LatestMain PostNational

ನಾನೇನು ಮಾಡ್ಬೇಕು ಎಂಬುದನ್ನು ಕ್ಲಿಯರ್ ಆಗಿ ನಿರ್ಧರಿಸಿದ್ದೇನೆ: ರಾಹುಲ್ ಗಾಂಧಿ

ನವದೆಹಲಿ: ನಾನೇನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಿರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ ಕುರಿತಾಗಿ ತಮಿಳುನಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ (Congress) ಅಧ್ಯಕ್ಷನಾಗುತ್ತೇನೆಯೋ ಇಲ್ಲವೋ ಎಂಬುದು ಅಧ್ಯಕ್ಷ (President) ಸ್ಥಾನಕ್ಕೆ ಚುನಾವಣೆ (Election) ನಡೆದಾಗ ಗೊತ್ತಾಗುತ್ತದೆ. ನಾನು ಏನು ಮಾಡಬೇಕೆಂದು ನಾನು ಸ್ಪಷ್ಟವಾಗಿ ನಿರ್ಧರಿಸಿದ್ದೇನೆ, ನನ್ನಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ಆಡಳಿತ ನಡೆಸುತ್ತಿರುವ ಬಿಜೆಪಿ (BJP) ಈ ದೇಶದ ಎಲ್ಲಾ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಅಲ್ಲದೆ ಅವುಗಳ ಮೂಲಕ ಒತ್ತಡ ಹೇರಿದೆ. ನಾವು ಇನ್ನು ಮುಂದೆ ಒಂದು ರಾಜಕೀಯ ಪಕ್ಷವಾಗಿ ಹೋರಾಡುವುದು ಬೇಡ. ಬದಲಾಗಿ ವಿರೋಧ ಪಕ್ಷ ಹಾಗೂ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವೆಂಬರ್ 17 ರಂದು ಚುನಾವಣೆ ನಡೆಯಲಿದ್ದು, ಎರಡು ದಿನಗಳ ನಂತರ ಮತ ಎಣಿಕೆ ನಡೆಯಲಿದೆ. ಸೆಪ್ಟೆಂಬರ್ 24 ರಿಂದ 30 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಇದನ್ನೂ ಓದಿ: ಕೋವಿಡ್‌ನಿಂದ ಮೃತಪಟ್ಟವರ ಸಮಾಧಿಗಳ ಮೇಲೆ ಬಿಜೆಪಿ ಸರ್ಕಾರದಿಂದ ಭ್ರಷ್ಟೋತ್ಸವ – ಕಾಂಗ್ರೆಸ್‌ ಕಿಡಿ

Live Tv

Leave a Reply

Your email address will not be published.

Back to top button