‘ಬಿಗ್ ಬಾಸ್ ಕನ್ನಡ ಸೀಸನ್ 5’ರ (Bigg Boss Kannada 5) ಮೂಲಕ ಗಮನ ಸೆಳೆದ ಶ್ರುತಿ ಪ್ರಕಾಶ್ (Shruti Prakash) ಅವರು ಸದ್ಯ ಬಾಲಿವುಡ್‌ಗೆ ಹಾರಿದ್ದಾರೆ. ಖ್ಯಾತ ನಿರ್ದೇಶಕನ ಸಿನಿಮಾದಲ್ಲಿ ನಾಯಕಿಯಾಗಿ ಬಿಟೌನ್‌ಗೆ ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್


‘ಹಾಂಟೆಡ್ 2’ (Haunted 2) ಸಿನಿಮಾದಲ್ಲಿ ಮಿಮೋಹ್ ಚಕ್ರವರ್ತಿಗೆ ಶ್ರುತಿ ಪ್ರಕಾಶ್ ನಾಯಕಿಯಾಗಿದ್ದಾರೆ. ಶ್ರುತಿ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದ್ದು, ಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಬಿಗ್ ಬಾಸ್ ಶೋ ಬಳಿಕ ಕಸ್ತೂರಿ ಮಹಲ್, ಕಡಲ ತೀರದ ಭಾರ್ಗವ, ಲಂಡನ್‌ನಲ್ಲಿ ಲಂಬೋದರ, ಗ್ರೇ ಗೇಮ್ಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ಶ್ರುತಿ ಪ್ರಕಾಶ್ ನಟಿಸಿದ್ದಾರೆ.

