Connect with us

Davanagere

ಟಿಪ್ಪು ಜಯಂತಿ ಮಾಡಿ ಬೆಂಕಿ ಹಚ್ಚಿ ನೀತಿ ಪಾಠ ಹೇಳ್ತಿದ್ದಾರೆ: ಸಿದ್ದರಾಮಯ್ಯ ವಿರುದ್ಧ ರೇಣುಕಾಚಾರ್ಯ ಕಿಡಿ

Published

on

– ದುಷ್ಟರಿಗೆ ಭಾರತ ರತ್ನ ನೀಡಿದ್ರೆ ಟೀಕೆ ಮಾಡಿ
– ಸಾವರ್ಕರ್ ಅಪ್ರತಿಮ ದೇಶ ಭಕ್ತ

ದಾವಣಗೆರೆ: ಮತಾಂಧ, ದೇಶ ದ್ರೋಹಿ ಟಿಪ್ಪು ಜಯಂತಿ ಮಾಡಿ, ಮಡಿಕೇರಿಯಲ್ಲಿ ಬೆಂಕಿ ಹಚ್ಚಿದ್ರಿ. ಈಗ ನೀತಿ ಪಾಠ ಹೇಳುತ್ತ ದೇಶ ಭಕ್ತನಿಗೆ ಭಾರತ ರತ್ನ ನೀಡುವ ವಿಚಾರಕ್ಕೆ ವಿರೋಧಿಸುತ್ತಿದ್ದೀರಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ನಗರದ ಸರ್ಕಿಟ್ ಹೌಸ್‍ನಲ್ಲಿ ಮಾತನಾಡಿದ ಶಾಸಕರು, ಸಿದ್ದರಾಮಯ್ಯ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರು. ಅವರ ಬಗ್ಗೆ ಗೌರವ ಇದೆ. ಆದರೆ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ ಬಗ್ಗೆ ವಿಪಕ್ಷ ನಾಯಕರು ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.

ದುಷ್ಟರಿಗೆ ಭಾರತ ರತ್ನ ನೀಡಿ ಗೌರವಿಸಿದರೆ ಟೀಕೆ ಮಾಡಿ. ಅದನ್ನು ಬಿಟ್ಟು ಅಪ್ರತಿಮ ದೇಶ ಭಕ್ತನ ಬಗ್ಗೆ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರನ್ನು ಕಾಂಗ್ರೇಸ್‍ನಲ್ಲಿ ಮೂಲೆ ಗುಂಪು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಅಂತದರಲ್ಲಿ ಡಿ.ವಿ.ಸಾವರ್ಕರ್ ಬಗ್ಗೆ ಅವರ ಹೇಳಿಕೆಯನ್ನು ಕಠೋರವಾಗಿ ಖಂಡಿಸುತ್ತೇನೆ ಎಂದು ಗುಡುಗಿದರು.

ಬಿಜೆಪಿ ಯಾವತ್ತೂ ವೋಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲ. ಮಹಾತ್ಮ ಗಾಂಧೀಜಿ ಅವರ ಕಲ್ಪನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಗಾಂಧೀಜಿಯವರೇ ನಮಗೆ ಆದರ್ಶ. ಆದರೆ ಕಾಂಗ್ರೆಸ್‍ನವರು ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ವೋಟ್ ಬ್ಯಾಂಕ್‍ಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.