ ಕೃಷ್ಣಪ್ಪ ಮಹಿಳೆಯೊಬ್ಬರನ್ನು ಬಾಯಿಗೆ ಬಂದಂತೆ ನಿಂದಿಸಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದರು. ಈಗ ತುಮಕೂರಿನ ಮತ್ತೊಬ್ಬ ಶಾಸಕ ಟೋಲ್ ಸಿಬ್ಬಂದಿ ಮೇಲೆ ದರ್ಪ ತೋರಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ತನಗೆ ವಿಐಪಿ ಗೇಟ್ ನಲ್ಲಿ ಬಿಡಲಿಲ್ಲವೆಂಬ ಕಾರಣಕ್ಕೆ ಟೋಲ್ ಇನ್ಚಾರ್ಜ್ ಮಲ್ಲಿಕಾರ್ಜುನ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ. ತುಮಕೂರು-ಬೆಂಗಳೂರು ಹೆದ್ದಾರಿಯ ಕ್ಯಾತ್ಸಂದ್ರ ಟೋಲ್ ಬಳಿ ಕಳೆದ ಶುಕ್ರವಾರ ಘಟನೆ ನಡೆದಿದೆ.

ಬೆಂಬಲಿಗರೊಂದಿಗೆ ಟೋಲ್ ನ ಆಫೀಸಿಗೆ ನುಗ್ಗಿದ ಶಾಸಕ ರೋಷಾವೇಷದಿಂದ ಮಲ್ಲಿಕಾರ್ಜುನ್ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕ ಸುರೇಶ್ ಗೌಡ ಅವರ ದರ್ಪ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಾಸಕರ ದರ್ಪಕ್ಕೆ ಹೆದರಿದ ಟೋಲ್ ಇನ್‍ಚಾರ್ಜ್ ಮಲ್ಲಿಕಾರ್ಜುನ್ ಘಟನೆ ಬಗ್ಗೆ ವಿವರಿಸಲೂ ಸಹ ಹಿಂದೇಟು ಹಾಕಿದರು.

https://www.youtube.com/watch?v=6LMH537lch0

Share This Article
Leave a Comment

Leave a Reply

Your email address will not be published. Required fields are marked *