Bengaluru CityKarnatakaLatestLeading NewsMain Post

ಕೋವಿಡ್‌ನಿಂದ ಮೃತಪಟ್ಟವರ ಸಮಾಧಿಗಳ ಮೇಲೆ ಬಿಜೆಪಿ ಸರ್ಕಾರದಿಂದ ಭ್ರಷ್ಟೋತ್ಸವ – ಕಾಂಗ್ರೆಸ್‌ ಕಿಡಿ

ಬೆಂಗಳೂರು: ಕೋವಿಡ್‌ನಿಂದ (Covid) ಮೃತರಾದವರ ಸಮಾಧಿಗಳ ಮೇಲೆ ಬಿಜೆಪಿ (BJP) ಸರ್ಕಾರ ಭ್ರಷ್ಟೋತ್ಸವ ನಡೆಸಲು ಮುಂದಾಗಿದೆ ಎಂದು ಕಾಂಗ್ರೆಸ್‌ (Congress) ಟೀಕಿಸಿದೆ.

ಸರಣಿ ಟ್ವೀಟ್‌ ಮಾಡುವ ಮೂಲಕ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ. ಇದನ್ನೂ ಓದಿ: ತೇಜಸ್ವಿ ಸೂರ್ಯ ದೋಸೆ ಸವಿದಿದ್ದನ್ನು ಟೀಕಿಸಿದ್ದ ಕಾಂಗ್ರೆಸ್‍ಗೆ ಬಿಜೆಪಿ ತಿರುಗೇಟು

ಟ್ವೀಟ್‌ನಲ್ಲೇನಿದೆ?
ನಿನ್ನೆ ರಾತ್ರಿ ಮುಖ್ಯಮಂತ್ರಿಗಳು ಬೆಂಗಳೂರಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರಂತೆ. ಹಗಲಲ್ಲೇ ಕಾಣದಿರುವುದು ರಾತ್ರಿ ಏನು ಕಾಣುತ್ತದೆ ಬಸವರಾಜ್‌ ಬೊಮ್ಮಾಯಿ ಅವರೇ? ಹಗಲಿಡೀ ಬಿಜೆಪಿ ಭ್ರಷ್ಟೋತ್ಸವದ (BJP Brashtotsava) ಕೆಲಸ, ರಾತ್ರಿ ಕಾಟಾಚಾರದ ಭೇಟಿಯೇ? ನಿಮ್ಮ ಮಂತ್ರಿಗಳೆಲ್ಲ ಎಲ್ಲಿ ಹೋದರು? ಬರೀ ವೀಕ್ಷಣೆ ಮಾಡುವ ಬದಲು ಪರಿಹಾರದ ಪ್ಯಾಕೇಜ್ ಘೋಷಿಸುವುದು ಯಾವಾಗ?

ಕೋವಿಡ್‌ನಿಂದ ಮೃತರಾದವರ ಸಮಾಧಿಗಳ ಮೇಲೆ ಬಿಜೆಪಿ ಸರ್ಕಾರ ಭ್ರಷ್ಟೋತ್ಸವ ನಡೆಸಲು ಮುಂದಾಗಿದೆ. ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನಸ್ಪಂದನ ಸಮಾವೇಶದ ಖರ್ಚು ವೆಚ್ಚದ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಸುಧಾಕರ್ ಅವರು ಕೋವಿಡ್ ಹೆಣಗಳ ಮೇಲೆ ಮಾಡಿದ ಹಣವನ್ನು ಇಲ್ಲಿ ಚೆಲ್ಲುತ್ತಿದ್ದಾರೆ. ಈ ಸಮಾವೇಶಕ್ಕೆ ಕೋವಿಡ್ ಮೃತರ ಶಾಪ ತಟ್ಟುವುದು ನಿಶ್ಚಿತ. ಇದನ್ನೂ ಓದಿ: ಸಂಸದರ ಪ್ರಕಾರ ಬೆಂಗಳೂರಿನ ಪ್ರವಾಹ ಷಡ್ಯಂತ್ರವಂತೆ- ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿ

ಕೋವಿಡ್‌ಗೆ ಜನರನ್ನು ಬಲಿಕೊಟ್ಟು, ಕರೊನಾ ಹೆಸರಲ್ಲಿ ಲೂಟಿ ಮಾಡಿದ ಪಾಪದ ಹಣದಲ್ಲಿ ಬಿಜೆಪಿ ಭ್ರಷ್ಟೋತ್ಸವ ನಡೆಯುತ್ತಿದೆ. ನಿಗದಿಯಂತೆ ಸಮಾವೇಶ ನಡೆಸಲಾಗದ ವಿಘ್ನಗಳು, ಮೂರು ಮೂರು ಭಾರಿ ದಿನಾಂಕ ಬದಲಾವಣೆ. ಸಮಾವೇಶದ ಹೆಸರು ಬದಲಾವಣೆ. ಇವೆಲ್ಲವೂ ಕೋವಿಡ್‌ನಿಂದ ನರಳಿದವರ ಶೋಕದ ಫಲವಲ್ಲವೇ? ಪಾಪದ ಹಣದ ಶಾಪವಲ್ಲವೇ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದೆ.

Live Tv

Leave a Reply

Your email address will not be published.

Back to top button