LatestMain PostNational

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದ 41 ಸಾವಿರ ರೂ.ನ ಟೀಶರ್ಟ್ ಕುರಿತು ಬಿಜೆಪಿ ವ್ಯಂಗ್ಯ

ನವದೆಹಲಿ: ಕಾಂಗ್ರೆಸ್ (Congress) ತಮಿಳುನಾಡಿನಿಂದ ಭಾರತ್ ಜೋಡೋ ಯಾತ್ರೆ (Bharat Jodo Yatra) ಆರಂಭಿಸಿದೆ. ಈ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಧರಿಸಿದ್ದ ಬರೋಬ್ಬರಿ 41,000 ರೂ.ನ ಬರ್ಬೆರ್ರಿ (Burberry t-shirt) ಟೀಶರ್ಟ್ ಕುರಿತಾಗಿ ಬಿಜೆಪಿ (BJP) ವ್ಯಂಗ್ಯವಾಡಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಬಿಳಿ ಬಣ್ಣದ ಟೀಶರ್ಟ್ ಧರಿಸಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ, ಭಾರತ್ ದೇಕೋ ಎಂದು ಅಡಿಬರಹ ನೀಡಿದೆ.

ಈ ಟ್ವೀಟ್‍ಗೆ ಟಕ್ಕರ್ ನೀಡಿರುವ ಕಾಂಗ್ರೆಸ್, ಭಾರತ್ ಜೋಡೋ ಯಾತ್ರೆಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಿದ್ದೇವೆ. ಬಿಜೆಪಿ ಬಟ್ಟೆ ಬಗ್ಗೆ ಮಾತನಾಡುತ್ತಿದೆ. ಮೋದಿಜಿಯವರ (Narendra Modi) 10 ಲಕ್ಷ ಬೆಲೆಯ ಸೂಟು, 1.5 ಲಕ್ಷ ಬೆಲೆಯ ಕನ್ನಡಕದ ಬಗ್ಗೆಯೂ ಚರ್ಚೆಯಾಗಲಿ ಎಂದು ಕಾಂಗ್ರೆಸ್ ಬರೆದುಕೊಂಡಿದೆ. ಇದನ್ನೂ ಓದಿ: ನಾನೇನು ಮಾಡ್ಬೇಕು ಎಂಬುದನ್ನು ಕ್ಲಿಯರ್ ಆಗಿ ನಿರ್ಧರಿಸಿದ್ದೇನೆ: ರಾಹುಲ್ ಗಾಂಧಿ

ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆಯ ಮೂರನೇ ದಿನವಾದ ಇಂದು ತಮಿಳುನಾಡಿನ ನಾಗರ್ಕೋಯಿಲ್‍ನಲ್ಲಿ ಆರಂಭಗೊಂಡಿತು. ರಾಹುಲ್ ಗಾಂಧಿ ಸ್ಕಾಟ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಿನ್ನೆ ಸುಮಾರು 13 ಕಿಮೀ ವ್ಯಾಪ್ತಿಯನ್ನು ಕ್ರಮಿಸಿದ್ದ ಕಾಂಗ್ರೆಸ್ ಯಾತ್ರೆಯು ತಮಿಳುನಾಡಿನ ಸುಚಿಂದ್ರಂನಲ್ಲಿರುವ 101 ವರ್ಷಗಳ ಹಳೆಯದಾದ ಶಾಲೆಯಲ್ಲಿ ಕೊನೆಗೊಳಿಸಲಾಯಿತು. ಆ ಬಳಿಕ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇದನ್ನೂ ಓದಿ: ಬೆಂಗಳೂರಿನ ಕೆಟ್ಟ ಪರಿಸ್ಥಿತಿಗೆ ಬಿಜೆಪಿಯೇ ಕಾರಣ: ಸಿದ್ದರಾಮಯ್ಯ ಕಿಡಿ

ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದು, ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಯಾತ್ರೆಯು 3,500 ಕಿ.ಮೀ ದೂರವನ್ನು ಕ್ರಮಿಸುತ್ತಿದ್ದು 12 ರಾಜ್ಯಗಳನ್ನು ಹಾದುಹೋಗಲಿದೆ.

Live Tv

Leave a Reply

Your email address will not be published. Required fields are marked *

Back to top button